ಬೆಂಗಳೂರು: ಲಾಕ್ಡೌನ್ಗೂ ಮುನ್ನ ಬೌನ್ಸಿ ಬೈಕ್ ಗಳನ್ನ ಬಳಸಿ ಸುಲಿಗೆ, ಹಾಗೂ ಕಳ್ಳತನ ಮಾಡುತ್ತಿದ್ದ ಆರೋಪಿಗಳ ತಲಘಟ್ಟಪುರ ಪೊಲೀಸರು ಕಾರ್ಯಚರಣೆ ನಡೆಸಿ ಬಂಧಿಸಿದ್ದಾರೆ.
ಸೂರ್ಯ@ಸೂರಿ (18), ಸೈಯ್ಯದ್ ಪುರಾಖಾನ್ ಸೈಯ್ಯಿದ್ @ ಬಾಷಾ (28) ಬಂಧಿತ ಆರೋಪಿಗಳು. ಬಂಧಿತರಿಂದ 80 ಸಾವಿರ ಬೆಲೆಬಾಳುವ 1050 ಗ್ರಾಂ ಬೆಳ್ಳಿ ವಸ್ತುಗಳು, 35 ಸಾವಿರ ಬೆಲೆಬಾಳುವ ಒಂದು ಜುಪಿಟರ್ ದ್ವಿಚಕ್ರ ವಾಹನ, ಒಂದು ಮೊಬೈಲ್ ಫೋನ್, ಎರಡು ಲ್ಯಾಪ್ ಟ್ಯಾಪ್ ಗಳು ಹಾಗೂ ಟಿವಿ ಸೇರಿದಂತೆ ಒಟ್ಟು 2 ಲಕ್ಷದ 46 ಸಾವಿರ ಬೆಲೆಬಾಳುವ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಎ1 ಆರೋಪಿ ಸೂರ್ಯ @ ಸೂರಿ ಮೂಲತಃ ತಮಿಳುನಾಡು ಮೂಲದವಾಗಿದ್ದು, ಈತ ಮದ್ಯವ್ಯಸನಿಯಾಗಿದ್ದು ತನ್ನ ದುಶ್ಚಟಗಳಿಗೆ ಹಣಕ್ಕಾಗಿ ಬೌನ್ಸ್ ವಾಹನ ಬಾಡಿಗೆ ಪಡೆದು ಸುಲಿಗೆ, ಕಳ್ಳತನ ಮಾಡುತ್ತಿದ್ದ, ಎ2 ಸೈಯ್ಯದ್ ಫುರ್ ಖಾನ್ ಸೈಯ್ಯಿದ್@ ಬಾಷಾ ಈತ ಗಾಂಜಾ ವ್ಯಸನಿಯಾಗಿದ್ದು ಬೌನ್ಸ್ ಬೈಕ್ ಗಳನ್ನ ಬಾಡಿಗೆ ಪಡೆದು ಹಣಕ್ಕಾಗಿ ಒಂಟಿ ಮಹಿಳೆಯರನ್ನ ಟಾರ್ಗೆಟ್ ಮಾಡಿ ಸುಲಿಗೆ ಮಾಡುತ್ತಿದ್ದ.
ಆರೋಪಿಗಳ ಬಂಧನದಿಂದ ಬಸವನಗುಡಿ, ಬನಶಂಕರಿ, ಜಯನಗರ, ತಲಘಟ್ಟಪುರ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ಸುಲಿಗೆ, ಕಳ್ಳತನ ಸೇರಿದಂತೆ ಒಟ್ಟು 4 ಪ್ರಕರಣಗಳು ಪತ್ತೆಯಾಗಿವೆ.