ವಿಜಯಪುರ ಸಮೀಪದ ಹಡಗಲಿ ತಾಂಡಾದ ಸರ್ಕಾರಿ ಶಾಲೆಯಲ್ಲಿ ಮುಖ್ಯ ಗುರುಟಿ.ಬಿ. ನರಳೆ ಅವರು ಮಕ್ಕಳಿಗೆ ಜಂತು ಹುಳು ಮಾತ್ರ ನೀಡಿದರು.ಆರೋಗ್ಯ ನಿರೀಣಾಧಿಕಾರಿ ಆರ್​.ಎಸ್​. ಪಾಟೀಲ ಇದ್ದರು. 
ಜಿಲ್ಲೆ

ಜಂತುಹುಳು ನಾಶಕ ಮಾತ್ರೆ ಸೇವನೆ

ಗಿರೀಶ ಸಗರ

ವಿಜಯಪುರ : ಇಲ್ಲಿಗೆ ಸಮೀಪದ ಹಡಗಲಿ ತಾಂಡಾದ ಸಕಾರಿ ಕಿರಿಯ ಪ್ರಾತಮಿಕ ಶಾಲೆಯಲ್ಲಿ ಮಕ್ಕಳಿಗೆ ಜಂತು ಹುಳು ನಾಶಕ ಮಾತ್ರೆ ನೀಡಲಾಯಿತು.

ಮುಖ್ಯಗುರು ಟಿ.ಬಿ. ನರಳೆ ಅಭಿಯಾನಕ್ಕೆ ಚಾಲನೆ ನೀಡಿ, ವಿದ್ಯಾರ್ಥಿಗಳು ಜಂತುಹುಳು ನಾಶಕ ಮಾತ್ರೆ ಸೇವಿಸುವುದರಿಂದ ರಕ್ತ ಹೀನತೆ ತಡೆಯಬಹುದು. ಮಕ್ಕಳಲ್ಲಿ ಏಕಾಗ್ರತೆ ಹೆಚ್ಚಿಸುವ ಜೊತೆಗೆ ಕಲಿಯುವ ಸಾಮರ್ಥ್ಯ ಹೆಚ್ಚಿಸುತ್ತದೆ ಎಂದರು.

ಆರೋಗ್ಯ ನಿರೀಣಾಧಿಕಾರಿ ಆರ್​.ಎಸ್​. ಪಾಟೀಲ ಮಾತನಾಡಿ, ಮಕ್ಕಳಲ್ಲಿ ನಿಶಕ್ತಿ, ಹೊಟ್ಟೆ ನೋವು,ವಾಕರಿಕೆ, ವಾಂತಿ, ರಕ್ತ ಹೀನತೆ, ತೂಕದಲ್ಲಿ ಇಳಿಕೆ ಇವು ಜಂತುಹುಳು ಬಾಧೆಯ ಲಣಗಳಾಗಿದ್ದು, ಇಂತಹ ಲಣಗಳು ತಡೆಗಟ್ಟಿ, ಮಕ್ಕಳು ಆರೋಗ್ಯವಾಗಿರಲು ಜಂತುಹುಳು ಮಾತ್ರೆ ಸೇವಿಸಬೇಕು ಎಂದರು.

ಶಿಕರಾದ ಎ.ಸಿ. ಮೂಲಿಮನಿ,ಪಿ.ಬಿ.ಕುಮಾನಿ, ಎಂ.ಬಿ. ನದ್​ಾ, ಆರ್​.ಎಸ್​. ರಜಪೂತ, ಆರೋಗ್ಯ ಇಲಾಖೆಯ ಎ.ಟಿ. ಸೂರ್ಯವಂಶಿ, ಜ್ಯೋತಿ ಜಾಧವ, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.