ಜಿಲ್ಲೆ

ಗಲಭೆಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ

ರವಿ ಎಸ್. ಬಳೂಟಗಿ

ಶಿರಹಟ್ಟಿ:ಹರಿಯಾಣದ ನುಹ್‌ನಲ್ಲಿ ಜಲಾಭಿಷೇಕ ಯಾತ್ರೆ ವೇಳೆ ಸಂಭವಿಸಿದ ಕೋಮುಗಲಭೆ ಖಂಡಿಸಿ, ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಶಿರಹಟ್ಟಿಯಲ್ಲಿ ವಿಹಿಂಪ, ಬಜರಂಗದಳ ಸಂಘಟನೆ ಕಾರ್ಯಕರ್ತರು ಶುಕ್ರವಾರ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.

ವಿಹಿಂಪ ತಾಲೂಕು ಘಟಕದ ಅಧ್ಯಕ್ಷ ಸುರೇಶ ಅಕ್ಕಿ, ಗೂಳಪ್ಪ ಕರಿಗಾರ ಮಾತನಾಡಿ, ಪ್ರತಿವರ್ಷ ಬಜರಂಗ ದಳದಿಂದ ಹರಿಯಾಣದ ನುಹ್‌ನಲ್ಲಿ ಧಾರ್ಮಿಕ ಯಾತ್ರೆ ಕೈಗೊಳ್ಳಲಾಗುತ್ತದೆ. ಹಿಂದುಗಳ ಶ್ರದ್ಧಾ ಕೇಂದ್ರವಾಗಿದ್ದ ಪಾಂಡವರ ಕಾಲದ ಪ್ರಾಚೀನ ನಲ್ಲಡ ಶಿವಮಂದಿರದ ಯಾತ್ರೆ ವೇಳೆ ಇಸ್ಲಾಮಿಕ್ ಜಿಹಾದಿಗಳು ಹಿಂಸಾಚಾರ ನಡೆಸಿದ್ದಾರೆ. ಬೆಂಕಿ ಅನಾಹುತದ ಜತೆಗೆ ಗುಂಡಿನ ಸುರಿಮಳೆಗರೆದು ಮಕ್ಕಳು, ವೃದ್ಧರು ಹಾಗೂ ಬಜರಂಗದಳದ ಕಾರ್ಯಕರ್ತರು ಗಾಯಗೊಂಡು ವಾಹನಗಳು ಬೆಂಕಿಗಾಹುತಿಯಾಗಿವೆ. ಈ ವೇಳೆ ಇಬ್ಬರು ಗೃಹರಕ್ಷಕರು ವೀರಮರಣ ಹೊಂದಿರುವುದು ಆಘಾತಕಾರಿ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಿಂದೂಗಳ ಮೇಲೆ ನಿರಂತರವಾಗಿ ದಾಳಿ ನಡೆಸುತ್ತಿರುವ ಇಸ್ಲಾಮಿಕ್ ಜಿಹಾದಿಗಳನ್ನು ಮಟ್ಟ ಹಾಕಲು ಅವರ ವಿರುದ್ಧ ಉಗ್ರಕ್ರಮ ಕೈಗೊಂಡು ಘಟನೆಗೆ ಕಾರಣರಾದವರಿಗೆ ಕಠಿಣ ಶಿಕ್ಷೆಗೊಳಪಡಿಸುವಂತೆ ಆಗ್ರಹಿಸಿದರು.

ಶಿರಸ್ತೇದಾರ ಬಿ.ಎಂ. ದೊಡ್ಡಮನಿ ಮನವಿ ಸ್ವೀಕರಿಸಿದರು. ಬಜರಂಗ ದಳದ ಸಂಚಾಲಕ ವೀರಣ್ಣ ಅಂಗಡಿ, ಯಲ್ಲಪ್ಪ ಇಂಗಳಗಿ, ಪರಶುರಾಮ ಡೊಂಕಬಳ್ಳಿ, ಕಲ್ಲಪ್ಪ ಈಳಿಗೇರ, ರಾಜು ಬಾಳಿಗೇರಿ, ಅನಿಲ ಪಾಶ್ಚಾಪೂರ, ಸುನೀಲ ಹೊಳಲ, ಪಿ.ಬಿ. ಛಬ್ಬಿ, ಶಿವರಾಜ ಆಡಿನ, ಎಸ್.ಎಸ್. ಹೊಸೂರ, ಎಂ.ಬಿ. ಕುದರಿ, ಈರಪ್ಪ ಕಲ್ಯಾಣಿ, ಬಸವರಾಜ ತೋಟದ, ಇತರರಿದ್ದರು.