ಇಂಡಿ: ತಾಲೂಕಿನಲ್ಲಿ ಸಮರ್ಪಕವಾಗಿ ಕುಡಿಯುವ ನೀರು ಪೂರೈಸಲು ಕ್ರಮ ಕೈಗೊಳ್ಳಬೇಕೆಂದು ಕಂದಾಯ ಉಪವಿಭಾಗಾಧಿಕಾರಿ ಅನುರಾಧಾ ವಸ್ತ್ರದ ಹೇಳಿದರು.
ಪಟ್ಟಣದ ತಾಪಂ ಕಚೇರಿಯಲ್ಲಿ ಗುರುವಾರ ನಡೆದ ತಾಲೂಕಿನ ಎಲ್ಲ ಪಂಚಾಯಿತಿಗಳ ಪಿಡಿಒ, ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಬೇಸಿಗೆಯಲ್ಲಿ ಜನ- ಜಾನುವಾರುಗಳಿಗೆ ಕುಡಿಯಲು ನೀರಿನ ಅಡೆ-ತಡೆ ಉಂಟಾಗದಂತೆ ನೋಡಿಕೊಳ್ಳಬೇಕು. ಅಗತ್ಯ ಇದ್ದೆಡೆ ಕೂಡಲೇ ನೀರು ಪೂರೆಸಬೇಕೆಂದು ತಿಳಿಸಿದರು.
ತಾಪಂ ಇಒ ನಂದೀಪ ರಾಠೋಡ ಮಾತನಾಡಿ, ಕುಡಿಯುವ ನೀರಿನ ಅನುದಾನದ ಮಾಹಿತಿ ಪಡೆದು ಗ್ರಾಮ ಹಾಗೂ ವಸತಿಗಳಲ್ಲಿ ನೀರಿನ ಸಮಸ್ಯೆ ಆಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.
ಸಹಾಯಕ ನಿರ್ದೇಶಕ ಪ್ರಕಾಶ ರಾಠೋಡ, ಪಿಡಿಒಗಳಾದ ಮಲ್ಲಿಕಾರ್ಜುನ ನಿಲಂಗಿ, ಬಸವರಾಜ ಬಬಲಾದ, ಸಿದರಾಯ ಬಿರಾದಾರ, ಜಬ್ಬಾರಲಿ ಹಳ್ಳಿ, ಉಮೇಶ ಹೂಗಾರ, ಮಹೇಶ ನಾಯಕ, ಮಹೇಶ ರಾಠೋಡ, ಶಿವು ಪೂಜಾರಿ, ಶೋಭಾ ಹೊರಪೇಟೆ, ಆಶಾ ನಾಯಕ ಇದ್ದರು.