ಸರ್ಕಾರಿ ಶಾಲೆಗಳಲ್ಲಿ ಖಾಲಿಯಿರುವ ಶಿಕ್ಷಕರ ಹುದ್ದೆ ಭರ್ತಿ ಮಾಡುವಂತೆ ಒತ್ತಾಯಿಸಿ ರಾಯಚೂರಿನಲ್ಲಿ ಶಿಕ್ಷಣ ಖಾತೆ ಸಚಿವ ಮಧು ಬಂಗಾರಪ್ಪಗೆ ಎಸ್‌ಎ್ಐನಿಂದ ಶುಕ್ರವಾರ ಮನವಿ ಸಲ್ಲಿಸಲಾಯಿತು. ಎಸ್‌ಎ್ಐ ಜಿಲ್ಲಾಧ್ಯಕ್ಷ ರಮೇಶ ವೀರಾಪುರ, ವಿವಿಧ ಸಂಘಟನೆ ಪದಾಕಾರಿಗಳಾದ ಶಿವರಾಜ, ಚಂದ್ರಶೇಖರ ಎಲ್ಲೇರಿ, ಶಿವಕುಮಾರ ಮ್ಯಾಗಳಮನಿ, ಶಬ್ಬೀರ್ ಜಾಲಹಳ್ಳಿ, ಅಯ್ಯಪ್ಪಸ್ವಾಮಿ, ಮಹಾಲಿಂಗ ದೊಡ್ಡಮನಿ, ರಾಘವೇಂದ್ರ, ಚಿದಾನಂದ ಕರಿಗೂಳಿ ಇದ್ದರು. 
ಜಿಲ್ಲೆ

ಶಿಕ್ಷಕರ ಖಾಲಿ ಹುದ್ದೆಗಳ ಭರ್ತಿಗೆ ಕ್ರಮಕೈಗೊಳ್ಳಿ

ರಾಯಚೂರು: ಜಿಲ್ಲೆಯಲ್ಲಿನ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿನ ಶಿಕ್ಷಕರ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು. ಹುದ್ದೆಗಳನ್ನು ಭರ್ತಿ ಮಾಡುವವರೆಗೆ ವರ್ಗಾವಣೆಗೊಂಡಿರುವ ಶಿಕ್ಷಕರನ್ನು ಬಿಡುಗಡೆ ಮಾಡಬಾರದು ಎಂದು ಎಸ್‌ಎ್ಐ ಹಾಗೂ ಪ್ರಗತಿಪರ ಸಂಘಟನೆಗಳಿಂದ ಶಿಕ್ಷಣ ಖಾತೆ ಸಚಿವ ಮಧು ಬಂಗಾರಪ್ಪಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು.
ಶಿಕ್ಷಕರ ವರ್ಗಾವಣೆಯಿಂದ 100ಕ್ಕೂ ಹೆಚ್ಚು ಶಾಲೆಗಳಲ್ಲಿ ಕಾಯಂ ಶಿಕ್ಷಕರಿಲ್ಲದಂತಾಗಿದ್ದು, ವಿದ್ಯಾರ್ಥಿಗಳ ಬೋಧನೆಗೆ ಸಮಸ್ಯೆಯಾಗಿದೆ. ವರ್ಗಾವಣೆಗೊಂಡ ಶಿಕ್ಷಕರನ್ನು ಕರ್ತವ್ಯದಿಂದ ಬಿಡುಗಡೆ ಮಾಡದಂತೆ ಆದೇಶವಿದ್ದರೂ ಇಲಾಖೆ ಅಕಾರಿಗಳು ಅನಕೃತವಾಗಿ ಶಿಕ್ಷಕರನ್ನು ಬಿಡುಗಡೆ ಮಾಡುತ್ತಿದ್ದಾರೆ.
ಬಿಇಒಗಳು ಸಚಿವರ ಆದೇಶ ಉಲ್ಲಂಸಿ ಶಿಕ್ಷಕರಿಂದ ಹಣ ಪಡೆದು ಶಿಕ್ಷಕರನ್ನು ಕರ್ತವ್ಯದಿಂದ ಬಿಡುಗಡೆ ಮಾಡುತ್ತಿದ್ದು, ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ಅಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕು. ಶೈಕ್ಷಣಿಕ ವರ್ಷ ಪೂರ್ಣಗೊಳ್ಳುವವರೆಗೆ ವರ್ಗಾವಣೆಗೊಂಡ ಶಿಕ್ಷಕರನ್ನು ಬಿಡುಗಡೆ ಮಾಡಬಾರದು. ಶೀಘ್ರದಲ್ಲಿ ಕಾಯಂ ಶಿಕ್ಷಕರ ನೇಮಕಕ್ಕೆ ಕ್ರಮಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಎಸ್‌ಎ್ಐ ಜಿಲ್ಲಾಧ್ಯಕ್ಷ ರಮೇಶ ವೀರಾಪುರ, ವಿವಿಧ ಸಂಘಟನೆ ಪದಾಕಾರಿಗಳಾದ ಶಿವರಾಜ, ಚಂದ್ರಶೇಖರ ಎಲ್ಲೇರಿ, ಶಿವಕುಮಾರ ಮ್ಯಾಗಳಮನಿ, ಶಬ್ಬೀರ್ ಜಾಲಹಳ್ಳಿ, ಅಯ್ಯಪ್ಪಸ್ವಾಮಿ, ಮಹಾಲಿಂಗ ದೊಡ್ಡಮನಿ, ರಾಘವೇಂದ್ರ, ಚಿದಾನಂದ ಕರಿಗೂಳಿ ಉಪಸ್ಥಿತರಿದ್ದರು.