ಸಿರವಾರದ ಹೊರವಲಯದಲ್ಲಿ ಕುಡಿವ ನೀರಿನ ಕೆರೆ ನಿರ್ಮಾಣಕ್ಕೆ ಶಾಸಕ ಹಂಪಯ್ಯ ನಾಯಕ ಸ್ಥಳ ಪರಿಶೀಲಿಸಿದರು.ಪಪಂ ಅಧ್ಯಕ್ಷ ವೈ.ಭೂಪನಗೌಡ, ಗ್ಯಾರಂಟಿ ಸಮಿತಿ ತಾಲೂಕು ಅಧ್ಯಕ್ಷ ಬ್ರಿಜೇಶ್ ಪಾಟೀಲ್, ಪಪಂ ಸದಸ್ಯ ಸೂರಿ ದುರುಗಣ್ಣ ಇತರರಿದ್ದರು. 
ಜಿಲ್ಲೆ

ಕುಡಿವ ನೀರಿನ ಕೆರೆ ನಿರ್ಮಾಣಕ್ಕೆ ಕ್ರಮವಹಿಸಿ

ನರೇಶ್ ಕುಮಾರ್

ಸಿರವಾರ: ಪಟ್ಟಣಕ್ಕೆ ಕುಡಿವ ನೀರಿನ ಪೂರೈಸುವ ಹಿನ್ನೆಲೆಯಲ್ಲಿ ಹೊರ ವಲಯದಲ್ಲಿ ಕೆರೆ ನಿರ್ಮಾಣಕ್ಕೆ ಮಂಗಳವಾರ ಶಾಸಕ ಜಿ.ಹಂಪಯ್ಯ ನಾಯಕ ಹಾಗೂ ಅಧಿಕಾರಿಗಳು ಸ್ಥಳ ಪರಿಶೀಲಿಸಿದರು.

ದೇವದುರ್ಗ ರಸ್ತೆಯಲ್ಲಿರುವ ಸರ್ವೇ ನಂ. 95ರಲ್ಲಿ ಇರುವ ಸರ್ಕಾರಿ ಜಾಗ ಪರಿಶೀಲಿಸಿ ಪೂರ್ಣ ಮಾಹಿತಿ ಪಡೆದ ಶಾಸಕರು, ಅಗತ್ಯವಿರುವ ಎಲ್ಲ ದಾಖಲೆಗಳನ್ನು ಸಿದ್ಧ ಮಾಡಿಕೊಳ್ಳಿ ಎಂದು ತಹಸೀಲ್ದಾರ ರವಿ ಎಸ್.ಅಂಗಡಿಗೆ ಸೂಚಿಸಿದರು.

ಈಗಾಗಲೇ ಪಟ್ಟಣದ ಕೆಲ ವಾರ್ಡ್‌ಗಳಲ್ಲಿ ಕುಡಿವ ನೀರಿನ ಸಮಸ್ಯೆ ಹೆಚ್ಚಿದೆ. ಹೊಸ ಕೆರೆ ನಿರ್ಮಾಣ ಮಾಡುವುದರಿಂದ ಪಟ್ಟಣ ಜನರ ಜಲ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ ಎಂದರು. ಪಪಂ ಅಧ್ಯಕ್ಷ ವೈ.ಭೂಪನಗೌಡ, ಗ್ಯಾರಂಟಿ ಸಮಿತಿ ತಾಲೂಕು ಅಧ್ಯಕ್ಷ ಬ್ರಿಜೇಶ್ ಪಾಟೀಲ್, ಪಪಂ ಸದಸ್ಯ ಸೂರಿ ದುರುಗಣ್ಣ, ಮುಖಂಡರಾದ ಶಿವಶರಣ ಸಾಹುಕಾರ್ ಅರಕೇರಿ, ರಮೇಶ ದರ್ಶನಕರ್ ಇತರರಿದ್ದರು.