ಎನ್.ಆರ್.ಪುರ: ಈ ಬಾರಿ ನಿರೀಕ್ಷೆಗಿಂತ ಹೆಚ್ಚಿನ ಮಳೆಯಾಗುತ್ತಿದ್ದು, ಕ್ಷೇತ್ರದಲ್ಲಿ ಅನಾಹುತಗಳು ಸಂಭವಿಸದಂತೆ ಎಚ್ಚರಿಕೆ ವಹಿಸಬೇಕು. ಎಲ್ಲ ಇಲಾಖೆ ಅಧಿಕಾರಿಗಳು ಮೊಬೈಲ್ ಸ್ವಿಚ್ ಆ್ ಮಾಡದೆ ದಿನದ 24 ಗಂಟೆ ಕಾರ್ಯನಿರ್ವಹಿಸಬೇಕು ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.
ತಾಪಂ ಸಾಮರ್ಥ್ಯ ಸೌಧದಲ್ಲಿ ಅತಿವೃಷ್ಠಿ ಮುಂಜಾಗ್ರತಾ ಕ್ರಮದ ಬಗ್ಗೆ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿ, ಕಳೆದ ವರ್ಷ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮ ಕೈಗೊಂಡ ಹಿನ್ನೆಲೆ ಹಾಗೂ ಎಲ್ಲ ಇಲಾಖೆ ಅಧಿಕಾರಿಗಳ ಸಹಕಾರದಿಂದ ಹೆಚ್ಚು ಅನಾಹುತ ಸಂಭವಿಸಿಲ್ಲ. ಈ ಬಾರಿ ಅಧಿಕ ಮಳೆಯಾಗುವ ಸಂಭವ ರುವುದರಿಂದ ಎಲ್ಲ ಇಲಾಖೆ ಅಧಿಕಾರಿಗಳು ಇನ್ನು ಮೂರು ತಿಂಗಳು ಶ್ರಮಿವಹಿಸಬೇಕು ಎಂದರು.
ಕ್ಷೇತ್ರದಲ್ಲಿ ಅಪಾಯದ ಸ್ಥಿತಿಯಲ್ಲಿರುವ ಮರಗಳನ್ನು ತೆರವು ಮಾಡಲು ಅರಣ್ಯ ಇಲಾಖೆಗೆ ಮಾಹಿತಿ ನೀಡಬೇಕು ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ತೆರವು ಮಾಡದಿದ್ದರೆ ಅನಾಹುತ ನಡೆದರೆ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧವೇ ಎ್ಐಆರ್ ದಾಖಲಿಸಲಾಗುವುದು. ಮಳೆ, ಗಾಳಿ ಹೆಚ್ಚಾಗುವ ಮುನ್ನವೇ ರಸ್ತೆಗೆ ಬಾಗಿರುವ, ಶಾಲೆ ,ಅಂಗನವಾಡಿ ಕೇಂದ್ರಗಳ ಅಕ್ಕಪಕ್ಕದಲ್ಲಿ ಬೀಳುವ ಸ್ಥಿತಿಯಲ್ಲಿರುವ ಮರಗಳನ್ನು ತೆರವುಗೊಳಿಸಬೇಕು ಎಂದು ಹೇಳಿದರು.
ಅತಿವೃಷ್ಠಿ ಸಂಭವಿಸಿದಾಗ ತುರ್ತು ಕ್ರಮಕೈಗೊಳ್ಳಲು ಬೇಕಾಗುವ ಪರಿಕರಗಳ ಪಟ್ಟಿಯನ್ನು ಮುಂಚಿತವಾಗಿ ತಯಾರು ಮಾಡಿಟ್ಟುಕೊಳ್ಳಬೇಕು. ಅತಿವೃಷ್ಠಿ ಸಂಭವಿಸಿದಾಗ ಪರಿಕರಗಳಿರಲಿಲ್ಲ ಎಂಬ ಸಬೂಬು ಹೇಳಬಾರದು. ಮೆಸ್ಕಾಂ, ಜಿಲ್ಲಾ ಪಂಚಾಯಿತಿ ಇಂಜಿನಿಯರಿಂಗ್, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ನಿಮ್ಮ ವ್ಯಾಪ್ತಿಯ ಗುತ್ತಿಗೆದಾರರು, ಜೆಸಿಬಿ ಮಾಲೀಕರು, ಈಜುಗಾರರು, ಮುಳುಗು ತಜ್ಞರು, ಹಾವು ಹಿಡಿಯುವವರು, ಟ್ರಾೃಕ್ಟರ್ ಮಾಲೀಕರ ಮಾಹಿತಿ, ದೂರವಾಣಿ ಸಂಖ್ಯೆಗಳನ್ನು ಸಂಗ್ರಹಿಸಿಟ್ಟುಕೊಳ್ಳಬೇಕು ಎಂದು ಸೂಚಿಸಿದರು.