ಜಿಲ್ಲೆ

ಬಾಲ್ಯವಿವಾಹ ತಡೆಗೆ ಅಗತ್ಯ ಕ್ರಮ ಕೈಗೊಳ್ಳಿ

ಎಂ.ಎಸ್​.ಹಿರೇಮಠ ಬೆಳಗಾವಿ

ಮೂಡಲಗಿ: ತಾಲೂಕಿನ ಹುಣಶ್ಯಾಳ ಪಿಜಿ ಗ್ರಾಮ ಪಂಚಾಯಿತಿಗೆ ಜಿಪಂ ಸಿಇಒ ರಾಹುಲ ಶಿಂಧೆ ಭೇಟಿ ನೀಡಿ ಗ್ರಾಪಂ ಅಧ್ಯರು, ಉಪಾಧ್ಯರು ಹಾಗೂ ಸದಸ್ಯರೊಂದಿಗೆ ಮಂಗಳವಾರ ಸಂವಾದ ನಡೆಸಿದರು.

ಬಾಲ್ಯ ವಿವಾಹದ ಕುರಿತಾಗಿ ಜನರಲ್ಲಿ ಜಾಗೃತಿ ಮೂಡಿಸುವುದು. ಹೆಣ್ಣು ಮಕ್ಕಳ ಶಿಣಕ್ಕೆ ಹೆಚ್ಚಿನ ಆದ್ಯತೆ ನೀಡುವ ಜತೆಗೆ ಬಾಲ್ಯವಿವಾಹ ತಡೆಗೆ ಗ್ರಾಮ ಪಂಚಾಯಿತಿಗಳು ಅಗತ್ಯ ಕ್ರಮಕೈಗೊಳ್ಳಬೇಕೆಂದು ಜಿಪಂ ಸಿಇಒ ರಾಹುಲ ತಿಳಿಸಿದರು.

ಗ್ರಾಮೀಣ ಭಾಗದ ಮಕ್ಕಳು ಸಹ ಉನ್ನತ ಹುದ್ದೆ ಅಲಂಕರಿಸಬೇಕು. ಈ ದಿಸೆಯಲ್ಲಿ ಗ್ರಾಪಂಗಳು ಗಮನ ಹರಿಸಬೇಕು. ಅಲ್ಲದೆ, ಸ್ಥಳಿಯ ಸರ್ಕಾರಿ ಶಾಲೆಗಳಿಗೆ ಅಗತ್ಯ ಸೌಲಭ್ಯ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಬಳಿಕ ಗ್ರಂಥಾಲಯ, ಹಳ್ಳಿ ಸಂತೆ, ಸರ್ಕಾರಿ ಶಾಲೆ ಹಾಗೂ ಪ್ರವಾಹ ಪೀಡಿತ ಪ್ರದೇಶ ವೀಸಿದರು. ವಡೇರಹಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಸತಿ ನಿಲಯ ಹಾಗೂ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಮಕ್ಕಳೊಂದಿಗೆ ಸಂವಾದ ನಡೆಸಿದರು.

ತಾಪಂ ಇಒ ಎ್​.ಜಿ.ಚಿನ್ನನವರ, ಎಇಇ ಉದಯಕುಮಾರ ಕಾಂಬಳೆ, ಬಿಇಒ ಅಜಿತ ಮನ್ನಿಕೇರಿ, ಸಿಡಿಪಿಒ ಯಲ್ಲಪ್ಪ ಗದಾಡಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಅಶೋಕ ಮಲಬನ್ನವರ, ತಾಪಂ ಸಹಾಯಕ ನಿರ್ದೇಶಕ ಸಂಗಮೇಶ ರೊಡ್ಡನ್ನವರ, ಚಂದ್ರಶೇಖರ ಬಾರ್ಕಿ, ಪಿಡಿಒ ಶಿವಾನಂದ ಗುಡಸೆ, ತಾಂತ್ರಿಕ ಸಂಯೋಜಕ ನಾರ್ಗಾಜುನ ಇಳಿಗೇರ, ನಿರಂಜನ ಮಲ್ಲವ್ವಗೋಳ, ಮೊಹಮ್ಮದ್​ ಇತರರಿದ್ದರು.