ಕೊರಟಗೆರೆ: ಬರಪೀಡಿತ ಬಯಲುಸೀಮೆ ಪ್ರದೇಶಗಳಿಗೆ ನೀರಾವರಿ ಯೋಜನೆಗಳು ಶಾಶ್ವತ ಪರಿಹಾರದ ಕೆಲಸಗಳಾಗಿದ್ದು, ಯೋಜನೆಗಳು ತ್ವರಿತವಾಗಿ ಮುಗಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಡಾ.ಜಿ ಪರಮೇಶ್ವರ ಹೇಳಿದರು.
ಬ್ರಹ್ಮಸಂದ್ರ ಮತ್ತು ಇತರ ಹತ್ತು ಗ್ರಾಮಗಳಿಗೆ ಎತ್ತಿನಹೊಳೆ ಯೋಜನೆಯಲ್ಲಿ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಸುಮಾರು 9.3 ಕೋಟಿ ರೂಪಾಯಿ ವೆಚ್ಚದ ಬಹುಗ್ರಾಮ ಕುಡಿಯುವ ನೀರಿನ ಯೋಜನಾ ಟಕಗಳನ್ನು ಗುರುವಾರ ಉದ್ಘಾಟಿಸಿ ವಾತನಾಡಿದರು.
ನೀರಾವರಿ ಯೋಜನೆಯಲ್ಲಿ ನೀರಾವರಿ ತಜ್ಞ ಪರಮಶಿವಯ್ಯ ಪಾತ್ರ ಮಹತ್ವದಾಗಿದೆ. ಮಲೆನಾಡಿನಲ್ಲಿ 400 ಟಿಎಂಸಿ ನೇತ್ರಾವತಿ ನದಿ ನೀರು ವ್ಯರ್ಥವಾಗಿ ಸಮುದ್ರಕ್ಕೆ ಹರಿದುಹೋಗುತ್ತಿದ್ದನ್ನು ತಡೆಗಟ್ಟಿ ನೀರಿಲ್ಲದೇ ಬೆಂಗಾಡಾಗಿರುವ ಬಯಲು ಪ್ರದೇಶಗಳಾದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾವಾಂತರ, ತುಮಕೂರು ಜಿಲ್ಲೆಗಳಿಗೆ ಹರಿಸುವ ಮಹತ್ತರ ಯೋಜನೆಯನ್ನು ಕೈಗೊಂಡರು. ಆದರೆ ಮಂಗಳೂರು ಭಾಗದ ಜನರ ವಿರೋಧದಿಂದ ಈ ಯೋಜನೆ ಕೈಬಿಡಲಾಯಿತು. ನಂತರ ಎತ್ತಿನಹೊಳೆ ಯೋಜನೆ ರೂಪಿಸಲಾಗಿತ್ತು. ಯೋಜನೆಗೆ ಹಿಂದಿನ ಸಿಎಂ ಸಿದ್ದರಾಮಯ್ಯ ಮತ್ತು ಸಮ್ಮಿಶ್ರ ಸರ್ಕಾರದ ಕುವಾರಸ್ವಾಮಿ ಸರ್ಕಾರದಲ್ಲಿ ಸಮಯದಲ್ಲಿ ಸಾವಿರಾರು ಕೋಟಿ ರೂಪಾಯಿ ಮಂಜೂರು ವಾಡಿದ್ದು, ಇನ್ನು ಹಾಲಿ ಸರ್ಕಾರ ಯೋಜನೆ ಮುಂದುವರಿಸಿಕೊಂಡು ಹೋಗಬೇಕು ಎಂದರು.
ಎತ್ತಿನಹೊಳೆ ಯೋಜನೆಯಲ್ಲಿ ಬ್ರಹ್ಮಸಂದ್ರ ಸೇರಿ 10 ಹಳ್ಳಿಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಸೇರಿಸಲು ಮುಖ್ಯ ಕಾರ್ಯಪಾಲಕ ಇಂಜಿನಿಯರ್‌ಗೆ 2017 ರಲ್ಲಿ ಮನವಿ ಮಾಡಲಾಗಿತ್ತು. ಈ ಯೋಜನೆಗೆ ಸಂಸದ ಜಿ.ಎಸ್ ಬಸವರಾಜು ಶ್ರಮ, ಅಗತ್ಯ ಇದ್ದು ನಮ್ಮೊಂದಿಗೆ ಈ ಯೋಜನೆಗೆ ಕೈಜೋಡಿಸಲಿದ್ದಾರೆ ಎಂದರು. ಕಾರ್ಯಪಾಲಕ ಇಂಜಿನಿಯರ್ ಚನ್ನವೀರಸ್ವಾಮಿ, ಎಇಇ ಲಲಿತೇಶ್, ಗ್ರಾಮಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರಕೆರೆ ಶಂಕರ್, ನಗರ ಟಕದ ಅಧ್ಯಕ್ಷ ಕೋಡ್ಲಹಳ್ಳಿ ಅಶ್ವತ್ಥನಾರಾಯಣ್, ಕೆಪಿಸಿಸಿ ಕಾರ್ಯದರ್ಶಿ ದಿನೇಶ್ ಬಿ.ಎಸ್, ಗ್ರಾ.ಪಂ ಅಧ್ಯಕ್ಷ ನಜೀರ್, ತಾಪಂ ಸದಸ್ಯ ವಿಜಯಕುವಾರ್ ಮತ್ತಿತರರು ಇದ್ದರು.
ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಲ್ಲಿ ಅರ್ಧ ಟಿಎಂಸಿ ನೀರಿನ ಅಗತ್ಯ ಇದ್ದು, ಈ ಯೋಜನೆಯನ್ನು ಪೂರ್ಣಗೊಳಿಸುವ ಹೊಣೆ ಎಲ್ಲರ ಮೇಲಿದ್ದು, ಪಕ್ಷ ಭೇದ ಮರೆತು ಎಲ್ಲರೂ ಒಟ್ಟಿಗೆ ದುಡಿಯೋಣ. ಜಿ.ಎಸ್ .ಬಸವರಾಜು ಸಂಸದ