ಜಿಲ್ಲೆ

ಎಡಿಜಿಪಿ ಚಂದ್ರಶೇಖರ ಮೇಲೆ ಶಿಸ್ತು ಕ್ರಮ ಜರುಗಿಸಿ

ಬಸವರಾಜ ವೀರಪ್ಪ ಗರಗ

ಭಟ್ಕಳ: ಕರ್ನಾಟಕ ಲೋಕಾಯುಕ್ತ ವಿಶೇಷ ತನಿಖಾದಳ ಮುಖ್ಯಸ್ಥ ಎಡಿಜಿಪಿ ಎಂ. ಚಂದ್ರಶೇಖರ ಅವರನ್ನು ಕೂಡಲೇ ಸೇವೆಯಿಂದ ಅಮಾನತುಗೊಳಿಸಿ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಜಾತ್ಯತೀತ ಜನತಾ ದಳ ಭಟ್ಕಳ ಘಟಕದಿಂದ ಉಪವಿಭಾಗಾಧಿಕಾರಿಗಳ ಮೂಲಕ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಗುರುವಾರ ಮನವಿ ಸಲ್ಲಿಸಿದರು

ರಾಜ್ಯದಲ್ಲಿ ಲೋಕಾಯುಕ್ತ ವಿಶೇಷ ತನಿಖಾ ಮುಖ್ಯಸ್ಥ ಎಡಿಜಿಪಿ ಆಗಿ ಕಾರ್ಯನಿರ್ವಸುತ್ತಿರುವ ಎಂ. ಚಂದ್ರಶೇಖರ ಅವರ ಭ್ರಷ್ಟಚಾರ ಸುಲಿಗೆ, ದುರ್ನಡತೆ ಮುಂತಾದ ಕ್ರಿಮಿನಲ್ ಕೇಸ್​ಗಳಲ್ಲಿ ಭಾಗಿಯಾಗಿರುವವರನ್ನು ಅಮಾನತುಗೊಳಿಸಿ ಹಾಗೂ ಉನ್ನತ ಮಟ್ಟದ ತನಿಖೆ ನಡೆಸಿ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಜೆಡಿಎಸ್ ಪಕ್ಷ ಭಟ್ಕಳ ಘಟಕ ಆಗ್ರಹಿಸಿದೆ.

ಭಟ್ಕಳ ಜೆಡಿಎಸ್ ಅಧ್ಯಕ್ಷ ಈಶ್ವರ ನಾಯ್ಕ, ಜೆಡಿಎಸ್ ಮುಖಂಡ ಪಾಂಡು ನಾಯ್ಕ, ಶಂಕರ ನಾಯ್ಕ ಬೆಟ್ಕೂರು, ಕೆ.ಪಿ. ಪೈ, ದೇವಯ್ಯ ನಾಯ್ಕ, ಇತರರು ಉಪಸ್ಥಿತರಿದ್ದರು.