ಜಿಲ್ಲೆ

ತೆಂಗಿಗೆ ರೋಗ ಬಾರದಂತೆ ಎಚ್ಚರ ವಹಿಸಿ

ಪ್ರಸಿನ್ ಕೆ.ಆರ್

ಮದ್ದೂರು: ತಾಲೂಕಿನ ರೈತರ ಆರ್ಥಿಕ ಮೂಲ ತೆಂಗುಬೆಳೆಯಾಗಿದ್ದು, ತೆಂಗಿನ ಮರಗಳಿಗೆ ಯಾವುದೇ ರೀತಿಯ ಕೀಟ ಹಾಗೂ ರೋಗ ಬಾಧೆ ಬಾರದಂತೆ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಶಾಸಕ ಕೆ.ಎಂ.ಉದಯ್ ಹೇಳಿದರು.

2024-25ನೇ ಸಾಲಿನ ಜಿಲ್ಲಾ ಪಂಚಾಯತ್ ಯೋಜನೆ ಅಡಿ ತೋಟಗಾರಿಕೆ ಕಟ್ಟಡಗಳು ಕಾರ್ಯಕ್ರಮದಲ್ಲಿ ಪಟ್ಟಣ ತೋಟಗಾರಿಕೆ ಇಲಾಖೆ ಕಟ್ಟಡದ ಸಮೀಪದ ನಿರ್ಮಿಸಿರುವ ಗೋನಿಯೋಸಿಸ್ ಪರೋಪ ಜೀವಿ ಉತ್ಪಾದನಾ ಪ್ರಯೋಗ ಶಾಲೆಯನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.

ತೊಟಗಾರಿಕೆ ಇಲಾಖೆಯ ಅಧಿಕಾರಿಗಳು ನಿಗದಿತ ಸಮಯಕ್ಕೆ ತೆಂಗಿಗೆ ಯಾವುದೇ ರೀತಿ ರೋಗ ಬಾರದಂತೆ ಕೀಟನಾಶಕ ಸಿಂಪಡಣೆ, ಬೇವಿನ ಹಿಂಡಿ ವಿತರಣೆ ಹಾಗೂ ರೈತರಿಗೆ ವಿಶೇಷ ಕಾರ್ಯಾಗಾರ ಹಾಗೂ ಪ್ರಾತ್ಯಕ್ಷಿಕೆಗಳನ್ನು ಹಮ್ಮಿಕೊಂಡು ರೋಗದ ಬಗ್ಗೆ ಅರಿವು ಮೂಡಿಸಬೇಕೆಂದರು.

ಪರೋಪ ಜೀವಿ ಉತ್ಪಾದನಾ ಕ್ರಮಗಳ ಕುರಿತು ಮಾಹಿತಿ ಪಡೆದು, ಪ್ರಯೋಗ ಶಾಲೆಯನ್ನು ಪರಿಶೀಲಿಸಿದರು. ಉತ್ಪಾದಿಸುತ್ತಿರುವ ಪರೋಪ ಜೀವಿಗಳನ್ನು ರೈತರು ತೆಂಗಿನಲ್ಲಿ ಕಪ್ಪು ತಲೆ ಹುಳುವನ್ನು ನಿಯಂತ್ರಿಸಲು ಉಪಯೋಗಿಸಿಕೊಳ್ಳಬೇಕೆಂದು ಮನವಿ ಮಾಡಿದರು.

ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯ ನಿರ್ದೇಶಕ ಕೆ.ಎಂ.ರೇಖಾ ಮಾತನಾಡಿ, 2025-26ರ ನರೇಗಾ ಕ್ರಿಯಾ ಯೋಜನೆಯಲ್ಲಿ ಸೇರ್ಪಡೆಯಾಗಿರುವ ರೈತರು ಇಲಾಖಾಧಿಕಾರಿಗಳನ್ನು ಸಂಪರ್ಕಿಸಿ ನರೇಗಾ ಯೋಜನೆ ಅಡಿ ಸಿಗುವ ಸೌಲಭ್ಯವನ್ನು ಪಡೆದುಕೊಳ್ಳುವುದು.

ಹನಿ ನೀರಾವರಿ ಯೋಜನೆ ಅಡಿ ಶೇ.90ರ ಸಹಾಯಧನವಿದ್ದು (ಅಡಿಕೆ ಬೆಳೆ ಹೊರತುಪಡಿಸಿ)ಇದರ ಉಪಯೋಗವನ್ನು ಪಡೆದುಕೊಳ್ಳಬೇಕೆಂದರು ಎಂದರು.

ತಾಳೆ ಬೆಳೆ ನಾಟಿ ಮಾಡಲು ಆಸಕ್ತರಿರುವ ರೈತರು ಗಿಡಗಳನ್ನು ಇಲಾಖೆಯಿಂದ ಉಚಿತವಾಗಿ ಪಡೆದು ನಾಟಿ ಮಾಡಿ ನಿರ್ವಹಣೆ ಮತ್ತು ಇತರೆ ಸೌಲಭ್ಯಗಳಿಗೆ ಸಹಾಯಧನ ಪಡೆಯಬಹುದಾಗಿರುತ್ತದೆ. ಕಪ್ಪು ತಲೆ ಹುಳು ಬಾಧಿತ ತೆಂಗಿನ ಮರಗಳಲ್ಲಿ ಹುಳುಭಾದಿತ ಗರಿಗಳನ್ನು ಕತ್ತರಿಸಿ ಪರೋಪ ಜೀವಿಗಳನ್ನು ಬಿಡುಗಡೆ ಮಾಡಿಸಿಕೊಳ್ಳಬಹುದು ಎಂದರು. ದಿವ್ಯ, ಸಂಪತ್‌ಕುಮಾರ್, ನಿತಿನ್, ಶಿವಪ್ರಸಾದ್ ಸಿಬ್ಬಂದಿ ಇದ್ದರು.