ತಲ್ಲೂರ: ಮನುಷ್ಯನ ಪಂಚೇಂದ್ರಿಯಗಳಲ್ಲಿ ಕಣ್ಣು ಪ್ರಮುಖವಾದುದು. ಹೀಗಾಗಿ, ಪ್ರತಿಯೊಬ್ಬರೂ ಕಣ್ಣಿನ ತಪಾಸಣೆ ಜತೆಗೆ ಸಂರಕ್ಷಣೆಗೆ ಆದ್ಯತೆ ನೀಡಬೇಕು ಎಂದು ಗ್ರಾಪಂ ಉಪಾಧ್ಯೆ ರುಕ್ಮೀಣಿ ನಾಯ್ಕರ ಹೇಳಿದರು.ಸಮೀಪದ ಜಾಲಿಕಟ್ಟಿ ಗ್ರಾಮದ ಶ್ರೀ ಮಾರುತಿ ದೇವಸ್ಥಾನ ಆವರಣದಲ್ಲಿ ತಲ್ಲೂರ ಗ್ರಾಮ ಪಂಚಾಯಿತಿ ಆಶ್ರಯದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ನೇತ್ರ ತಪಾಸಣೆ ಉಚಿತ ಶಿಬಿರದಲ್ಲಿ ಮಾತನಾಡಿದರು. ಗ್ರಾಪಂ ಸದಸ್ಯ ಚನ್ನಯ್ಯ ಪೂಜೇರ ಮಾತನಾಡಿ, ಯೋಗ, ಧ್ಯಾನ ಸೇರಿ ವಿವಿಧ ಕ್ರಿಯಾತ್ಮಕ ಚಟುವಟಿಕೆ ರೂಢಿಸಿಕೊಳ್ಳಬೇಕು ಎಂದು ತಿಳಿಸಿದರು. ಮುಖಂಡ ತಿಪ್ಪನಾಯ್ಕ ಕಡಬಿ, ಮಲನಾಯ್ಕ ನಾಯ್ಕರ, ಮಲ್ಲಿಕಾರ್ಜುನ ಯಡಳ್ಳಿ, ಮಹಾದೇವಯ್ಯ ಅಟಿಗಲ್ಲ, ಮಹಾಂತೇಶ ಗೌಡರ, ಮಹಾದೇವಯ್ಯ ಪೂಜೇರ, ಚನ್ನಪ್ಪ ಕಂಬಾರ, ಬಸವರಾಜ ಮನಿಕಟ್ಟಿ, ಗಂಗಯ್ಯ ಗೌಡರ, ಬಾಳು ನಾಯ್ಕರ, ಸಾವಿತ್ರಿ ಬಂಡ್ರೊಳಿ, ಪಾರವ್ವ ಬಡಿಗೇರ, ಸದೇಪ್ಪ ಬಂಡ್ರೊಳಿ, ವಿಠ್ಠಲ ಹಣಬರ ಇತರರಿದ್ದರು.