ಬನ್ನೂರಿನಲ್ಲಿ ಕಣ್ಣಿನ ಉಚಿತ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು. ಡಾ.ಮಹೇಂದ್ರಸಿಂಗ್ ಕಾಳಪ್ಪ, ಕೆ.ರಾಜೇಶ್‌ಕುಮಾರ್, ವಿಜಯ್‌ಕುಮಾರ್, ಡಾ.ಅಪರ್ಣಾ ಹೊಸೂರು, ಡಾ.ನಜ್ಜೀ, ಸಂತೋಷ್‌ಕುಮಾರಿ, ವನ್ಯಾ, ವಿರಾಟ್, ಹರೀಣಿ, ಶೀಲಾ ಇತರರು ಇದ್ದರು. 
ಜಿಲ್ಲೆ

ಕಣ್ಣಿನ ಆರೋಗ್ಯದ ಕಾಳಜಿ ವಹಿಸಿ

ಬನ್ನೂರು: ಕಣ್ಣು ಮಾನವನ ಅತಿ ಮುಖ್ಯವಾದ ಅಂಗವಾಗಿದ್ದು, ಇದರ ಆರೋಗ್ಯದ ಕಡೆ ಹೆಚ್ಚಿನ ಗಮನಹರಿಸುವಂತೆ ರೋಟರಿ ಮಾಜಿ ಅಧ್ಯಕ್ಷ ಡಾ.ಮಹೇಂದ್ರಸಿಂಗ್‌ಕಾಳಪ್ಪ ಸಲಹೆ ನೀಡಿದರು.

ಪಟ್ಟಣದ ಬಸ್ ನಿಲ್ದಾಣದ ಸಮೀಪವಿರುವ ರೋಟರಿ ಶಾಲಾ ಆವರಣದಲ್ಲಿ ಶನಿವಾರ ರೋಟರಿ ಸಂಸ್ಥೆ, ಕಾನ್‌ಸಿಂಗ್‌ಜೀ ರಾಜ್‌ಪುರೋಹಿತ್, ಶ್ರೀ ಗೌರಿದೇವಿ, ಲಯನ್ಸ್ ಕ್ಲಬ್ ಆಫ್ ಈರೋಡ್ ಸುಪ್ರಿಮ್, ಕೊಯಮತ್ತೂರು ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಕಣ್ಣಿನ ಉಚಿತ ತಪಾಸಣಾ ಶಿಬಿರದಲ್ಲಿ ಮಾತನಾಡಿದರು.

ಗ್ರಾಮೀಣ ಭಾಗದಲ್ಲಿ ಆಸ್ಪತ್ರೆಗಳ ಕೊರತೆ ಇದ್ದು, ಕಣ್ಣಿನ ಸಮಸ್ಯೆ ಇರುವವರಿಗೆ ಕೆಲಸದ ಒತ್ತಡದಲ್ಲಿ ನಗರ ಪ್ರದೇಶಗಳಿಗೆ ನಿಗದಿತ ಸಮಯದಲ್ಲಿ ಬಂದು ಚಿಕಿತ್ಸೆ ಪಡೆಯಲಾಗದೆ ತೊಂದರೆ ಅನುಭವಿಸುತ್ತಿದ್ದಾರೆ. ಇದನ್ನು ಮನಗಂಡು ನಿರಂತರವಾಗಿ ಕಣ್ಣಿನ ತಪಾಸಣೆ ಶಿಬಿರ ಆಯೋಜಿಸುವ ಮೂಲಕ ದೃಷ್ಟಿ ನೀಡುವ ಕೆಲಸ ಮಾಡಲಾಗುತ್ತಿದೆ. ಇಂದು ನಡೆದ ತಪಾಸಣಾ ಶಿಬಿರದಲ್ಲಿ 197 ಜನರು ಚಿಕಿತ್ಸೆ ಪಡೆದುಕೊಂಡಿದ್ದಾರೆ ಎಂದು ತಿಳಿಸಿದರು.

ಶಸ್ತ್ರ ಚಿಕಿತ್ಸೆ ಆಯ್ಕೆಯಾಗಿರುವಂತ ಫಲಾನುಭವಿಗಳಿಗೆ ಉಚಿತವಾಗಿ ಕೊಯಮತ್ತೂರು ಕಣ್ಣಿನ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲಾಗುವುದು. ಚಿಕಿತ್ಸೆ ಪಡೆದಂತ ಫಲಾನುಭವವಿಗಳು ತಮ್ಮ ಸುತ್ತಮುತ್ತಲಿನ ದೃಷ್ಟಿದೋಷವುಳ್ಳ ಜನರಿಗೆ ಮಾಹಿತಿ ನೀಡಿ, ಕಣ್ಣಿನ ಚಿಕಿತ್ಸೆ ಪಡೆದುಕೊಳ್ಳಲು ತಿಳಿಸುವಂತೆ ಮನವಿ ಮಾಡಿದರು.

ಕೆ.ರಾಜೇಶ್‌ಕುಮಾರ್, ವಿಜಯ್‌ಕುಮಾರ್, ಡಾ.ಅಪರ್ಣಾ ಹೊಸೂರು, ಡಾ.ನಜ್ಜೀ, ಸತೀಶ್, ನಂಜುಂಡಸ್ವಾಮಿ, ಯಾಸೀನ್, ಚನ್ನಮಾಯೀಗೌಡ, ಸಂತೋಷ್‌ಕುಮಾರಿ, ವನ್ಯಾ, ವಿರಾಟ್, ನಾರಾಯಣ್, ಹರೀಣಿ, ಶೀಲಾ ಇತರರು ಇದ್ದರು.