ಅರಸೀಕೆರೆ ಗ್ರಾಮಾಂತರ:
ಮಹಿಳೆಯರು ಆರೋಗ್ಯ ಬಗ್ಗೆ ಕಾಳಜಿ ವಹಿಸಬೇಕು ಎಂದು ಇನ್ನರ್ ವ್ಹೀಲ್ ಕ್ಲಬ್ ಅಧ್ಯಕ್ಷೆ ರೇಖಾ ಜಿತೇಂದ್ರ ಸಲಹೆ ನೀಡಿದರು.
ಗರ್ಭಿಣಿ ಹಾಗೂ ಬಾಣಂತಿಯರಿಗೆ ಇನ್ನರ್ ವಿಲ್ ಕ್ಲಬ್ ವತಿಯಿಂದ ಕಂತೆನಹಳ್ಳಿಯಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ಗುರುವಾರ ಆಯೋಜಿಸಿದ್ದ ಉಚಿತ ಆರೋಗ್ಯ ಶಿಬಿರದಲ್ಲಿ ಅವರು ಮಾತನಾಡಿದರು.
ಗರ್ಭಿಣಿ ಹಾಗೂ ಬಾಣಂತಿಯರು ಪೌಷ್ಟಿಕ ಆಹಾರ ಸೇವನೆ ಮಾಡಬೇಕು. ಸಮಯ ಸಮಯಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ನಿಯಮಿತವಾದ ವ್ಯಾಯಾಮ, ಧ್ಯಾನ ಹಾಗೂ ಪ್ರಾಣಾಯಮಗಳನ್ನು ಮಾಡಬೇಕು. ಇದರಿಂದ ದೇಹ ಮತ್ತು ಮನಸ್ಸಿನ ಸ್ಥಿತಿ ಸಮರ್ಪಕವಾಗಿ ಇರುತ್ತದೆ ಎಂದು ಸಲಹೆ ನೀಡಿದರು.
ಡಾ.ಚಿನ್ಮಯ್, ಆರೋಗ್ಯ ಕಾಳಜಿ ಬಗ್ಗೆ ಮಾತನಾಡಿದರು. ಸದಸ್ಯರಾದ ರೇಷ್ಮಾ ರೈ, ಸೌಮ್ಯ ಬಾಲಕೃಷ್ಣ, ಶೀಲಾ, ಲತಾಸಿಂಗ್, ವಿನುತಾ, ರಂಜಿತಾ ವಿನಯ್, ಖಜಾಂಚಿ ಶ್ವೇತಾ ಮೋಹನ್ ಇತರರು ಇದ್ದರು.