ಮೈಸೂರು: ವೈದ್ಯಕೀಯ ಕ್ಷೇತ್ರ ಒಂದು ವೃತ್ತಿ ಅಥವಾ ವ್ಯವಹಾರವಲ್ಲ. ಹಾಗಾಗಿ ವೈದ್ಯರು ಸೇವಾ ಮನೋಭಾವನೆಯೊಂದಿಗೆ ರೋಗಿಗಳ ಆರೈಕೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಕರೆ ನೀಡಿದರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಘಟಿಕೋತ್ಸವ ಭವನದಲ್ಲಿ ಮಂಗಳವಾರ ಮೈಸೂರು ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಹಮ್ಮಿಕೊಂಡಿದ್ದ ‘ವಿಶಿಖಾನುಪ್ರವೇಶ’ ಪದವಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿ, ಸಮಾಜದ ಸ್ವಾಸ್ಥೃ ಕಾಪಾಡುವಲ್ಲಿ ವೈದ್ಯರ ಪಾತ್ರ ಮಹತ್ವದ್ದು. ವೈದ್ಯರು ಹಾಗೂ ಆಸ್ಪತ್ರೆಗಳು ರೋಗಿಗಳಿಂದ ಅಗತ್ಯಕ್ಕಿಂತ ಹೆಚ್ಚು ಹಣ ಪಡೆಯುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಈ ಮಾತನ್ನು ಸುಳ್ಳಾಗಿಸುವ ಕಾರ್ಯವನ್ನು ಯುವ ವೈದ್ಯರು ಮಾಡಬೇಕು. ಪ್ರಸ್ತುತ ಅನೇಕ ಹಸನ್ಮುಖಿಗಳು ವೈದ್ಯಲೋಕವನ್ನು ಪ್ರವೇಶಿಸುತ್ತಿದ್ದಾರೆ ಎಂದರು.
ವೈದ್ಯಕೀಯ ಪದವಿ ಪಡೆದವರು ನಮ್ಮ ಓದು ಅಂತ್ಯವಾಯಿತು ಎಂದು ಸುಮ್ಮನಾಗಬೇಡಿ, ಕಲಿಕೆ ನಿರಂತರವಾಗಿ ಮುಂದುವರೆಸಬೇಕು. ವೈದ್ಯಕೀಯ ಕ್ಷೇತ್ರವು ಸಂಪೂರ್ಣ ಅಭಿವೃದ್ಧಿಗೊಂಡಿಲ್ಲ ಹಾಗೂ ಅಧ್ಯಂುನ ಶೀಲರಾಗುವುದು ಅಗತ್ಯ. ಹಾಗಾಗಿ ನೀವುಗಳು ವೈಜ್ಞಾನಿಕವಾಗಿ ಅಧ್ಯಂುನ ವಾಡಿ ದೇಶಕ್ಕೆ ಕೊಡುಗೆ ನೀಡಬೇಕು ಎಂದು ಕರೆ ನೀಡಿದರು.
ವೈದ್ಯರಿಗೆ ಸಮಾಜ ಮನ್ನಣೆ ನೀಡಬೇಕು. ವೈದ್ಯರ ಮೇಲೆ ಮೊಕದ್ದಮೆ ಹೂಡುವುದು, ಆಸ್ಪತ್ರೆಯ ಮುಂದೆ ದಾಂಧಲೆ ಮಾಡುವುದು ಸೇರಿದಂತೆ ವೈದ್ಯರಿಗೆ ಹಿಂಸೆ ಮಾಡದಂತಹ ಕಾನೂನನ್ನು ರಾಜ್ಯ ಸರ್ಕಾರ ರಚನೆ ಮಾಡಿದೆ. ವೈದ್ಯರಿಗೆ ಕಾಯ್ದೆಯ ರಕ್ಷಣೆ ಇದ್ದರೂ ಸಹ ಅವರ ಮೇಲೆ ಯಾವುದೇ ರೀತಿಯ ದೌರ್ಜನ್ಯಗಳನ್ನು ನಡೆಸಬಾರದು ಎಂದರು.
ಈ ಸಂದರ್ಭ 82 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಆಯುರ್ವೇದ ವೈದ್ಯಕೀಯದ ವಿವಿಧ ವಿಭಾಗಗಳಲ್ಲಿ ಪ್ರಥಮ ರ‌್ಯಾಂಕ್ ಪಡೆದ ಪೂಜಾ ಪಟೇಲ್, ದ್ವಿತೀಯ ರ‌್ಯಾಂಕ್ ಪಡೆದ ಪಿ.ಭವನ್ ಕುಮಾರ್ ಅವರನ್ನು ಅಭಿನಂದಿಸಲಾಯಿತು. ಪ್ರಾಚಾರ್ಯ ಡಾ.ಗಜಾನನ ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ಆಂುುಷ್ ಇಲಾಖೆಯ ಆಂುುಕ್ತ ಡಾ.ಶ್ರೀನಿವಾಸಲು, ದೂರದರ್ಶನದ ಥಟ್ ಅಂತಾ ಹೇಳಿ ಕಾರ್ಯಕ್ರಮ ನಿರೂಪಕ ಡಾ.ನಾ.ಸೋಮೇಶ್ವರ, ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಡಾ.ಕೆ.ಶ್ರೀನಿವಾಸ ಯಾದವ್, ಡಾ.ಎಂ.ಡಿ.ಸಂಜಯ್ ಕುಮಾರ್, ಸ್ಥಾನಿಕ ವೈದ್ಯೆ ಶಶಿರೇಖಾ ಹಾಗೂ ಇತರರು ಇದ್ದರು.