ಜಿಲ್ಲೆ

ದಂತ ಆರೋಗ್ಯದ ಕಾಳಜಿ ವಹಿಸಿ

ಸಿದ್ದಾಪುರ: ದಂತ ದೇಹದ ಪ್ರಮುಖ ಭಾಗ. ಆಹಾರವನ್ನು ನುರಿಸಿ ತಿನ್ನಲು ಹಾಗೂ ಆರೋಗ್ಯ ರಕ್ಷಣೆಯ ವಿಚಾರವಾಗಿ ಮಹತ್ವದ್ದಾಗಿದೆ. ಹಲ್ಲಿನ ಅನಾರೋಗ್ಯದಿಂದ ಕಾಯಿಲೆ ಉಂಟಾಗುವುದರಿಂದ ವಿದ್ಯಾರ್ಥಿ ಜೀವನದಿಂದ ದಂತ ಆರೋಗ್ಯ ಕುರಿತು ಹೆಚ್ಚು ಕಾಳಜಿ ವಹಿಸಬೇಕು ಎಂದು ಲಯನ್ಸ್ ಜಿಲ್ಲಾ ಮಾಜಿ ಗವರ್ನರ್ ಡಾ.ರವಿ ಹೆಗಡೆ ಹೂವಿನಮನೆ ಹೇಳಿದರು.

ತಾಲೂಕಿನ ಮಳವಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಲಯನ್ಸ್ ಕ್ಲಬ್ ಸಿದ್ದಾಪುರ ಇವರು ಆಯೋಜಿಸಿದ್ದ ದಂತ ಆರೋಗ್ಯ ಜಾಗೃತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ದಂತ ವೈದ್ಯ ಡಾ. ರಾಜು ಕೆ. ಭಟ್ಟ ಉಪನ್ಯಾಸ ನೀಡಿ, ದಂತ ಪಂಕ್ತಿಯನ್ನು ಸರಿಯಾಗಿ ಕಾಪಾಡಿಕೊಳ್ಳಬೇಕು. ಹಲ್ಲು ಅಕಸ್ಮಾತ್ತಾಗಿ ಅಪಘಾತದಲ್ಲಿ ಮುರಿದ ತಕ್ಷಣ ಮಾಡಬೇಕಾದ ಕ್ರಮ, ಹೃದಯ ಸಂಬಂಧಿತ ಕಾಯಿಲೆಗಳು ಕಾಣಿಸಿಕೊಳ್ಳುವಲ್ಲಿ ಹಲ್ಲಿನ ಅನಾರೋಗ್ಯವೇ ಕಾರಣವಾಗುತ್ತದೆ ಎಂದು ತಿಳಿಸಿ, ವಿದ್ಯಾರ್ಥಿಗಳು ನಿತ್ಯವೂ ಹಲ್ಲಿನ ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಕರೆ ನೀಡಿದರು.

ಲಯನ್ಸ್ ಕ್ಲಬ್ ಅಧ್ಯಕ್ಷ ಆರ್.ಎಂ. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಮನಮನೆ ಗ್ರಾಪಂ ಸದಸ್ಯರಾದ ರಮೇಶ, ಸಾವಿತ್ರಿ ನಾಯ್ಕ, ಲಯನ್ಸ್ ಕಾರ್ಯದರ್ಶಿ ಕುಮಾರ ಗೌಡರ್ ಹೊಸೂರು, ಖಜಾಂಚಿ ಆನಂದ ಶೇಟ್, ಸದಸ್ಯರಾದ ಸಿ.ಎಸ್. ಗೌಡರ್ ಹೆಗ್ಗೋಡಮನೆ, ಎ.ಜಿ. ನಾಯ್ಕ, ಸತೀಶ ಗೌಡರ್ ಹೆಗ್ಗೋಡಮನೆ, ಎಂ.ಡಿ. ನಾಯ್ಕ, ಇಂಧುದರ ಪಾಟೀಲ, ದರ್ಶನ ಶೇಟ್, ವಿಜಯ ಗೌಡ ಮಳಲವಳಿ,್ಳ ಮುಖ್ಯ ಶಿಕ್ಷಕಿ ಉಮಾ ಕೊಡಿಯಾ, ಆಶಾರಾಣಿ, ರಾಜು ನಾಯ್ಕ, ಇಂದಿರಾ ನಾಯ್ಕ ಇತರರಿದ್ದರು. ಜಿ.ಜಿ. ಹೆಗಡೆ ಬಾಳಗೋಡ ನಿರ್ವಹಿಸಿದರು, ಶಿಕ್ಷಕ ಎಂ.ಡಿ. ನಾಯ್ಕ ಅವರಗುಪ್ಪ ವಂದಿಸಿದರು. ಶಿಬಿರದಲ್ಲಿ ಮಳವಳ್ಳಿ, ಹಸುವಂತೆ ಹಾಗೂ ಐಗಳಕೊಪ್ಪ ಶಾಲಾ ವಿದ್ಯಾರ್ಥಿಗಳೂ ಪಾಲ್ಗೊಂಡಿದ್ದರು.