ಜಿಲ್ಲೆ

ಮಕ್ಕಳ ಆರೋಗ್ಯದತ್ತ ಇರಲಿ ಕಾಳಜಿ

ಬೆಳಗಾವಿ: ಚಿಕ್ಕ ಮಕ್ಕಳ ಆರೋಗ್ಯ ಸೂಕ್ಷ$್ಮವಾಗಿರುತ್ತದೆ. ಸ್ವಲ್ಪ ವ್ಯತ್ಯಾಸವಾದರೂ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಆದ್ದರಿಂದ ಪಾಲಕರು ಅವರ ಆರೋಗ್ಯದ ಬಗ್ಗೆ ಕಾಳಜಿವಹಿಸಬೇಕು ಎಂದು ನಗರದ ಕೆಎಲ್​ಇ ಡಾ. ಪ್ರಭಾಕರ ಕೋರೆ ಆಸ್ಪತ್ರೆಯ ಚಿಕ್ಕಮಕ್ಕಳ ವೈದ್ಯೆ ಡಾ.ಸೋನಾಲಿ ಬಿಜ್ಜರಗ್ಗಿ ಸಲಹೆ ನೀಡಿದರು.

ನಗರದ ಕೆಎಲ್​ಇ ವೇಣುಧ್ವನಿ 90.4 ಎಫ್​ಎಂ, ಕೆಎಲ್​ಇ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಹಾಗೂ ಕೆಎಲ್​ಇ ಜವಾಹರಲಾಲ್​ ನೆಹರು ವೈದ್ಯಕಿಯ ಮಹಾವಿದ್ಯಾಲಯದ ಸಹಯೋಗದಲ್ಲಿ ಶುಕ್ರವಾರ ಏರ್ಪಡಿಸಿದ್ದ ನೇರ ೋನ್​&ಇನ್​ ಪ್ರಸಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಚಿಕ್ಕಮಕ್ಕಳಲ್ಲಿ ಕಂಡುಬರುವ ಸಾಮಾನ್ಯ ರೋಗಗಳು ಮತ್ತು ಅದರ ಲಕ್ಷಣಗಳು, ಪತ್ತೆ ಹಚ್ಚುವ ಬಗೆ ಕುರಿತು ವಿವರಿಸಿದರು. ಕೇಳುಗರ ಪ್ರಶ್ನೆಗಳಿಗೆ ಉತ್ತರಿಸಿದರು.

ಕಾರ್ಯಕ್ರಮ ನಿರ್ವಾಹಕಿ ಮನಿಷಾ ಪಿ.ಎಸ್​., ಮಂಜುನಾಥ ಪೈ ಇದ್ದರು.