ಸಿಂಧನೂರು ಕೋಟೆ ಈರಣ್ಣ ಕಲ್ಯಾಣ ಮಂಟಪದಲ್ಲಿ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿಯನ್ನು ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ಡಾ.ಎಸ್.ನಾಗವೇಣಿ ಪಾಟೀಲ್ ಉದ್ಘಾಟಿಸಿದರು. ಯೋಜನೆ ಪ್ರಾದೇಶಿಕ ನಿರ್ದೇಶಕ ಜೆ.ಚಂದ್ರಶೇಖರ, ನಗರ ಪೊಲೀಸ್ ಠಾಣೆ ಎಸ್‌ಐ ಎಚ್.ಬಸವರಾಜ, ಜಿಲ್ಲಾ ಜನಜಾಗೃತಿ ವೇದಿಕೆ ಉಪಾಧ್ಯಕ್ಷ ಎಂ.ಭಾಸ್ಕರ ಇತರರಿದ್ದರು. 
ಜಿಲ್ಲೆ

ಯೋಜನೆಗಳ ಸದ್ಭಳಕೆ ಮಾಡಿಕೊಳ್ಳಿ

ಗಾಯತ್ರಿ ಮಾಲಿಪಾಟೀಲ್

ಸಿಂಧನೂರು: ಮಹಿಳೆಯರನ್ನು ಆತ್ಮಸ್ಥೈರ್ಯದೊಂದಿಗೆ ಆರ್ಥಿಕ ಮತ್ತು ಸಾಮಾಜಿಕವಾಗಿ ಸದೃಢರಾಗಿಸುವ ಉದ್ದೇಶದಿಂದ ಗ್ರಾಮಾಭಿವೃದ್ಧಿ ಯೋಜನೆ ಸ್ಥಾಪಿಸಿದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗಡೆ ಅವರ ಕನಸು ನನಸಾಗಿದೆ ಎಂದು ಯೋಜನೆಯ ಪ್ರಾದೇಶಿಕ ನಿರ್ದೇಶಕ ಜೆ.ಚಂದ್ರಶೇಖರ ಹೇಳಿದರು.

ನಗರದ ಕೋಟೆ ಈರಣ್ಣ ಕಲ್ಯಾಣ ಮಂಟಪದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿ ಭಾನುವಾರ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ಯೋಜನೆಯಡಿ ಸ್ವ-ಸಹಾಯ ಸಂಘಗಳ ರಚನೆ, ಕಿರು ಆರ್ಥಿಕ ವ್ಯವಹಾರ, ಆಧುನಿಕ ಕೃಷಿ ಪದ್ಧತಿಗೆ ಪ್ರೋತ್ಸಾಹ, ಸ್ವ-ಉದ್ಯೋಗ ಚಟುವಟಿಕೆಗಳು, ಆರೋಗ್ಯ ವಿಮೆ, ಪಿಂಚಣಿ ಯೋಜನೆ ಸೇರಿ ಹಲವಾರು ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಮಹಿಳೆಯರು ಯೋಜನೆಗಳ ಸದ್ಭಳಕೆ ಮಾಡಿಕೊಳ್ಳಬೇಕು ಎಂದರು.

ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ಡಾ.ಎಸ್.ನಾಗವೇಣಿ ಪಾಟೀಲ್ ಮಾತನಾಡಿ, ಮಹಿಳೆ ನಾಲ್ಕು ಗೋಡೆಗಳಿಗೆ ಸೀಮಿತವಲ್ಲ ಪುರುಷರಷ್ಟೇ ಸಮಾನಳು. ಆದ್ದರಿಂದ ಗ್ರಾಮಾಭಿವೃದ್ಧಿ ಯೋಜನೆ ಮಹಿಳೆಯರನ್ನು ಆರ್ಥಿಕ ಸ್ವಾವಲಂಬಿಗಳನ್ನಾಗಿ ಮಾಡಿದೆ ಎಂದು ತಿಳಿಸಿದರು. ಜನಮಂಗಳ ಕಾರ್ಯಕ್ರಮದಡಿ ಮಂಜೂರಾದ ವಾಕರ್ ಸ್ಟಿಕ್, ತಾಲೂಕಿನ ಎಲ್ಲ ಗುಂಪುಗಳಿಗೆ ಮಂಜೂರಾದ 2.10 ಕೋಟಿ ರೂ. ಲಾಭಾಂಶ ವಿತರಣೆಗೆ ಸಾಂಕೇತಿಕವಾಗಿ ಚೆಕ್ ಹಾಗೂ ಆರೋಗ್ಯ ರಕ್ಷಾ ಕ್ಲೈಮ್ ಮಂಜೂರಾತಿ ಪತ್ರ ವಿತರಿಸಲಾಯಿತು.

ನಗರ ಪೊಲೀಸ್ ಠಾಣೆ ಎಸ್‌ಐ ಎಚ್.ಬಸವರಾಜ, ಶ್ರೀಕೃಷ್ಣ ದೇವರಾಯ ವಿದ್ಯಾ ಸಂಸ್ಥೆಯ ಪ್ರಾಚಾರ್ಯೆ ಚಂದ್ರಕಲಾ ಪ್ರಕಾಶ, ಪತ್ರಕರ್ತ ಡಿ.ಎಚ್.ಕಂಬಳಿ, ಜಿಲ್ಲಾಜನಜಾಗೃತಿ ವೇದಿಕೆ ಉಪಾಧ್ಯಕ್ಷ ಎಂ.ಭಾಸ್ಕರ ಇತರರಿದ್ದರು.