ಜಿಲ್ಲೆ

ಲಸಿಕೆಯ ಪ್ರಯೋಜನ ಪಡೆಯಿರಿ

ವಿಜಯವಾಣಿ ಸುದ್ದಿಜಾಲ ಧಾರವಾಡ
ಮಹಿಳೆಯರು ಗರ್ಭಕಂಠದ ಕ್ಯಾನ್ಸರ್​ ಬರುವ ಪೂರ್ವದಲ್ಲಿ ಲಸಿಕೆ ಪಡೆದುಕೊಳ್ಳುವುದು ಒಳ್ಳೆಯದು ಎಂದು ಗ್ಯಾನಬಾ ಐವಿಎಫ್ ಮತ್ತು ಗ್ಯಾನಬಾ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಡಾ. ಮಾಧುರಿ ಕಬಾಡಿ ಪೂಜಾರಿ ಹೇಳಿದರು.
ನಗರದ ಸರ್​ ಸಿದ್ದಪ್ಪ ಕಂಬಳಿ ಕಾನೂನು ಕಾಲೇಜಿನಲ್ಲಿ ಶನಿವಾರ ಏರ್ಪಡಿಸಿದ್ದ ಗರ್ಭಕಂಠದ ಕ್ಯಾನ್ಸರ್​ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೇಶದಲ್ಲಿ ಗರ್ಭಕಂಠದ ಕ್ಯಾನ್ಸರ್​ನಿಂದ ಮರಣ ಹೊಂದುತ್ತಿರುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಕ್ಯಾನ್ಸರ್​ ಹಾಗೂ ಲಸಿಕೆ ಪಡೆಯುವುದರ ಕುರಿತು ಮಹಿಳೆಯರಲ್ಲಿ ಸಾಕಷ್ಟು ಜಾಗೃತಿ ಮೂಡಿಸುವ ಕೆಲಸವಾಗುತ್ತಿದೆ. ಲಸಿಕೆ ಪಡೆಯುವುದರಿಂದ ಕ್ಯಾನ್ಸರ್​ನಿಂದ ದೂರ ಉಳಿಯಬಹುದು. ಹೀಗಾಗಿ ಯುವತಿಯರು ಇದರ ಪ್ರಯೋಜನ ಪಡೆದುಕೊಂಡು ಜಾಗೃತಿ ವಹಿಸುವುದು ಅಗತ್ಯವಾಗಿದೆ ಎಂದರು.
ಕಾಲೇಜಿನ ಪ್ರಾಚಾರ್ಯೆ ಡಾ. ಮಂಜುಳಾ ಎಸ್​.ಆರ್​., ಸಿಬ್ಬಂದಿ, ಇತರರು ಇದ್ದರು.