ಬಾಡಗಂಡಿ ಎಸ್.ಆರ್. ಪಾಟೀಲ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆ ಮತ್ತು ಶಂಶೋಧ ಕೇಂದ್ರದಲ್ಲಿ ಕಣ್ಣಿನ ಪೊರೆಯ ್ಯಾಕೊ ಮಷಿನ್ ಪೂಜಾ ಕಾರ್ಯಕ್ರಮದಲ್ಲಿ ವೈದ್ಯಕೀಯ ವ್ಯವಸ್ಥಾಪಕ ಡಾ. ವಿಜಯಕುಮಾರ ಹಳಿ, ಆಡಳಿತಾಧಿಕಾರಿ ಡಾ. ರಾಘವೇಂದ್ರ ಪಾಟೀಲ, ಕಣ್ಣಿನ ವೈದ್ಯ ಡಾ. ಪೂರ್ಣಿಮಾ ಚಿಮ್ಮನಕಟ್ಟಿ ಇದ್ದರು. 
ಜಿಲ್ಲೆ

ಫ್ಯಾಕೊ ಮಷಿನ್ ಲಾಭ ಪಡೆದುಕೊಳ್ಳಿ

Vijayapura - Desk - Gurappa Lokuri

ಬೀಳಗಿ: ಉತ್ತರ ಕರ್ನಾಟಕದ ಜನತೆಯ ಹಿತದೃಷ್ಠಿಯಿಂದ ಮಾಜಿ ಸಚಿವ ಎಸ್.ಆರ್. ಪಾಟೀಲರು ಫ್ಯಾಕೊ ಮಷಿನ್ ಅತ್ಯಾಧುನಿಕ ಕಣ್ಣಿನ ಪೊರೆಯ ಶಸ್ತ್ರ ಚಿಕಿತ್ಸೆಯ ಮಷಿನ್‌ನನ್ನು ಆಸ್ಪತ್ರೆಯಲ್ಲಿ ಅಳವಡಿಸಿದ್ದು, ಇದರಿಂದ ಅಂಧತ್ವ ಹೋಗಲಾಡಿಸಲು ಸಾಧ್ಯವಾಗಲಿದೆ ಎಂದು ವೈದ್ಯಕೀಯ ವ್ಯವಸ್ಥಾಪಕ ಡಾ. ವಿಜಯಕುಮಾರ ಹಳ್ಳಿ ಹೇಳಿದರು.

ಬಾಡಗಂಡಿ ಎಸ್.ಆರ್. ಪಾಟೀಲ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆ ಮತ್ತು ಸಂಶೋಧನೆ ಕೇಂದ್ರದಲ್ಲಿ ಕಣ್ಣಿನ ಪೊರೆಯ ಫ್ಯಾಕೊ ಮಷಿನ್ ಪೂಜಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಫ್ಯಾಕೊ ಮಷಿನ್ ಒಂದು ಆಧುನಿಕ ಕಣ್ಣಿನ ಪೊರೆಯ ಶಸ್ತ್ರಚಿಕಿತ್ಸೆ ಯಂತ್ರವಾಗಿದೆ. ಕಣ್ಣಿನ ಒಳಗಡೆಯ ಮಸೂರನ್ನು ಅಲ್ಮಾಸಾನಿಕ್ ಹ್ಯಾಂಡ್ ಪೀಸ್‌ನೊಂದಿಗೆ ಎಮೆಲ್ಸಿಫಿಕೇಶನ್ ಮಾಡಲಾಗುತ್ತದೆ. ಕಣ್ಣಿನ ಲೇಸರ್ ಸರ್ಜರಿ ಮಾಡಲಾಗುತ್ತದೆ. ಹಾನಿಗೊಳಗಾದ ಕಣ್ಣಿನ ಮಸೂರವನ್ನು ಕೃತಕವಾಗಿ ಬದಲಾಯಿಸುವ ಮೂಲಕ ಕಾರ್ಯ ವಿಧಾನ ಪೂರ್ಣಗೊಳಿಸಲಾಗುತ್ತದೆ. ಕಣ್ಣಿನ ಪೊರೆ ಸಣ್ಣ ತುಂಡುಗಳಾಗಿ ಒಡೆಯಲು ಅಲ್ಮಾಸಾನಿಕ್ ತರಂಗಗಳನ್ನು ಬಳಸುವ ಒಂದು ವಿಧಾನವಾಗಿದೆ. ಜನತೆ ಇದರ ಲಾಭ ಪಡೆದುಕೊಳ್ಳಬೇಕು ಎಂದರು.

ಕಣ್ಣಿನ ವೈದ್ಯ ಡಾ. ಪೂರ್ಣಿಮಾ ಚಿಮನಕಟ್ಟಿ ಮಾತನಾಡಿದರು.

ಡೀನ್ ಡಾ. ಧರ್ಮರಾಯ ಇಂಗಳೆ, ಆಡಳಿತಾಧಿಕಾರಿ ಡಾ. ರಾಘವೇಂದ್ರ ಪಾಟೀಲ, ಡಾ. ನಮ್ರಾತಾ, ನರ್ಸಿಂಗ್ ಸೂಪರಿಂಟೆಂಡೆಂಟ್ ಮಲ್ಲಪ್ಪ ಸಂತೋಜಿ ಇತರರಿದ್ದರು.