ಎನ್.ಆರ್.ಪುರ ಎಂಕೆಸಿಪಿಎಂ ಕಾಲೇಜಿನಲ್ಲಿ ಪ್ರಥಮ ವರ್ಷದ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮವನ್ನು ಮನಶಾಸ್ತ್ರಜ್ಞೆ ಡಾ. ಸಂಧ್ಯಾ ಕಾವೇರಿ ಉದ್ಘಾಟಿಸಿದರು. ಎಸ್.ಎಸ್.ಶಾಂತಕುಮಾರ್, ಪಿ.ಕೆ.ಬಸವರಾಜ್, ಎಸ್.ಎಲ್.ಲೋಕೇಶ್, ಪದ್ಮಾ, ಮಧುರಾ ಇದ್ದರು.  
ಜಿಲ್ಲೆ

ಅವಕಾಶ ಬಳಸಿಕೊಂಡು ಗುರಿ ಸಾಧಿಸಿ

ಎನ್.ಆರ್.ಪುರ: ವಿದ್ಯಾರ್ಥಿಗಳು ಸಿಕ್ಕ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಂಡು ಸಾಧನೆ ಮಾಡಬೇಕು ಎಂದು ಶಿವಮೊಗ್ಗ ಕಟೀಲು ಅಶೋಕ್ ಪೈ ವಿದ್ಯಾಸಂಸ್ಥೆ ಪ್ರಾಚಾರ್ಯೆ ಹಾಗೂ ಮನಶಾಸ್ತ್ರಜ್ಞೆ ಡಾ. ಸಂಧ್ಯಾ ಕಾವೇರಿ ತಿಳಿಸಿದರು.

ಗುರುವಾರ ಎಂಕೆಸಿಪಿಎಂ ಕಾಲೇಜಿನಲ್ಲಿ ಪ್ರಥಮ ವರ್ಷದ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮದಲ್ಲಿ ಮಾತನಾಡಿ, ಹದಿ ಹರೆಯದ ಮಕ್ಕಳು ಜ್ಞಾನವನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು. ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು. ಒಳ್ಳೆಯ ಆಲೋಚನೆಗಳನ್ನು ಮಾಡುತ್ತಿದ್ದರೆ ಒಳ್ಳೆಯವರಾಗುತ್ತೇವೆ. ಮಾನಸಿಕ ಒತ್ತಡ ಕಡಿಮೆ ಮಾಡಿಕೊಂಡರೆ ಗುರಿ ತಲುಪಬಹುದು ಎಂದರು.
ಎಂಕೆಸಿಪಿಎಂ ಕಾಲೇಜಿನ ಕಾರ್ಯದರ್ಶಿ ಎಸ್.ಎಸ್.ಶಾಂತಕುಮಾರ್ ಮಾತನಾಡಿ, ಕಾಲೇಜಿನಲ್ಲಿ ಕಡಿಮೆ ಶುಲ್ಕದಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದೇವೆ. ಗ್ರಾಮೀಣ ಮಟ್ಟದ ವಿದ್ಯಾರ್ಥಿಗಳಿಗೂ ಉತ್ತಮ ಶಿಕ್ಷಣ ತಲುಪಿಸುವುದೇ ನಮ್ಮ ಧ್ಯೇಯ ಎಂದರು.
ಜಂಟಿ ಕಾರ್ಯದರ್ಶಿ ಪಿ.ಕೆ.ಬಸವರಾಜ್ ಮಾತನಾಡಿ, ಯುವ ಮನಸ್ಸುಗಳು ಸರಿಯಾದ ಮಾರ್ಗದಲ್ಲಿ ನಡೆದರೆ ಸುಸಂಸ್ಕೃತರಾಗಿ ಬಾಳಬಹುದು ಎಂದರು.
ಕಾಲೇಜಿನ ಪ್ರಾಚಾರ್ಯೆ ಪದ್ಮಾ ರಮೇಶ್, ಖಜಾಂಚಿ ಎಸ್.ಎಲ್.ಲೋಕೇಶ್, ನಿರ್ದೇಶಕಿ ತೃಪ್ತಿ, ಸಂಸ್ಥೆ ಉಪಾಧ್ಯಕ್ಷ ಎಲ್.ಎಂ.ಸತೀಶ್, ಸೌಮ್ಯಾ, ಮಧುರಾ ಮಂಜುನಾಥ್, ಜ್ಞಾನೇಶ್ ಇದ್ದರು.