ಹುಬ್ಬಳ್ಳಿ: ಇಲ್ಲಿಯ ವಾರ್ಡ್ ನಂ. 35 ರ ಬೈರಿದೇವರಕೊಪ್ಪದ ಗಣೇಶ ಕಾಲನಿಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಶಿಶು ಅಭಿವೃದ್ಧಿ ಇಲಾಖೆಯ ಅನುದಾನದಲ್ಲಿ ನಿರ್ಮಿಸಲಾದ ನೂತನ ಅಂಗನವಾಡಿ ಕಟ್ಟಡವನ್ನು ಭಾನುವಾರ ಉದ್ಘಾಟಿಸಲಾಯಿತು.
ಶಾಸಕ ಮಹೇಶ ಟೆಂಗಿನಕಾಯಿ ಉದ್ಘಾಟಿಸಿ ಮಾತನಾಡಿ, ಈ ಭಾಗದ ಮಕ್ಕಳಿಗೆ ಅಂಗನವಾಡಿ ಕೇಂದ್ರದ ಅಗತ್ಯವಿತ್ತು. ಈಗ ನಿರ್ಮಿಸಲಾಗಿದೆ. ಇದರ ಸದುಪಯೋಗ ಪಡೆಯಬೇಕು ಎಂದರು.
ಪಾಲಿಕೆ ಸದಸ್ಯ ಮಲ್ಲಿಕಾರ್ಜುನ ಗುಂಡೂರ, ವಾರ್ಡ್ ಅಧ್ಯಕ್ಷ ಮುತ್ತು ಹೆಬ್ಬಳ್ಳಿ, ಪ್ರಮುಖರಾದ ಲಕ್ಷ್ಮಣ ಪೂಜಾರ, ಕೊಟುರಗೌಡ್ರ, ಜಿ.ಡಿ. ನಿರವಣೆ, ರುದ್ರಪ್ಪ ಕೋಟಿ, ಪಂಚಾಕ್ಷರಿ ಪಂಚಯ್ಯನವರ ಇತರರು ಇದ್ದರು.