ಕಂಪ್ಲಿ ತಾಲೂಕಿನ ದೇವಸಮುದ್ರದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನ ಕಾರ್ಯಕ್ರಮದಲ್ಲಿ ಸ್ವಚ್ಛತಾ ಸಿಬ್ಬಂದಿ ನಾಗವೇಣಿ, ಹನುಮಕ್ಕ, ಬಸಮ್ಮ ಅವರನ್ನು ಸನ್ಮಾನಿಸಲಾಯಿತು. ಗ್ರಾಪಂ ಅಧ್ಯಕ್ಷೆ ಮಾಯಮ್ಮ, ಪಿಡಿಒ ಸಾವಿತ್ರಿ ಗೌರೋಜಿ, ಒಕ್ಕೂಟ ಅಧ್ಯಕ್ಷೆ ಕೆ.ಈಶಮ್ಮ, ಒಕ್ಕೂಟ ಕಾರ್ಯದರ್ಶಿ ಎ.ಪುಷ್ಪಾವತಿ ಇತರರಿದ್ದರು. 
ಜಿಲ್ಲೆ

ಸರ್ಕಾರಿ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಿ

ಗಾಯತ್ರಿ ಮಾಲಿಪಾಟೀಲ್

ಕಂಪ್ಲಿ: ಮಹಿಳೆಯರು ಆರ್ಥಿಕ ಸ್ವಾವಲಂಬನೆ ಸಾಧಿಸಲು ಸರ್ಕಾರಿ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಒಕ್ಕೂಟದ ಕಾರ್ಯದರ್ಶಿ ಎ.ಪುಷ್ಪಾವತಿ ಹೇಳಿದರು.

ತಾಲೂಕಿನ ದೇವಸಮುದ್ರದ ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನ ಆವರಣದಲ್ಲಿ ತುಂಗಭದ್ರಾ ಸಂಜೀವಿನಿ ಮಹಿಳಾ ಒಕ್ಕೂಟದಿಂದ ಬುಧವಾರ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಮಹಿಳಾ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಹಿಳೆಯರಲ್ಲಿ ಮನ್ನುಗ್ಗಿ ಸಾಧಿಸುವ ಛಲ ಇರಬೇಕು. ಪೌಷ್ಟಿಕ ಆಹಾರ ಸೇವನೆ, ಲಘು ವ್ಯಾಯಾಮ, ಯೋಗ, ಧ್ಯಾನ ಮಾಡುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಿ ಎಂದರು.

ಡಾ.ಟಿ.ಫಣೇಂದ್ರ, ಡಾ.ಶ್ರೀಗುರುಮುರುಗೇಶ, ಡಾ.ಬಸವರಾಜ ಅಂಗಡಿ, ಡಾ.ಕೆ.ಪಿ.ಕಲ್ಯಾಣಿ, ಡಾ.ದ್ರಾಕ್ಷಾಯಿಣಿ, ಡಾ.ಶಂಷದ್‌ಬೇಗಮ್ ಅವರು 150 ಜನರ ಆರೋಗ್ಯ ತಪಾಸಣೆ ಮಾಡಿದರು. ಸ್ವಚ್ಛತಾ ಸಿಬ್ಬಂದಿ, ಆಶಾ, ಅಂಗನವಾಡಿ ಕಾರ್ಯಕರ್ತೆಯರನ್ನು ಸನ್ಮಾನಿಸಲಾಯಿತು.

ತಾಪಂ ಅಧಿಕಾರಿಗಳಾದ ಸಲೀಮಾ, ಪಾರ್ವತಿ, ಗೌರಿ, ಆರೋಗ್ಯ ಇಲಾಖೆ ಅಧಿಕಾರಿಗಳಾದ ಡಿ.ಮಹೇಂದ್ರ, ಜಗನ್ನಾಥ, ಗ್ರಾಪಂ ಅಧ್ಯಕ್ಷೆ ನಾಯಕರ ಮಾಯಮ್ಮ, ಸದಸ್ಯ ಶಿವಲಿಂಗನಗೌಡ್ರು, ಪಿಡಿಒ ಸಾವಿತ್ರಿ ಗೌರೋಜಿ, ಮಹಿಳಾ ಒಕ್ಕೂಟದ ಅಧ್ಯಕ್ಷೆ ಕೆ.ಈಶಮ್ಮ ಇತರರಿದ್ದರು.