ಸವಣೂರ: ಯುವಜನತೆ ಕೇಂದ್ರ ಸರ್ಕಾರದ ಉತ್ತಮ ಯೋಜನೆ, ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸ್ಥಳೀಯ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಪ್ರವೀಣ ಬಾಲೇಹೊಸೂರ ಹೇಳಿದರು.
ಪಟ್ಟಣದ ಸಿಂಪಿಗಲ್ಲಿ ಗಣೇಶ ದೇವಸ್ಥಾನದಲ್ಲಿ ಗಣೇಶೋತ್ಸವ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ಬಿಜೆಪಿ ಯುವ ಮೋರ್ಚಾ ವತಿಯಿಂದ ಶನಿವಾರ ಆಯೋಜಿಸಿದ್ದ ಉಚಿತ ರಕ್ತ ತಪಾಸಣೆ ಹಾಗೂ ಸ್ವಯಂಪ್ರೇರಿತ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಭಾರತ ರಾಷ್ಟ್ರವನ್ನು ವಿಶ್ವಗುರು ಪಥದತ್ತ ಕೊಂಡೊಯ್ಯುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿಘ್ನೇಶ್ವರ ಮತ್ತಷ್ಟು ಆತ್ಮಬಲ ನೀಡಲು ಯುವಜನತೆ ರಕ್ತದಾನದೊಂದಿಗೆ ಪ್ರಾರ್ಥಿಸಲು ಮುಂದಾಗಿರುವುದು ಸಂತಸ ತಂದಿದೆ ಎಂದರು.
ಜಿಲ್ಲಾ ರಕ್ತ ಭಂಡಾರ ವೈದ್ಯಾಧಿಕಾರಿ ಡಾ. ಬಸವರಾಜ ತಳವಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ 37 ಯುವಕರು ರಕ್ತದಾನ ಮಾಡಿದರು.
ರಕ್ತ ಭಂಡಾರದ ಲ್ಯಾಬ್ ಟೆಕ್ನಿಶಿಯನ್ ಬಸವರಾಜ ಕಮತದ, ಮಾಲತೇಶ ಹೊಳೆಮ್ಮನವರ, ರೋಷಣಿ ಹಂಚಿ, ಸ್ಮೀತಾ ಬಿ., ಆಜ್ರಾ ಶೇಖ್, ಬಿಜೆಪಿ ಯುವಮೋರ್ಚಾ ಪದಾಧಿಕಾರಿಗಳಾದ ಮಲ್ಲಿಕಾರ್ಜುನ ಕಳ್ಳಿಮನಿ, ಕೆಂಚಪ್ಪ ಅಣ್ಣಿಗೇರಿ, ಸಮೀತ ಕೆಮ್ಮಣಕೇರಿ, ಚನ್ನಬಸಯ್ಯ ದುರ್ಗದಮಠ, ಪ್ರವೀಣ ಚರಂತಿಮಠ, ರಾಜು ಮುಳಗುಂದ, ಅಣ್ಣು ರಾಶಿನಕರ, ಈರಣ್ಣ ಸಾಲಿಮಠ, ಈರಯ್ಯ ಹಿರೇಮಠ, ಶ್ರೀಕಾಂತ ಲಕ್ಷ್ಮೇಶ್ವರ, ದೀಪಕ ಅಚಲಕರ, ಕುಮಾರ ತೆಗ್ಗಿಹಳ್ಳಿ, ಹನುಮಂತಗೌಡ ಮುದಿಗೌಡ್ರ ಹಾಗೂ ಇತರರು ಇದ್ದರು. ಶ್ರೀನಿವಾಸ ಗಿತ್ತೆ ನಿರ್ವಹಿಸಿದರು.