ಜಿಲ್ಲೆ

ಬ್ಯಾಂಕಿಂಗ್ ಸೇವೆಗಳ ಸದುಪಯೋಗ ಪಡೆದುಕೊಳ್ಳಲಿ

ರಾಘವೇಂದ್ರಗೌಡ ಭೀ ಪಾಟೀಲ್

ಇಟಗಿ: ಪ್ರಸ್ತುತ ದಿನಗಳಲ್ಲಿ ಕ್ಯಾಶ್‌ಲೆಸ್ ವ್ಯವಸ್ಥೆ ಹೆಚ್ಚು ಚಲಾವಣೆಯಲ್ಲಿದೆ. ಹೀಗಾಗಿ, ಗ್ರಾಮೀಣ ಜನರಿಗೂ ಆನ್‌ಲೈನ್ ವ್ಯವಹಾರ ಹಾಗೂ ಬ್ಯಾಂಕಿಂಗ್ ಸೇವೆ ಮಾಹಿತಿ ನೀಡಬೇಕೆಂಬ ಸದುದ್ದೇಶದಿಂದ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಧಗ್ರಾಯೋ ಯೋಜನಾಧಿಕಾರಿ ಗಣಪತಿ ನಾಯ್ಕ ಹೇಳಿದರು.

ಸಮೀಪದ ದೇವಲತ್ತಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಆಶ್ರಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಗ್ರಾಮೀಣ ಭಾಗದ ಜನರಿಗಾಗಿ ಬ್ಯಾಂಕಿಂಗ್ ಸೇವೆಗಳ ಮಾಹಿತಿ ಶಿಬಿರದಲ್ಲಿ ಮಾತನಾಡಿ, ಜನರು ಕ್ಯಾಶ್‌ಲೆಸ್ ಹಾಗೂ ಬ್ಯಾಂಕಿಂಗ್ ಶಿಬಿರದ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಮೇಲ್ವಿಚಾರಕ ಯದುನಂದ ಮಾತನಾಡಿದರು. ಬ್ಯಾಂಕ್ ಆ್ ಮಹಾರಾಷ್ಟ್ರದ ಸಿಬ್ಬಂದಿ ಆನ್‌ಲೈನ್ ಬ್ಯಾಂಕಿಂಗ್ ಮತ್ತು ಸೇವೆಗಳ ಬಗ್ಗೆ ಮಾಹಿತಿ ನೀಡಿದರು. ಗ್ರಾಪಂ ಉಪಾಧ್ಯಕ್ಷೆ ಮಂಜುಳಾ ನಿಡಗಲಕರ, ಒಕ್ಕೂಟದ ಅಧ್ಯಕ್ಷೆ ಗೀತಾ ಕುರುಬರ, ಸೇವಾ ಪ್ರತಿನಿಧಿ ಶಾರದಾ ಕಲ್ಲಣ್ಣನವರ, ರಾಜೇಶ್ವರಿ ಜಮದೂರ ಇತರರಿದ್ದರು.