ಜಿಲ್ಲೆ

ನೀರಿನ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಿ

ಸೋಮನಾಥ ರೆಡ್ಡಿ

ನರಗುಂದ: ವಿದ್ಯುತ್ ಸಮಸ್ಯೆಯಿಂದ ನರಗುಂದ ಪಟ್ಟಣ ಸೇರಿ ತಾಲೂಕಿನ ಹದ್ಲಿ, ಕುರ್ಲಗೇರಿ, ಬೋಪಳಾಪೂರ ಮುಂತಾದ ಟೇಲೆಂಡ್ ಪ್ರದೇಶದ ಗ್ರಾಮಗಳಿಗೆ ಸಮರ್ಪಕ ಕುಡಿಯುವ ನೀರು ಪೊರೈಸಲು ಸಾಧ್ಯವಾಗುತ್ತಿಲ್ಲ.

ಹೆಸ್ಕಾಂ ಅಧಿಕಾರಿಗಳು ತಕ್ಷಣ ವಿದ್ಯುತ್ ಸಮಸ್ಯೆ ಸರಿಪಡಿಸಿ ನೀರೆತ್ತುವ ಪಂಪ್‌ಗಳಿಗೆ ನಿರಂತರ ವಿದ್ಯುತ್ ಪೊರೈಕೆ ಮಾಡಬೇಕು. ಬೇಸಿಗೆಯಲ್ಲಿ ನೀರಿನ ಸಮಸ್ಯೆಯಾಗದಂತೆ ಅಧಿಕಾರಿಗಳು ಎ, ಬಿ ಪ್ಲಾö್ಯನ್ ಸಿದ್ಧಪಡಿಸಿಕೊಂಡಿರಬೇಕು ಎಂದು ಶಾಸಕ ಸಿ.ಸಿ. ಪಾಟೀಲ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಪಟ್ಟಣದ ತಾಪಂ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ನರಗುಂದ, ರೋಣ, ಗದಗ ಮೂರು ತಾಲೂಕಿನ ಕೆಡಿಪಿ ಸಭೆಯಲ್ಲಿ ಅವರು ಮಾತನಾಡಿದರು.

ಮತಕ್ಷೇತ್ರದ ಬಹುತೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಸಂಬAಧಪಟ್ಟ ಇಲಾಖೆ ಅಧಿಕಾರಿಗಳು ಒಂದು ವಾರದೊಳಗಾಗಿ ಎಲ್ಲ ಸಮಸ್ಯೆಗಳನ್ನು ಬಗೆಹರಿಸಬೇಕು. ಹದಲಿ ಗ್ರಾಮಕ್ಕೆ ಹೆಚ್ಚುವರಿ ನೀರು ಪೂರೈಸಬೇಕು.

ಹದಲಿಯಿಂದ ಬೋಪಳಾಪೂರಕ್ಕೆ ಪ್ರತ್ಯೇಕ ಪೈಪ್‌ಲೈನ್ ಮೂಲಕ ಸಮರ್ಪಕ ನೀರು ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಕುಡಿಯುವ ನೀರಿನ ಪೈಪ್‌ಲೈನ್ ಅಳವಡಿಕೆಗೆ ಎಲ್ಲೆಂದರಲ್ಲಿ ರಸ್ತೆಗಳನ್ನು ಅಗೆಯಬಾರದು.

ನರಗುಂದ ಜನರ ತಾತ್ಕಾಲಿಕ ನೀರಿನ ದಾಹ ನೀಗಿಸುವ ಸಲುವಾಗಿ ಕೆಂಪಕೇರಿಯನ್ನು ಕಾಲುವೆ ಮುಖಾಂತರ ತುಂಬಿಸಿಕೊಳ್ಳಬೇಕು. ನರಗುಂದದ ಜನತಾ ಪ್ಲಾಟ್‌ನಲ್ಲಿ ಕೊಳಚೆ ಅಭಿವೃದ್ಧಿ ಮಂಡಳಿಯಿAದ ನಿರ್ಮಾಣಗೊಳ್ಳುತ್ತಿರುವ ೫೦೦ ಆಶ್ರಯ ಮನೆಗಳನ್ನು ನಿಗಧಿತ ಅವಧಿಯೊಳಗೆ ಪೂರ್ಣಗೊಳಿಸಬೇಕು.

ಹುಬ್ಬಳ್ಳಿ-ವಿಜಯಪುರ ರಾಷ್ಟಿçÃಯ ಹೆದ್ದಾರಿ, ನರಗುಂದ-ಸವದತ್ತಿ ರಾಜ್ಯ ಹೆದ್ದಾರಿ ಮಧ್ಯದ ವಿದ್ಯುತ್ ದೀಪಗಳನ್ನು ನಿತ್ಯ ಬೆಳಗಿಸಬೇಕು. ನಗರದ ಎರಡು ಪ್ರವೇಶ ದ್ವಾರಗಳ ಅಳವಡಿಕೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಹಿಂದಿನ ಬಿಜೆಪಿ ಸರ್ಕಾರ ವಿವೇಕ ಯೋಜನೆಯಡಿ ಹೆಚ್ಚುವರಿ ಕೊಠಡಿಗಳ ನಿರ್ಮಾಣಕ್ಕೆ ಚಾಲನೆ ನೀಡಿತ್ತು. ಆದರೆ, ರೋಣ ತಾಲೂಕಿನ-೭, ಗದಗ ತಾಲೂಕಿನ-೨, ನರಗುಂದ ತಾಲೂಕಿನ ೧ ನೂತನ ಶಾಲಾ ಕೊಠಡಿ ನಿರ್ಮಾಣ ಕಾಮಗಾರಿ ಏಕೆ ಪ್ರಾರಂಭಿಸಿಲ್ಲ. ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ೬.೫೫ ಕೋಟಿ ರೂ. ಅನುದಾನ ನೀಡಿದ್ದರೂ ಗದಗ ತಾಲೂಕಿನ ೧೯ ವಿವಿಧ ಶಾಲಾ ಕೊಠಡಿಗಳ ನಿರ್ಮಾಣ ಏಕೆ ವಿಳಂಬವಾಗಿದೆ. ಶಿಕ್ಷಣ ಇಲಾಖೆ ಅಧಿಕಾರಿಗಳೇ ಅಶಿಸ್ತಿನಿಂದ ವರ್ತಿಸಿದರೆ ಮಕ್ಕಳ ಭವಿಷ್ಯವನ್ನು ಹೇಗೆ ನಿರ್ಮಾಣ ಮಾಡುತ್ತೀರಿ ಎಂದು ಪ್ರಶ್ನಿಸಿದರು.

ತೋಟಗಾರಿಕೆ ಇಲಾಖೆಯವರು ರೈತರಿಗೆ ಅಗತ್ಯ ಮಾಹಿತಿ ಒದಗಿಸುವುದರ ಜತೆಗೆ ತೋಟಗಾರಿಕೆ ಬೆಳೆ ಬೆಳೆಯುವ ಪ್ರದೇಶವನ್ನು ಹೆಚ್ಚಿಸಬೇಕು. ವಸತಿ ನಿಲಯದ ವಿದ್ಯಾರ್ಥಿನಿಯರಿಗೆ ಗುಣಮಟ್ಟದ ಆಹಾರ ವಿತರಿಸಬೇಕು.

ಅಪೌಷ್ಟಿಕ ಮಕ್ಕಳ ಆರೋಗ್ಯ ಸುಧಾರಣೆಗೆ ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಆವಿರತವಾಗಿ ಶ್ರಮಿಸಬೇಕು. ರಾಷ್ಟಿçÃಯ ಹೆದ್ದಾರಿ ನಿಗಮದ ಅಧಿಕಾರಿಗಳು ಬೈಪಾಸ್ ರಸ್ತೆ, ೬ ಫ್ಲೆÊಓವರ್ ನಿರ್ಮಾಣ ಭೂಸ್ವಾಧೀನ ಪ್ರಕ್ರಿಯೆಗೆ ಬೇಕಿರುವ ಬಾಕಿ ಮೊತ್ತವನ್ನು ಉಸ್ತುವಾರಿ ಸಚಿವರ ಗಮನಕ್ಕೆ ತಂದು ರಾಜ್ಯ ಸರ್ಕಾರದಿಂದ ಭರಿಸಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

ತಹಸೀಲ್ದಾರ್ ಎ.ಡಿ.ಅಮರಾವದಗಿ, ತಾಪಂ ಇಒ ಮಂಜುಳಾ ಹಕಾರಿ, ಚಂಬಣ್ಣ ವಾಳದ, ಮುತ್ತು ರಾಯರಡ್ಡಿ, ಪ್ರಕಾಶಗೌಡ ತಿರಕನಗೌಡ್ರ, ಎಂ.ಎಚ್. ತಿಮ್ಮನಗೌಡ್ರ, ಎಂ.ಎಸ್. ಪಾಟೀಲ ಇತರರಿದ್ದರು.

ಚುರುಕಾಗಲಿ ಅಭಿವೃದ್ಧಿ ಕಾರ್ಯ

ಸರ್ಕಾರ ಬದಲಾಗಿದೆ ಎಂದ ಮಾತ್ರಕ್ಕೆ ನಾನು ಯಾವುದೇ ಅಧಿಕಾರಿಗಳ ವರ್ಗಾವಣೆಗೆ ಒತ್ತಡ ಹಾಕುವುದಿಲ್ಲ. ಇದಕ್ಕೆ ಯಾರೊಬ್ಬರೂ ಮಹತ್ವ ನೀಡಬಾರದು. ಆಕಸ್ಮಾತ್ ವರ್ಗಾವಣೆ ಬಯಸಿದರೆ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತಂದು ಸರ್ಕಾರದ ಮಟ್ಟದಲ್ಲಿ ಮಾಡಿಸಿಕೊಳ್ಳಬೇಕು. ಇದಕ್ಕೆ ನನ್ನದೇನೂ ಅಭ್ಯಂತರವಿಲ್ಲ. ಆದರೆ, ವಿನಾಕಾರಣ ನರಗುಂದದ ಮಾಜಿ ಶಾಸಕರ ಮನೆಗೆ ಅಲೆದಾಡುವುದು ಕಂಡು ಬಂದರೆ ಅಂಥವರ ವಿರುದ್ಧ ಲೋಕಾಯುಕ್ತ ಕಾನೂನಿನ ಬ್ರಹ್ಮಾಸ್ತç ಬಳಸಲಾಗುತ್ತದೆ. ಕ್ಷೇತ್ರದ ಜನರ ಸೇವೆ ಮಾಡಲು ಯಾವುದೇ ಸಣ್ಣಮಟ್ಟದ ಇಲಾಖೆಗೆ ತೆರಳಲು ಸಿದ್ಧನಿz್ದೆÃನೆ. ಆದರೆ, ವಿರೋಧ ಪಕ್ಷದ ನಾಯಕನೆಂದು ಲಘುವಾಗಿ ಪರಿಗಣಿಸಿದರೆ ಕಾನೂನಿನ ಚೌಕಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕಾಗುತ್ತದೆ. ಕ್ಷೇತ್ರದಲ್ಲಿ ನೂರಾರು ಕೋಟಿ ರೂ. ಅಭಿವೃದ್ಧಿ ಕಾಮಗಾರಿಗಳು ನನೆಗುದಿಗೆ ಬಿದ್ದಿರುವುದು ಬೇಸರದ ಸಂಗತಿ. ಎಲ್ಲ ಇಲಾಖೆ ಅಧಿಕಾರಿಗಳು ನಿಧಾನ ಪ್ರವೃತ್ತಿಯಿಂದ ಹೊರಬರಬೇಕು ಎಂದು ಎಚ್ಚರಿಕೆ ನೀಡಿದರು.

ಸಹಾಯಧನದ ಜಾಗೃತಿ ಮೂಡಿಸಿ

ಮಕ್ಕಳ ಶೈಕ್ಷಣಿಕ, ದೈಹಿಕ ಬೆಳವಣಿಗೆ, ಆರೋಗ್ಯ ಸುಧಾರಣೆ ಹಿತದೃಷ್ಟಿಯಿಂದ ಮತಕ್ಷೇತ್ರದ ವಿವಿಧ ಅಂಗನವಾಡಿ ಕೇಂದ್ರಗಳಿಗೆ ಎಂಎಸ್‌ಪಿಸಿ ವತಿಯಿಂದ ಮಾಡುತ್ತಿರುವ ಆಹಾರ ಸರಬರಾಜು ಗುತ್ತಿಗೆಯನ್ನು ಮಾಜಿ ಶಾಸಕ ಬಿ.ಆರ್. ಯಾವಗಲ್ ಅವರ ಸೂಚನೆ ಮೇರೆಗೆ ಯಾರಿಗಾದರೂ ನೀಡಿದರೆ ಅಧಿಕಾರಿಗಳು ಮನೆಗೆ ಹೋಗಬೇಕಾಗುತ್ತದೆ. ಪ್ರಧಾನಮಂತ್ರಿ ಮಾತೃವಂದನ ಯೋಜನೆಯಡಿ ೨ನೇ ಹೆಣ್ಣು ಮಗುವಿಗೆ ನೀಡುವ ಸಹಾಯಧನ ಬಗ್ಗೆ ಜಾಗೃತಿ ಮೂಡಿಸಬೇಕು. ಸಾರ್ವಜನಿಕರಿಂದ ಯಾವುದಾದರೂ ದೂರುಗಳು ಬಂದಲ್ಲಿ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸುತ್ತೇನೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ಶಾಸಕರು ಸೂಚನೆ ನೀಡಿದರು.