ಮಾನ್ವಿ: ಗಣರಾಜ್ಯೋತ್ಸವ ದಿನ ಪ್ಲಾಸ್ಟಿಕ್ ರಾಷ್ಟ್ರ ಧ್ವಜವನ್ನು ಮಾರಾಟ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಗ್ರೇಡ್-2 ತಹಸೀಲ್ದಾರ್ ಅಬ್ದುಲ್ ವಾಹೀದ್‌ಗೆ ಹಿಂದು ಜನಜಾಗೃತಿ ತಾಲೂಕು ಸಮಿತಿ ಮನವಿ ಸಲ್ಲಿಸಿತು.
ಪ್ಲಾಸ್ಟಿಕ್ ರಾಷ್ಟ್ರ ಧ್ವಜ ತೆಗೆದುಕೊಂಡು ಕಾರ್ಯಕ್ರಮದ ನಂತರ ರಸ್ತೆಯಲ್ಲಿ ಬಿಸಾಡುವ ಮೂಲಕ ಅವಮಾನಿಸಲಾಗುತ್ತಿದೆ. ಆದ್ದರಿಂದ ರಾಷ್ಟ್ರ ಧ್ವಜ ಗೌರವ ಕೃತಿ ಸಮಿತಿ ರಚಿಸಬೇಕು.
ಪ್ಲಾಸ್ಟಿಕ್‌ನಿಂದ ತಯಾರಿಸಿ ಮಾರಾಟ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ರಾಷ್ಟ್ರಧ್ವಜ ಗೌರವಿಸುವ ಬಗ್ಗೆ ತಿಳಿಸಬೇಕು ಎಂದರು.
ತಾಲೂಕು ಸಮಿತಿ ಸಂಚಾಲಕ ಸುರೇಶ ನಾಡಗೌಡ, ನಾಗರಾಜ ಶೆಟ್ಟಿ, ವರಪ್ರಸಾದ, ನವೀನ್‌ಗೌಡ, ಚನ್ನಬಸವ, ಮಹಾಂತಯ್ಯಸ್ವಾಮಿ, ಶಾಕೀರ್ ಪಾಷಾ, ಮಲ್ಲಿಕಾರ್ಜುನ ಸ್ವಾಮಿ, ಮಂಜುನಾಥ, ವೀರೇಶ, ದುರುಗಪ್ಪ, ಮಾರುತಿ ನಾಯಕ ಇತರರಿದ್ದರು.