ಜಿಲ್ಲೆ

ಮಂಗ, ಚಿಗರಿಗಳ ಹಾವಳಿ ತಡೆಗೆ ಕ್ರಮವಹಿಸಿ, ರೈತ ಸಂಘದಿಂದ ಮನವಿ

ಹಿರೇಕೆರೂರ: ತಾಲೂಕಿನ ಆಪಿನಕೊಪ್ಪ ಗ್ರಾಮದಲ್ಲಿ ಮಂಗಗಳ ಹಾವಳಿ ತಪ್ಪಿಸಬೇಕು ಹಾಗೂ ಸಾತೇನಹಳ್ಳಿಯಲ್ಲಿ ಚಿಗರಿಗಳ ಹಾವಳಿ ತಡೆಗೆ ಆಗ್ರಹಿಸಿ ತಾಲೂಕು ವಾಸುದೇವ ಮೇಟಿ ಬಣದ ರೈತ ಸಂಘದಿಂದ ಮಂಗಳವಾರ ಪಟ್ಟಣದ ವಲಯ ಅರಣ್ಯಾಧಿಕಾರಿ ಕಚೇರಿ ಸಹಾಯಕ ಅಧಿಕಾರಿ ಡಿ.ಎಸ್. ಪೂಜಾರ ಅವರಿಗೆ ಮನವಿ ಸಲ್ಲಿಸಲಾಯಿತು.

ಜಿಲ್ಲಾ ರೈತ ಸಂಘದ ಅಧ್ಯಕ್ಷ ಹನುಮಂತಪ್ಪ ದಿವಿಗೀಹಳ್ಳಿ ಮಾತನಾಡಿ, ಆಪಿನಕೊಪ್ಪ ಗ್ರಾಮದಲ್ಲಿ ಮಂಗಗಳ ಹಾವಳಿ ಹೆಚ್ಚಾಗಿದೆ. ಅವುಗಳನ್ನು ನಿಯಂತ್ರಣ ಮಾಡಲು ಹರಸಾಹಸ ಪಡಬೇಕಾಗಿದೆ. ಗ್ರಾಮದಲ್ಲಿ ಜನರು, ಮಕ್ಕಳು ಓಡಾಡುವುದು ಕಷ್ಟವಾಗಿದೆ. ಈ ಸಮಸ್ಯೆ ಹಲವಾರು ವರ್ಷಗಳಿಂದ ಗ್ರಾಮಸ್ಥರನ್ನು ಕಾಡುತ್ತಿದ್ದರೂ ಈವರೆಗೆ ಯಾರೂ ಗಮನಹರಿಸಿಲ್ಲ. ಆದ್ದರಿಂದ ತಕ್ಷಣ ಇವುಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಶಾರದಾ ಮೇಗಳಮನಿ, ಸುರೇಶ ಸೋಮಣ್ಣನವರ, ರಮೇಶ ದೊಡ್ಡಮನಿ, ಜಯಮ್ಮ ಚಲವಾದಿ, ಮುರುಳಿ ಪಾಟೀಲ, ನಾಗರಾಜ ಹೊಟ್ಟೇರ, ರೈತರು ಇದ್ದರು.