ಕಲಾದಗಿ: ಸಮೀಪದ ಹಿರೇಶೆಲ್ಲಿಕೇರಿ ಕೆರೆಗೆ ಏತ ನೀರಾವರಿ ಯೋಜನೆ ಮೂಲಕ ನೀರು ತುಂಬಿಸುವ ಪ್ರಸಕ್ತ ವರ್ಷದ ಕಾರ್ಯಕ್ಕೆ ಪೂಜೆ ಸಲ್ಲಿಸುವ ಮೂಲಕ ಶಾಸಕ ಜೆ.ಟಿ. ಪಾಟೀಲ ಶನಿವಾರ ಚಾಲನೆ ನೀಡಿದರು.
ನಂತರ ಕೆರೆಯತ್ತ ಹರಿಯುತ್ತಿರುವ ನೀರಿನ ಹರಿವು ಪರಿಶೀಲಿಸಿ ಮಾತನಾಡಿ, ಕೆರೆಗೆ ಸಣ್ಣ ಪ್ರಮಾಣದಲ್ಲಿ ನೀರು ಹರಿದುಬರುತ್ತಿದ್ದು, ಇದರಿಂದ ಶೀಘ್ರ ತುಂಬಲು ಕಷ್ಟಕರ. ಆದ್ದರಿಂದ ನೀರಿನ ಹರಿವು ಸಾಮರ್ಥ್ಯ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕೆಂದು ಸಣ್ಣ ನೀರಾವರಿ ಮತ್ತು ಅಂತರ್ಜಲ ಇಲಾಖೆಯ ಎಇಇ ಪ್ರಕಾಶ ನಾಯಕ ಅವರಿಗೆ ಸೂಚಿಸಿದರು.
ಅಲ್ಲದೆ ಕೆರೆಯಲ್ಲಿನ ಮುಳ್ಳುಕಂಟಿ ತೆರವುಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಪಿಡಿಒ ಮುಲ್ಲಾ ಅವರಿಗೆ ತಿಳಿಸಿದರು.
ಮುಖಂಡರಾದ ಹನುಮಂತ ಮಕಾನಿ, ವಿರೂಪಾಕ್ಷ ಬಡಿಗೇರ, ಸವಿತಾ ಬಿಸಾಳೆ, ಹನುಮಂತ ಮರಪುಲಿ, ಮುದುಕಪ್ಪ ಮಾದರ,ಪಕೀರಪ್ಪ ಮಾದರ, ವಿಠಲ ಬಳಗಲಿ, ಸಣ್ಣ ನೀರಾವರಿ ಮತ್ತು ಅಂತರ್ಜಲ ಇಲಾಖೆಯ ಎಇಇ ಪ್ರಕಾಶ ನಾಯಕ, ಪಿಡಿಒ ಮುಲ್ಲಾ ಇತರರಿದ್ದರು.