ರಾಯಚೂರಿನ ಎಲ್‌ವಿಡಿ ಕಾಲೇಜಿನಲ್ಲಿ ಶುಕ್ರವಾರ ಏರ್ಪಡಿಸಿದ್ದ ಪೌಷ್ಠಿಕ ಆಹಾರ ಮಾಸಾಚರಣೆ ಸಮಾರೋಪ ಸಮಾರಂಭದಲ್ಲಿ ಅಪರ ಜಿಲ್ಲಾಕಾರಿ ಡಾ.ಕೆ.ಆರ್.ದುರಗೇಶ ಮಾತನಾಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಚೇತನಕುಮಾರ, ಭಾರತ ಸೇವಾದಳದ ವಿಭಾಗೀಯ ಸಂಚಾಲಕ ವಿದ್ಯಾಸಾಗರ ಚಿಣಮಗೇರಿ, ಎಲ್‌ವಿಡಿ ಕಾಲೇಜು ಪ್ರಾಚಾರ್ಯ ಡಾ.ವೆಂಕಟೇಶ ದೇವರು ಇದ್ದರು. 
ಜಿಲ್ಲೆ

ಮಕ್ಕಳಲ್ಲಿ ಪೌಷ್ಠಿಕತೆ ಹೆಚ್ಚಳಕ್ಕೆ ಕ್ರಮಕೈಗೊಳ್ಳಿ

ರಾಯಚೂರು: ಕೇಂದ್ರ ಸರ್ಕಾರದ ಪೋಷಣ್ ಅಭಿಯಾನವನ್ನು ಸಮರ್ಪಕವಾಗಿ ಬಳಸಿಕೊಂಡು ಅಪೌಷ್ಠಿಕ ಮಕ್ಕಳಲ್ಲಿ ಪೌಷ್ಠಿಕತೆ ಹೆಚ್ಚಿಸಲು ಅಂಗನವಾಗಿ ಕಾರ್ಯಕರ್ತೆಯರು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ಅಪರ ಜಿಲ್ಲಾಕಾರಿ ಡಾ.ಕೆ.ಆರ್.ದುರಗೇಶ ತಿಳಿಸಿದರು.
ಸ್ಥಳೀಯ ಎಲ್‌ವಿಡಿ ಕಾಲೇಜು ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪೌಷ್ಠಿಕ ಆಹಾರ ಮಾಸಾಚರಣೆ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಅಪೌಷ್ಠಿಕ ಮಕ್ಕಳ ಸಂಖ್ಯೆ ಹೆಚ್ಚಾಗಿದ್ದು, ಸರ್ಕಾರ ಅಪೌಷ್ಠಿಕತೆ ತಡೆಯಲು ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಅವುಗಳನ್ನು ಸಮರ್ಪಕವಾಗಿ ಜಾರಿಗೊಳಿಸಲು ಪ್ರಯತ್ನಿಸಬೇಕು ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಚೇತನಕುಮಾರ ಮಾತನಾಡಿ, ಗರ್ಭೀಣಿಯರು ದಿನಕ್ಕೆ ಐದಾರು ಬಾರಿ ಆಹಾರ ಸೇವನೆ ಮಾಡಬೇಕು. ಪೌಷ್ಠಿಕ ಆಹಾರ ಸೇವನೆ ಮಾಡಿದಾಗ ಮಾತ್ರ ಮಗು ಆರೋಗ್ಯವಂತವಾಗಿರುತ್ತಿದ್ದು, ಮಕ್ಕಳಿಗೆ ತಪ್ಪದೇ ಎದೆ ಹಾಲನ್ನು ನೀಡಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಭಾರತ ಸೇವಾದಳದ ವಿಭಾಗೀಯ ಸಂಚಾಲಕ ವಿದ್ಯಾಸಾಗರ ಚಿಣಮಗೇರಿ, ಶಿಶು ಅಭಿವೃದ್ಧಿ ಯೋಜನಾಕಾರಿ ವೆಂಕಟೇಶ ದೇಸಾಯಿ, ಎಲ್‌ವಿಡಿ ಕಾಲೇಜು ಪ್ರಾಚಾರ್ಯ ಡಾ.ವೆಂಕಟೇಶ ದೇವರು, ಉಪ ಪ್ರಾಚಾರ್ಯ ಡಾ.ಆಂಜಿನಯ್ಯ, ಕೇಂದ್ರ ಸಂವಹನ ಇಲಾಖೆ ಸಹಾಯಕಾಕಾರಿ ಸಿ.ಕೆ.ಸುರೇಶ ಉಪಸ್ಥಿತರಿದ್ದರು.