ವೈದ್ಯಕೀಯ ಶಿಕ್ಷಣಕ್ಕೆ ಸರ್ಕಾರಿ ಕೋಟಾದಡಿ ಉಚಿತ ಸ್ಥಾನ ಗಳಿಸಿದ ತಾಲೂಕಿನ ಕಪರನಕೊಪ್ಪಲು ಗ್ರಾಮದ ರವಿಕುಮಾರ್ ಅವರ ಪುತ್ರ ವಿದ್ಯಾರ್ಥಿ ಹರ್ಷಗೆ ಭಾನುವಾರ ಬಿಜೆಪಿ ಮುಖಂಡ ಇಂಡುವಾಳು ಎಸ್.ಸಚ್ಚಿದಾನಂದ ಎನ್. ಶಂಕರಗೌಡ ಚಾರಿಟಬಲ್ ಟ್ರಸ್ಟ್‌ನಿಂದ ಲ್ಯಾಪ್‌ಟಾಪ್ ವಿತರಿಸಿದರು. ಸತೀಶ್, ಗುಣವಂತ, ದಯಾನಂದ್, ಮಹೇಶ್, ಕೆ. ಜಯರಾಂ, ಪರಮೇಶ್, ಶಂಕರ್, ದಿವಾಕರ್, ರಾಮಣ್ಣ ಇದ್ದರು. 
ಜಿಲ್ಲೆ

ಖಾಲಿ ಹುದ್ದೆಗಳ ಭರ್ತಿಗೆ ಕ್ರಮ ವಹಿಸಿ

ಲೋಕೇಶ್ ಮನು. ಡಿ

ಶ್ರೀರಂಗಪಟ್ಟಣ: ಶಿಕ್ಷಣ, ಕೃಷಿ, ಆರೋಗ್ಯ, ಕಂದಾಯ ಸೇರಿದಂತೆ ಸರ್ಕಾರದ ಹಲವು ಇಲಾಖೆಗಳಲ್ಲಿ ಶೇ.15ರಷ್ಟು ವಿವಿಧ ಹುದ್ದೆಗಳು ಖಾಲಿ ಇದ್ದು, ರಾಜ್ಯ ಕಾಂಗ್ರೆಸ್ ಸರ್ಕಾರ ಖಾಲಿ ಹುದ್ದೆಗಳ ಭರ್ತಿಗೆ ಶೀಘ್ರ ಕ್ರಮ ವಹಿಸಬೇಕು ಎಂದು ಬಿಜೆಪಿ ಮುಖಂಡ ಇಂಡುವಾಳು ಎಸ್.ಸಚ್ಚಿದಾನಂದ ಆಗ್ರಹಿಸಿದರು.

ತಾಲೂಕಿನ ಕಪರನಕೊಪ್ಪಲು ಗ್ರಾಮದ ರವಿಕುಮಾರ್ ಅವರ ಪುತ್ರ ಹರ್ಷ ಪ್ರಸಕ್ತ ಸಾಲಿನಲ್ಲಿ ವೈದ್ಯಕೀಯ ಶಿಕ್ಷಣ ಪ್ರವೇಶಕ್ಕೆ ಸರ್ಕಾರಿ ಕೋಟಾದಲ್ಲಿ ಉಚಿತ ಸೀಟು ಪಡೆದಿದ್ದು, ಎನ್.ಶಂಕರಗೌಡ ಚಾರಿಟಬಲ್ ಟ್ರಸ್ಟ್ ವತಿಯಿಂದ ಭಾನುವಾರ ಲ್ಯಾಪ್‌ಟಾಪ್ ವಿತರಿಸಿ ಮಾತನಾಡಿದರು.

ಶಿಕ್ಷಣ ಇಲಾಖೆಯಲ್ಲಿ ಶಿಕ್ಷಕರು ಹಾಗೂ ಉಪನ್ಯಾಸಕರ ಹುದ್ದೆಗಳು ಖಾಲಿ ಇರುವುದರಿಂದ ವಿದ್ಯಾರ್ಥಿಗಳಿಗೆ ಸಮರ್ಪಕ ಶಿಕ್ಷಣ ಸಿಗುತ್ತಿಲ್ಲ. ಅತಿಥಿ ಶಿಕ್ಷಕರು ಮತ್ತು ಉಪನ್ಯಾಸಕರನ್ನು ಸಕಾಲಕ್ಕೆ ನೇಮಕ ಮಾಡುತ್ತಿಲ್ಲ. ಆರೋಗ್ಯ ಇಲಾಖೆಯಲ್ಲಿ ಕೂಡ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಹುದ್ದೆಗಳು ಖಾಲಿ ಉಳಿದಿವೆ. ಲೋಕೋಪಯೋಗಿ ಮತ್ತು ಪಂಚಾಯತ ರಾಜ್ ಇಲಾಖೆಗಳಲ್ಲಿ ಇಂಜಿನಿಯರ್ ಹುದ್ದೆಗಳನ್ನು ಹಲವು ವರ್ಷಗಳಿಂದ ಭರ್ತಿ ಮಾಡಿಲ್ಲ. ಇದರಿಂದ ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ. ಉದ್ಯೋಗಾಕಾಂಕ್ಷಿಗಳಿಗೆ ಕೆಲಸ ಕೊಡಲು ಸರ್ಕಾರ ವಿಫಲವಾಗಿದೆ ಎಂದು ದೂರಿದರು.

ಇದೇ ವೇಳೆ ಜೂನಿಯರ್ ಐಸ್ ಸ್ಕೇಟಿಂಗ್ ಸ್ಪರ್ಧೆಯ ಏಶಿಯನ್ ಚಾಂಪಿಯನ್‌ಶಿಪ್ ಕೂಟಕ್ಕೆ ಅರ್ಹತೆ ಪಡೆದ ಪಾಂಡವಪುರ ತಾಲೂಕಿನ ಹಿರೇಮರಳಿ ಗ್ರಾಮದ ಅರುಣ್ ಗೌಡ ಅವರ ಪುತ್ರ ದುವನ್‌ಗೌಡ ಹಾಗೂ ತರಬೇತುದಾರ ಮುರಳಿ ಅವರನ್ನು ಸಹ ಸಚ್ಚಿದಾನಂದ ಅಭಿನಂದಿಸಿದರು.

ಮುಖಂಡರಾದ ಸತೀಶ್, ಗುಣವಂತ, ದಯಾನಂದ್, ಮಹೇಶ್, ಕೆ. ಜಯರಾಂ, ಪರಮೇಶ್, ಶಂಕರ್, ದಿವಾಕರ್, ರಾಮಣ್ಣ, ರಾಜೇಶ್, ಪ್ರಸನ್ನ, ನಿತಿನ್, ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ಬಲ್ಲೇನಹಳ್ಳಿ ಬಿ.ಸಿ. ಕೃಷ್ಣೇಗೌಡ, ದರ್ಶನ್ ಲಿಂಗರಾಜು, ಚಂದ್ರಣ್ಣ, ಹರೀಶ್, ಪಾಪಣ್ಣ, ರಂಜಿತ್ ಈ ಸಂದರ್ಭದಲ್ಲಿ ಇದ್ದರು.