ರಾಯಚೂರಿನ ಜಿಲ್ಲಾಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಕಾರಿ ಚಂದ್ರಶೇಖರ ನಾಯಕ ಅಧ್ಯಕ್ಷತೆಯಲ್ಲಿ ಮಂಗಳವಾರ ಅಬಕಾರಿ ಇಲಾಖೆ ಜಿಲ್ಲಾ ಮಟ್ಟದ ಸ್ಥಾಯಿ ಸಮಿತಿ ಸಭೆ ಜರುಗಿತು. ಜಿ.ಪಂ. ಸಿಇಒ ರಾಹುಲ್ ತುಕಾರಾಮ್ ಪಾಂಡ್ವೆ, ಎಸ್ಪಿ ಬಿ.ನಿಖಿಲ್, ಡಿಎಚ್‌ಒ ಡಾ.ಸುರೇಂದ್ರಬಾಬು, ಪ್ರಾದೇಶಿಕ ಸಾರಿಗೆ ಅಕಾರಿ ಜೆ.ಟಿ.ವಿನಯಾ, ಅಬಕಾರಿ ಇಲಾಖೆ ಉಪ ಅೀಕ್ಷಕ ಬಿ.ಕೃಷ್ಣಹರಿ, ನಿರೀಕ್ಷಕ ಹನುಮಂತ ಗುತ್ತೇದಾರ, ರೈಲ್ವೆ ಪೊಲೀಸ್ ಅಕಾರಿ ಅಭಿಷೇಕ ಕುಮಾರ ಇದ್ದರು. 
ಜಿಲ್ಲೆ

ಸಿಎಚ್ ಪೌಡರ್ ಮಾರಾಟ ನಿರ್ಮೂಲನೆಗೆ ಕ್ರಮಕೈಗೊಳ್ಳಿ

ರಾಯಚೂರು: ಜಿಲ್ಲೆಯಲ್ಲಿ ಸೇಂದಿ, ಕಳ್ಳಬಟ್ಟಿ ಸರಾಯಿ, ಸಿಎಚ್ ಪೌಡರ್ ಮಾರಾಟ ಮತ್ತು ಸಾಗಣೆಯನ್ನು ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಅಬಕಾರಿ ಇಲಾಖೆ ಅಕಾರಿಗಳು ಇನ್ನಿತರ ಇಲಾಖೆ ಅಕಾರಿಗಳೊಂದಿಗೆ ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಕಾರಿ ಚಂದ್ರಶೇಖರ ನಾಯಕ ಸೂಚಿಸಿದರು.
ಸ್ಥಳೀಯ ಜಿಲ್ಲಾಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜರುಗಿದ ಅಬಕಾರಿ ಇಲಾಖೆ ಜಿಲ್ಲಾ ಮಟ್ಟದ ಸ್ಥಾಯಿ ಸಮಿತಿ ಸಭೆ ಅಧ್ಯಕ್ಷ ತೆ ವಹಿಸಿ ಮಾತನಾಡಿ, ಕಾನೂನು ಬಾಹೀರ ಚಟುವಟಿಕೆಗಳನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಗುಪ್ತ ಮಾಹಿತಿ ಪಡೆದು ದಾಳಿ ನಡೆಸಬೇಕು ಎಂದರು.
ಕಳ್ಳಬಟ್ಟಿ, ಸೇಂದಿ, ಸಿಎಚ್ ಪೌಡರ್ ಮಾರಾಟ, ಸಂಗ್ರಹ ಕಂಡುಬಂದಲ್ಲಿ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಅಕ್ರಮ ಚಟುವಟಿಕೆಯಲ್ಲಿ ತೊಡಗಿಕೊಂಡವರ ಗಡಿಪಾರಿಗೆ ಪ್ರಸ್ತಾವನೆ ಸಲ್ಲಿಸಬೇಕು. ಮಹಿಳೆಯರು ಮತ್ತು ಮಕ್ಕಳು ಅಂತಹ ಚಟುವಟಿಕೆಗಳಿಂದ ಹೊರತರಬೇಕು.
ಮಹಿಳೆಯರಿಗೆ ಸರ್ಕಾರದ ಯೋಜನೆಯಡಿ ಸೌಲಭ್ಯ ಕಲ್ಪಿಸಿ ತರಬೇತಿ ನೀಡಿ ಉದ್ಯೋಗ ಒದಗಿಸುವ ಕಾರ್ಯಕ್ಕೆ ಮುಂದಾಗಬೇಕು. ಮಕ್ಕಳನ್ನು ಕಾನೂನು ಬಾಹಿರ ಚಟುವಟಿಕೆಯಿಂದ ಹೊರತಂದು ಶಾಲೆಗಳಿಗೆ ದಾಖಲಿಸುವ ಕೆಲಸ ಮಾಡಬೇಕು.
ಆರೋಗ್ಯ ಇಲಾಖೆಯಿಂದ ಸೇಂದಿ, ಕಳ್ಳಬಟ್ಟಿ ಸರಾಯಿ ವ್ಯಸನಿಗಳಿಗೆ ವೈದ್ಯಕೀಯ ತಪಾಸಣೆ ನಡೆಸಿ ವ್ಯಸನಮುಕ್ತ ಕೇಂದ್ರಗಳಿಗೆ ಕಳುಹಿಸಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಜಾಗೃತಿ ಕಾರ್ಯಕ್ರಮ ಮತ್ತು ಆರೋಗ್ಯ ತಪಾಸಣೆ ಶಿಬಿರನ್ನು ನಡೆಸಬೇಕು ಎಂದು ಚಂದ್ರಶೇಖರ ನಾಯಕ ಸೂಚಿಸಿದರು.
ಸಭೆಯಲ್ಲಿ ಜಿ.ಪಂ. ಸಿಇಒ ರಾಹುಲ್ ತುಕಾರಾಮ್ ಪಾಂಡ್ವೆ, ಎಸ್ಪಿ ಬಿ.ನಿಖಿಲ್, ಡಿಎಚ್‌ಒ ಡಾ.ಸುರೇಂದ್ರಬಾಬು, ಪ್ರಾದೇಶಿಕ ಸಾರಿಗೆ ಅಕಾರಿ ಜೆ.ಟಿ.ವಿನಯಾ, ಅಬಕಾರಿ ಇಲಾಖೆ ಉಪ ಅೀಕ್ಷಕ ಬಿ.ಕೃಷ್ಣಹರಿ, ನಿರೀಕ್ಷಕ ಹನುಮಂತ ಗುತ್ತೇದಾರ, ರೈಲ್ವೆ ಪೊಲೀಸ್ ಅಕಾರಿ ಅಭಿಷೇಕ ಕುಮಾರ, ಶಿಶು ಅಭಿವೃದ್ಧಿ ಅಕಾರಿ ಶರಣಮ್ಮ ಉಪಸ್ಥಿತರಿದ್ದರು.