ಕಂಪ್ಲಿ ತಾಲೂಕಿನ ರಾಮಸಾಗರದಲ್ಲಿ ಶಾಸಕ ಜೆ.ಎನ್.ಗಣೇಶ್‌ಗೆ ಅಖಿಲ ಕರ್ನಾಟಕ ರಾಜ್ಯ ಕಿಸಾನ್ ಜಾಗೃತಿ ಸಂಘದ ಪದಾಧಿಕಾರಿಗಳು ಮನವಿ ಸಲ್ಲಿಸಿದರು. ಅಧ್ಯಕ್ಷರಾದ ಬಿ.ಗಂಗಾಧರ, ಮಂಜುನಾಥ, ಪದಾಧಿಕಾರಿಗಳಾದ ಕುಬೇರಪ್ಪ, ಶ್ರೀನಿವಾಸ ಇತರರಿದ್ದರು. 
ಜಿಲ್ಲೆ

ಕೆರೆಗಳನ್ನು ಅಭಿವೃದ್ಧಿಗೊಳಿಸಲು ಕ್ರಮವಹಿಸಿ

ರುದ್ರಪ್ಪ ವಾಲಿ

ಕಂಪ್ಲಿ: ತಾಲೂಕಿನ ಮುದ್ದಾಪುರ ಗೌರಮ್ಮ ಕೆರೆ, ರಾಮಸಾಗರದ ವಿಠ್ಠಲಾಪುರ ಕೆರೆ ಸುತ್ತಲಿನ ಅರಣ್ಯಗಿಡಗಳನ್ನು ತೆರವುಗೊಳಿಸಿ ಕೆರೆಗಳನ್ನು ಅಭಿವೃದ್ಧಿಗೊಳಿಸುವಂತೆ ಅಖಿಲ ಕರ್ನಾಟಕ ರಾಜ್ಯ ಕಿಸಾನ್ ಜಾಗೃತಿ ಸಂಘದ ಪದಾಧಿಕಾರಿಗಳು ಸೋಮವಾರ ರಾಮಸಾಗರದಲ್ಲಿ ಶಾಸಕ ಜೆ.ಎನ್.ಗಣೇಶ್‌ಗೆ ಮನವಿ ಸಲ್ಲಿಸಿದರು.

ಜಿಲ್ಲಾಧ್ಯಕ್ಷ ಬಿ.ಗಂಗಾಧರ ಮಾತನಾಡಿ, ಗೌರಮ್ಮ ಮತ್ತು ವಿಠ್ಠಲಾಪುರ ಕೆರೆಗಳು ಈ ಭಾಗದ ರೈತರ ಜೀವನಾಡಿಯಾಗಿವೆ. ಕೆರೆಗಳ ತೂಬುಗಳು ದುರಸ್ತಿಗೆ ಬಂದಿವೆ.

ಎಲ್.ಎಲ್ ಕಾಲುವೆಯಿಂದ ಕೆರೆಗೆ ನೀರು ಒದಗಿಸುವ ಮಡಿಗಳು ದುರಸ್ತಿಗೆ ಬಂದಿವೆ. ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಕೆರೆಗಳನ್ನು ಅಭಿವೃದ್ಧಿಗೊಳಿಸುವ ಮೂಲಕ ರೈತರಿಗೆ ಸಮರ್ಪಕವಾಗಿ ನೀರೊದಗಿಸುವ ಕ್ರಮ ಕೈಗೊಳ್ಳುವಂತೆ ಶಾಸಕರನ್ನು ಒತ್ತಾಯಿಸಿದರು.