ರಾಮನಗರ ಜಿಪಂ ಸಭಾಂಗಣದಲ್ಲಿ ಸಚಿವ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ಕರೆದಿದ್ದ ಕೆಡಿಪಿ ಸಭೆಯಲ್ಲಿ ಶಾಸಕ ಎಚ್​.ಸಿ.ಬಾಲಕೃಷ್ಣ, ಸಿ.ಪಿ.ಯೋಗೇಶ್ವರ್​ ಮುಂತಾದವರು ಇದ್ದರು. ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯ ಕೆ. ರಾಜು, ಜಿಲ್ಲಾ-ಧಿಕಾರಿ ಯಶವಂತ್​ ವಿ ಗುರುಕರ್​, ಎಡಿಸಿ ಚಂದ್ರಯ್ಯ ಆರ್​. ಇದ್ದರು. 
ಜಿಲ್ಲೆ

ಸುಳ್ಳು ಸುದ್ದಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಿ

ರೇಷ್ಮೆ ನಗರ ಡೆಸ್ಕ್

ರಾಮನಗರ : ಸುಳ್ಳು ಸುದ್ದಿ ನಿಯಂತ್ರಣ ಆಗಬೇಕಾದರೆ ಮೊದಲಿಗೆ, ಇಂತಹ ಸುದ್ದಿ ಹರಡುವವರ ವಿರುದ್ಧ ಕಾನೂನಿನ ಕ್ರಮ ಆಗಬೇಕು. ಈ ನಿಟ್ಟಿನಲ್ಲಿ ಪೊಲೀಸ್​ ಇಲಾಖೆ ಕ್ರಮವಹಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಸೂಚನೆ ನೀಡಿದರು. ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ತೆಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ

ಅಧ್ಯತೆ ವಹಿಸಿ ಮಾತನಾಡಿದರು.

ಸಾಮಾಜಿಕ ಮಾಧ್ಯಮಗಳ ಮೂಲಕ ಅಪಪ್ರಚಾರ ಮಾಡುವವರ ವಿರುದ್ಧ ಪೊಲೀಸರು ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿ, ಕಾನೂನು ರೀತಿ ಕ್ರಮ ತೆಗೆದುಕೊಳ್ಳಬೇಕು. ಈ ರೀತಿಯ ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ ಶಿೆ ಆದಾಗ ಇಂತಹ ಟನೆಗಳಿಗೆ ಕಡಿವಾಣ ಹಾಕಬಹುದು ಎಂದರು.

ಬಿಡದಿಯ ಭದ್ರಾಪುರದಲ್ಲಿ ಇತ್ತೀಚೆಗೆ ನಡೆದ ಟನೆ ಕುರಿತಂತೆಯೂ ಸಾರ್ವಜನಿಕರ ನೈಜ ಮಾಹಿತಿಯನ್ನು ಪೊಲೀಸರು ತಿಳಿಸಿಕೊಡಿ ಎಂದು ಸಲಹೆ ನೀಡಿದರು.

ಈ ವೇಳೆ ಪ್ರತಿಕ್ರಿಯಿಸಿದ ಎಸ್​ಪಿ ಶ್ರೀನಿವಾಸ್​ ಗೌಡ, ಅಪಪ್ರಚಾರ ಸಂಬಂಧ 11 ಪ್ರಕರಣಗಳು ದಾಖಲಾಗಿದ್ದು, 9 ಪ್ರಕರಣಗಳಲ್ಲಿ ಚಾರ್ಜ್​ ಶೀಟ್​ ಸಲ್ಲಿಕೆಯಾಗಿದೆ, ಎರಡು ಪ್ರಕರಣಗಳು ವಿಚಾರಣೆಯ ಹಂತದಲ್ಲಿವೆ ಎಂದರು. ಜಿಲ್ಲೆಯ ಹೆದ್ದಾರಿ ಸೇರಿ ಎಲ್ಲೆಡೆ ಸಿಸಿ ಕ್ಯಾಮರಾ ಅಳವಡಿಸಲಾಗುತ್ತಿದೆ. 10,600 ಸಿಸಿ ಕ್ಯಾಮರಾಗಳನ್ನು ಜಿಯೋ ಟ್ಯಾಗಿಂಗ್​ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಎಚ್ಚರವಹಿಸಿ: ಮುಂಗಾರಿನಲ್ಲಿ ಗಾಳಿ ಮಳೆಗೆ ವಿದ್ಯುತ್​ ಅವಡ ನಡೆಯದಂತೆ ಬೆಸ್ಕಾಂ ಎಚ್ಚರವಹಿಸಬೇಕು. ಟ್ರಾನ್ಸ್​ ಾ-ರ್ಮರ್​ಗಳನ್ನು ತಣವೇ ಅಳವಡಿಸಬೇಕು. ಗಂಗಾ ಕಲ್ಯಾಣ ಯೋಜನೆಯಡಿ ಹಾಕಲಾಗುವ ಕೊಳವೆಬಾವಿಗೆ ಕೂಡಲೇ ವಿದ್ಯುತ್​ ಸಂಪರ್ಕ ಕೊಡಬೇಕು ಎಂದು ಸಚಿವರು ಬೆಸ್ಕಾಂ ಅಧಿಕಾರಿಗಳು ನಿರ್ದೇಶನ ನೀಡಿದರು. 163 ಕೊಳವೆಬಾವಿಗಳಲ್ಲಿ 162ಕ್ಕೆ ವಿದ್ಯುತ್​ ಸಂಪರ್ಕ ಕಲ್ಪಿಸಲಾಗಿದೆ 1,537 ಟ್ರಾನ್ಸ-ರ್​ ಮಾಡಿ ಟೆಂಡರ್​ ಆಗಿವೆ ಎಂದು ಬೆಸ್ಕಾಂ ಅ-ಧಿಕಾರಿಗಳು ಮಾಹಿತಿ ನೀಡಿದರು.

ಮಿನಿ ಬಸ್​ ಕೊಡಿಸಿ: ಕೆಲವೊಂದು ಹಳ್ಳಿಗಳಲ್ಲಿ ಕಡಿದಾದ ರಸ್ತೆ ಇದ್ದು, ಅಲ್ಲಿ ಓಡಿಸುವುದಕ್ಕೆ ಸಣ್ಣ ಬಸ್ಸುಗಳ ಅಗತ್ಯವಿದೆ ಎಂದು ಸಭೆಯಲ್ಲಿ ಕೆಡಿಪಿ ನಾಮ ನಿರ್ದೇಶಕ ಸದಸ್ಯರು ಕೋರಿದಾಗ, ಈ ಸಂಬಂಧ ಪರಿಶೀಲನೆ ನಡೆಸಿ ಬಸ್​ ಕೊಡಿಸುವ ಭರವಸೆಯನ್ನು ಸಚಿವರು ನೀಡಿದರು.

ಕೆಎಸ್​ಆರ್​ಟಿಯ ಬಸ್​ಗಳು ಜಿಲ್ಲೆಯ ಕನಕಪುರ ಚನ್ನಪಟ್ಟಣ ಸೇರಿ ವಿವಿಧ ತಾಲೂಕುಗಳಲ್ಲಿ ಬಸ್​ ಸೌಲಭ್ಯವಿಲ್ಲದ ಸ್ಥಳಗಳು ಹಳ್ಳಿಗಳಿಗೆ ಕೂಡಲೇ ಬಸ್​ ಸೌಲಭ್ಯ ಕಲ್ಪಿಸಿ ಕೊಡುವಂತೆ ಹಾಗೂ ಶಾಲಾ ಸಮಯಸಲ್ಲಿ ಹೆಚ್ಚುವರಿ ಬಸ್​ ಗಳನ್ನು ಹಾಕಿಕೊಡುವ ವ್ಯವಸ್ಥೆ ಮಾಡುವಂತೆ ಕೆಎಸ್​ಆರ್​ಟಿಸಿಯ ವಿಭಾಗೀಯ ನಿಯಂತ್ರಣ ಅಧಿ-ಕಾರಿಗಳಿಗೆ ನಿರ್ದೇಶನ ನೀಡಿದರು. ಕುಡಿಯುವ ನೀರು ಪೂರೆಕೆಗೆ ಸಂಬಂ-ಸಿದಂತೆ ಈಗಾಗಲೇ ಮುಖ್ಯಮಂತ್ರಿ ಅವರು ರಾಜ್ಯದ ಎಲ್ಲ ಜಿಲ್ಲಾ ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, ಸೂಕ್ತವಾದ ನಿರ್ದೇಶನ ನೀಡಿದ್ದಾರೆ. ಕುಡಿಯುವ ನೀರು ಪೂರೆಸುತ್ತಿದ್ದ ಬೋರ್​ವೆಲ್​ಗಳು ಬರಿದಾಗಿದ್ದಲ್ಲಿ ಸಂಬಂಧಿ-ಸಿದ ತಾಲೂಕಿನ ಇಒ ಆ ೇತ್ರದ ಶಾಸಕರೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸಬೇಕು. ನೀರು ಲಭ್ಯವಿಲ್ಲದಿರ ಟ್ಯಾಂಕರ್​ ಮೂಲಕ ನೀರು ಪೂರೆಕೆ

ಮಾಡುವಂತೆ ಸಚಿವರು ಸೂಚಿಸಿದರು. ಶಾಸಕರಾದ ಇಕ್ಬಾಲ್​ ಹುಸೇನ್​, ಎಚ್​.ಸಿ. ಬಾಲಕಷ್ಣ, ಸಿ.ಪಿ. ಯೋಗೇಶ್ವರ್​, ಎಂಎಲ್​ಸಿ ಸುಧಾಮ್​ ದಾಸ್​ ಮಾತನಾಡಿದರು.

ಸೈನ್ಯವನ್ನು ಕಾಂಗ್ರೆಸ್​ ಎಂದೂ ಅಪಮಾನಿಸಿಲ್ಲ : ಕೋಲಾರ ಶಾಸಕ ಕೊತ್ತೂರು ಮಂಜುನಾಥ್​ ಬಿಜೆಪಿ ನಾಯಕರ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆಯೇ ಹೊರತು ಸೈನ್ಯದ ಬಗ್ಗೆ ಅಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು. ರಾಮನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸೈನ್ಯದ ಬಗ್ಗೆ ಕಾಂಗ್ರೆಸ್​ ಎಂದೂ ಅಪಮಾನ ಮಾಡಿಲ್ಲ, ಕೊತ್ತೂರು ಮಂಜುನಾಥ್​ಗೆ ಸೈನ್ಯದ ಬಗ್ಗೆ ವಿಶ್ವಾಸ ಇದೆ. ಅವರು ಪಕ್ಕಾ ದೇಶಾಭಿಮಾನಿ. ಸೈನ್ಯದ ಬಗ್ಗೆ ಅವರು ತಪ್ಪು ಮಾತನಾಡಿಲ್ಲ ಎಂದರು. ರಾಮನಗರ ಗ್ರೇಟರ್​ ಬೆಂಗಳೂರು ಟೌನ್​ ಶಿಪ್​ ವಿರೋಧಿಸಿ ರೈತರ ಪ್ರತಿಭಟನೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಶಾಸಕ ಎಚ್​.ಸಿ.ಬಾಲಕೃಷ್ಣ, ವಿಪಕ್ಷ ನಾಯಕರು ಕಂದಾಯ ಸಚಿವರಾಗಿದ್ದಾಗ ಇದನ್ನು ಸರಿಪಡಿಸಬಹುದಿತ್ತು. ಆದರೆ, ಆಗ ಸರಿಪಡಿಸದೆ ಈಗ ರೈತರ ಜತೆ ಹೋರಾಟಕ್ಕೆ ಬಂದಿರೋದು ವಿಪರ್ಯಾಸ. ಅದು ಶುರುವಾಗಿದ್ದೇ ಕುಮಾರಸ್ವಾಮಿ ಕಾಲದಲ್ಲಿ. ಅವರು ಸಿಎಂ ಆಗಿದ್ದಾಗಲೇ ಯೋಜನೆ ಕೈಬಿಡಬೇಕಿತ್ತು. ಅಲ್ಲಿ ರೈತರಲ್ಲೇ ವಿಭಿನ್ನವಾದ ಅಭಿಪ್ರಾಯ ಇದೆ. ಕೆಲವರು ಈಗಿರುವ ರೆಡ್​ ಜೋನ್​ ತೆಗೆದು ಭೂಸ್ವಾಧಿನ ಮಾಡಿ ಅಂತಾರೆ. ಮತ್ತೆ ಕೆಲವರು ನಮಗೆ ಭೂಸ್ವಾಧಿನ ಬೇಡ, ಕೃಷಿ ಭೂಮಿ ಉಳಿಸಿಕೊಡಿ ಅಂತಾರೆ. ಶೇ. 70 ಜನ ಇದಕ್ಕೆ ಒಪ್ಪಿಗೆ ನೀಡಿದ್ರೆ ಇನ್ನುಳಿದವರು ಆೇಪಣೆ ಸಲ್ಲಿಸಿದ್ದಾರೆ. ಇದರ ಬಗ್ಗೆ ಸಾಧಕ ಬಾಧಕ ಚರ್ಚೆ ಮಾಡುತ್ತೇವೆ. ಡಿಸಿ ನೇತೃತ್ವದಲ್ಲಿ ಸಭೆ ಮಾಡಿ ಸಮಸ್ಯೆ ಬಗೆಹರಿಸುವ ಕೆಲಸ ಮಾಡುತ್ತೇವೆ ಎಂದರು.

ವಿಶೇಷ ತರಬೇತಿ ನೀಡಿ : ಜಿಲ್ಲೆಯಲ್ಲಿ ಈ ಸಾಲಿನ ಎಸ್ಸೆಸ್ಸೆಲ್ಸಿ ಹಾಗೂ ದ್ವೀತಿಯ ಪಿಯುಸಿಯಲ್ಲಿ ಉತ್ತಮ ಲಿತಾಂಶ ಪಡೆಯುವ ನಿಟ್ಟಿನಲ್ಲಿ ವರ್ಷದ ಆರಂಭದಿಂದಲೇ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ನಡೆಸುವ ಮೂಲಕ ಸಜ್ಜುಗೊಳಿಸಬೇಕು. ಈ ಸಂಬಂಧ ನೇಮಕಗೊಂಡಿರುವ ಅ-ಧಿಕಾರಿಗಳು ಶಾಲೆಗೆ ಹೋಗಿ ತಪಾಸಣೆ ನಡೆಸಬೇಕು. ಆಯಾ ಬಿಇಒ ಮತ್ತು ಶಾಲೆಯ ಮುಖ್ಯ ಶಿಕ್ಷಕರು ಈ ಬಗ್ಗೆ ಕಟ್ಟುನಿಟ್ಟಿನ ಕ್ರಮವಹಿಸಲು ಸೂಚಿಸುವಂತೆ ಸಚಿವರು ತಿಳಿಸಿದರು.