ಮುದ್ದೇಬಿಹಾಳದ ಪುರಸಭೆ ಕಂದಾಯ ಅಧಿಕಾರಿಣಿ ಎನ್.ಎಸ್. ಪಾಟೀಲ ಅವರಿಗೆ ಬೀದಿ ಬದಿ ವ್ಯಾಪಾರಿಗಳ ವಿಭಾಗದವರು ಮನವಿ ಸಲ್ಲಿಸಿದರು. ಎಂ.ಎನ್. ಕುಳಗೇರಿ, ಬಾಬಾಜಾನ್ ಮಮದಾಪುರ, ಸಂಗಮೇಶ ವಿಜಯಕರ್, ಯಾಸೀನ್ ಅತ್ತಾರ, ಸಂತೋಷ ಚವ್ಹಾಣ ಇತರರಿದ್ದರು. 
ಜಿಲ್ಲೆ

ಹೆಚ್ಚಿನ ತೆರಿಗೆ ವಸೂಲಿಗೆ ಕ್ರಮ ಕೈಗೊಳ್ಳಿ

Vijayapura - Desk - Gurappa Lokuri

ಮುದ್ದೇಬಿಹಾಳ: ಪಟ್ಟಣದ ಬೀದಿ ಬದಿ, ಗೂಡಂಗಡಿ ವ್ಯಾಪಾರಸ್ಥರಿಂದ ತೆರಿಗೆ ವಸೂಲಿದಾರರು ನಿಗದಿಪಡಿಸಿದ್ದಕ್ಕಿಂತ ಹೆಚ್ಚಿನ ತೆರಿಗೆ ವಸೂಲಿ ಮಾಡುತ್ತಿರುವುದನ್ನು ತಡೆಗಟ್ಟುವಂತೆ ಆಗ್ರಹಿಸಿ ಮುದ್ದೇಬಿಹಾಳ ಬ್ಲಾಕ್ ಕಾಂಗ್ರೆಸ್ ಸಮಿತಿಯ ಬೀದಿ ಬದಿ ವ್ಯಾಪಾರಿಗಳ ವಿಭಾಗದ ಪದಾಧಿಕಾರಿಗಳು ಪುರಸಭೆ ಮುಖ್ಯಾಧಿಕಾರಿಗೆ ಬರೆದ ಮನವಿ ಪತ್ರವನ್ನು ಪುರಸಭೆ ಕಂದಾಯ ಅಧಿಕಾರಿ ಎನ್.ಎಸ್. ಪಾಟೀಲ ಅವರಿಗೆ ಸಲ್ಲಿಸಿದರು.

ತೆರಿಗೆ ವಸೂಲಿಗೆ ಟೆಂಡರ್ ಕರೆದು ದರ ನಿಗದಿಪಡಿಸಿ ಟೆಂಡರುದಾರರಿಗೆ ಹಂಚಿಕೆ ಮಾಡಲಾಗಿದೆ. ಟೆಂಡರ್ ಪಡೆದಿರುವ ವ್ಯಕ್ತಿ ನಿಗದಿಗಿಂತ ದುಪ್ಪಟ್ಟು ತೆರಿಗೆ ವಸೂಲಿ ಮಾಡುತ್ತಿದ್ದಾರೆ. ಈ ಬಗ್ಗೆ ವ್ಯಾಪಾರಸ್ಥರು ಲಿಖಿತವಾಗಿ ಪದಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಮನವಿ ಸಲ್ಲಿಸಿದ ನಂತರವೂ ದುಪ್ಪಟ್ಟು ತೆರಿಗೆ ವಸೂಲಿ ಮುಂದುವರಿದಲ್ಲಿ ಪುರಸಭೆ ಕಚೇರಿ ಎದುರು ಹೋರಾಟ ನಡೆಸಬೇಕಾಗುತ್ತದೆ ಎಂದು ತಿಳಿಸಲಾಗಿದೆ. ಅಧ್ಯಕ್ಷ ಎಂ.ಎನ್. ಕುಳಗೇರಿ, ಉಪಾಧ್ಯಕ್ಷ ಬಾಬಜಾನ ಮಮದಾಪುರ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸಂಗಮೇಶ ವಿಜಯಕರ್, ಸದಸ್ಯರಾದ ಯಾಸೀನ್ ಅತ್ತಾರ, ಸಂತೋಷ ಚವ್ಹಾಣ, ಆಸ್ೀ ನಿಡಗುಂದಿ, ಶರಣಪ್ಪ ಹೊಸಮನಿ, ರಹೆಮಾನ ಹಳ್ಳೂರ, ಬಂದೇನವಾಜ್ ಮಮದಾಪುರ, ಅಬ್ದುಲ್‌ರಜಾಕ್ ಕಲಾದಗಿ, ಮಂಜುನಾಥ ತಿಳಗೂಳ, ರಹೀಮ್ ಬಾಗವಾನ, ಬಸಪ್ಪ ಮೇಲಿನಮನಿ ಇತರರಿದ್ದರು.