ಅರಸೀಕೆರೆ ಗ್ರಾಪಂ ಕಚೇರಿಯಲ್ಲಿ ಜಮಾಬಂದಿ ಸಭೆ ನಡೆಯಿತು. ಜಿಪಂ ಉಪಕಾರ್ಯದರ್ಶಿ ಭೀಮಪ್ಪ ಲಾಳಿ, ಗ್ರಾಪಂ ಅಧ್ಯಕ್ಷ ಎ. ಇನಾಯತ್ ವುಲ್ಲಾ, ನರೇಗಾ ಎಡಿ ಸೋಮಶೇಖರ ವೈ.ಎಚ್., ಪಿಡಿಒ ಅಂಜಿನಪ್ಪ, ಮಂಜುನಾಥ, ಮಹಾಂತೇಶ್ ಇತರರಿದ್ದರು. 
ಜಿಲ್ಲೆ

ಆಶ್ರಯ ಮನೆಗಳ ನಿರ್ಮಾಣಕ್ಕೆ ಕ್ರಮಕೈಗೊಳ್ಳಿ

ಹರಪನಹಳ್ಳಿ: ಗ್ರಾಮಗಳಲ್ಲಿ ಚರಂಡಿ ವ್ಯವಸ್ಥೆ, ನಿವೇಶನಗಳ ನಿರ್ಮಾಣ ಸೇರಿ ಜನರ ಸಮಸ್ಯೆಗಳನ್ನು ಶೀಘ್ರವೇ ಸ್ಪಂದಿಸಬೇಕು ಎಂದು ಜಿಪಂ ಉಪಕಾರ್ಯದರ್ಶಿ ಭೀಮಪ್ಪ ಲಾಳಿ ತಿಳಿಸಿದರು.

ತಾಲೂಕಿನ ಅರಸೀಕೆರೆ ಗ್ರಾಪಂ ಕಚೇರಿಯಲ್ಲಿ ಬುಧವಾರ ಏರ್ಪಡಿಸಿದ್ದ ಜಮಾಬಂದಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಮುಖ್ಯವಾಗಿ ರಸ್ತೆ ನಿರ್ಮಾಣ, ದಿನವಹಿ ಸಂತೆ, ಆಟದ ಮೈದಾನ, ಕಸ ವಿಲೇವಾರಿ ಘಟಕ, ವಾಹನದ ವ್ಯವಸ್ಥೆ ಹಾಗೂ 7.68 ಎಕರೆಯಲ್ಲಿ ಆಶ್ರಯ ಮನೆಗಳ ನಿರ್ಮಾಣ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಪ್ರಮುಖರಾದ ಮಂಜುನಾಥ, ಮಹಾಂತೇಶ್, ತಾಂತ್ರಿಕ ಸಂಯೋಜಕ ನಾಗರಾಜ್ ನಾಯ್ಕ, ಷಣ್ಮುಖಪ್ಪ, ಸಿ ನಾಗರಾಜ ಇತರರಿದ್ದರು.