ಮಳೆಗೆ ಹಾನಿಯಾಗಿದ್ದ ಕುಕನೂರು ತಾಲೂಕಿನ ಇಟಗಿ-ಮನ್ನಾಪೂರ ರಸ್ತೆಯನ್ನು ಶಾಸಕ ಬಸವರಾಜ ರಾಯರಡ್ಡಿ ಶುಕ್ರವಾರ ವೀಕ್ಷಿಸಿದರು. ತಹಸೀಲ್ದಾರ್ ಎಚ್.ಪ್ರಾಣೇಶ, ಗ್ರೇಡ್-2 ತಹಸೀಲ್ದಾರ್ ಮುರುಳಿಧರ್‌ರಾವ್ ಕುಲಕರ್ಣಿ, ತಾಪಂ ಇಒ ಸಂತೋಷ ಬಿರಾದಾರ್ ಇದ್ದರು. 
ಜಿಲ್ಲೆ

ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಿ: ಶಾಸಕ ಬಸವರಾಜ ರಾಯರಡ್ಡಿ ಸೂಚನೆ

ಕುಕನೂರು: ಇತ್ತೀಚೆಗೆ ಸುರಿದ ಮಳೆಗೆ ಇಟಗಿ-ಮನ್ನಾಪೂರ ರಸ್ತೆ ಸಂಪೂರ್ಣವಾಗಿ ಕೊಚ್ಚಿ ಹೋಗಿದ್ದು, ದುರಸ್ತಿಗೆ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.


ಮಳೆಗೆ ಹಾನಿಯಾಗಿದ್ದ ತಾಲೂಕಿನ ಇಟಗಿ-ಮನ್ನಾಪೂರ ರಸ್ತೆಯನ್ನು ಅಧಿಕಾರಿಗಳೊಂದಿಗೆ ಶುಕ್ರವಾರ ವೀಕ್ಷಿಸಿ ಮಾತನಾಡಿದರು. ಮಳೆಯಿಂದಾಗಿ ಕುರಿ, ಮೇಕೆ ಹಳ್ಳದ ನೀರಿಗೆ ಸಾವನ್ನಪ್ಪಿದ್ದು, ಕುರಿಗಾಯಿಗೆ ಪರಿಹಾರ ನೀಡಲಾಗುವುದು. ಸಿದ್ನೆಕೊಪ್ಪ, ಬಿನ್ನಾಳ, ಚಿಕ್ಕೆನಕೊಪ್ಪ, ಮಾಳೇಕೊಪ್ಪ ಗ್ರಾಮಗಳಿಗೂ ಭೇಟಿ ನೀಡಲಾಗಿದೆ ಎಂದರು.


ತಹಸೀಲ್ದಾರ್ ಎಚ್.ಪ್ರಾಣೇಶ ಮಾತನಾಡಿ, ಹಳ್ಳದ ನೀರಿಗೆ ಕುರಿ, ಮೇಕೆ ಸಾವನ್ನಪ್ಪಿರುವುದಕ್ಕೆ ಪರಿಹಾರ ನೀಡಲಾಗಿದೆ ಎಂದರು.

ಗ್ರೇಡ್-2 ತಹಸೀಲ್ದಾರ್ ಮುರುಳಿಧರ್‌ರಾವ್ ಕುಲಕರ್ಣಿ, ತಾಪಂ ಇಒ ಸಂತೋಷ ಬಿರಾದಾರ್, ಪಿಎಸ್‌ಐ ಟಿ.ಗುರುರಾಜ, ಮುಖಂಡರಾದ ಯಂಕಣ್ಣ ಯರಾಸಿ, ಹನುಮಂತಗೌಡ ಚಂಡೂರು, ಶಿವನಗೌಡ ದಾನರಡ್ಡಿ, ಮಲ್ಲು ಜಕ್ಕಲಿ, ಸಂಗಮೇಶ ಗುತ್ತಿ ಇತರರಿದ್ದರು.