ಸಿಎಂ ಸಿದ್ದರಾಮಯ್ಯರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಜಂಬನಗೌಡನನ್ನು ಬಂಸುವಂತೆ ಒತ್ತಾಯಿಸಿ ರಾಯಚೂರಿನ ಜಿಲ್ಲಾಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಕಾರಿ ಪ್ರಶಾಂತಕುಮಾರಗೆ ಜಿಲ್ಲಾ ಕುರುಬರ ಸಂಘದಿಂದ ಶುಕ್ರವಾರ ಮನವಿ ಸಲ್ಲಿಸಲಾಯಿತು. ಸಂಘದ ಜಿಲ್ಲಾಧ್ಯಕ್ಷ ಕೆ.ಬಸವಂತಪ್ಪ, ಪದಾಕಾರಿಗಳಾದ ಹನುಮಂತಪ್ಪ ತುರಕನಡೋಣಿ, ನಾಗರಾಜ ಮಡ್ಡಿಪೇಟೆ, ಕೆ.ಶ್ರೀನಿವಾಸ, ಮಂಜುನಾಥ ದಳವಾಯಿ, ಸಂಗಮೇಶ, ಶರಣಪ್ಪ, ಬಿ.ಬಸವರಾಜ, ರಮೇಶ, ಹನುಮೇಶ, ಕೆ.ಬೂದೆಪ್ಪ ಇದ್ದರು. 
ಜಿಲ್ಲೆ

ಸಿಎಂಗೆ ನಿಂದಿಸಿದವರ ವಿರುದ್ಧ ಕ್ರಮಕೈಗೊಳ್ಳಿ

ರಾಚಯ್ಯ ಸ್ವಾಮಿ

ರಾಯಚೂರು: ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಜಂಬನಗೌಡನನ್ನು ಬಂಸಿ ಕಾನೂನು ಕ್ರಮಕೈಗೊಳ್ಳುವಂತೆ ಜಿಲ್ಲಾ ಕುರುಬರ ಸಂಘ ಒತ್ತಾಯಿಸಿದೆ.
ಸಂಘದ ನಿಯೋಗ ಜಿಲ್ಲಾಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಕಾರಿ ಪ್ರಶಾಂತಕುಮಾರಗೆ ಶುಕ್ರವಾರ ಮನವಿ ಸಲ್ಲಿಸಿ, ರೈತರ ಪ್ರತಿಭಟನೆ ಸಂದರ್ಭದಲ್ಲಿ ಜಂಬನಗೌಡ ಸಿದ್ದರಾಮಯ್ಯರಿಗೆ ವೈಯಕ್ತಿಕವಾಗಿ ಅವಾಚ್ಯ ಶಬ್ದಗಳಿಂದ ನಿಂದಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದು ಬಿಡುವ ಮೂಲಕ ಅವರ ತೇಜೋವಧೆ ಮಾಡಲಾಗಿದೆ ಎಂದರು.
ಮುಖ್ಯಮಂತ್ರಿಗಳ ಕಾರ್ಯವೈಖರಿ ಬಗ್ಗೆ ಅಸಮಾಧಾನವಿದ್ದರೆ ಹೇಳಲಿ. ಅದನ್ನು ಬಿಟ್ಟು ಅವರನ್ನು ವೈಯಕ್ತಿಕವಾಗಿ ನಿಂದಿಸುವುದು ಸರಿಯಲ್ಲ. ಕೂಡಲೇ ಜಂಬನಗೌಡನನ್ನು ಬಂಸಿ ಕಾನೂನು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ನಿಯೋಗದಲ್ಲಿ ಸಂಘದ ಜಿಲ್ಲಾಧ್ಯಕ್ಷ ಕೆ.ಬಸವಂತಪ್ಪ, ಪದಾಕಾರಿಗಳಾದ ಹನುಮಂತಪ್ಪ ತುರಕನಡೋಣಿ, ನಾಗರಾಜ ಮಡ್ಡಿಪೇಟೆ, ಕೆ.ಶ್ರೀನಿವಾಸ, ಮಂಜುನಾಥ ದಳವಾಯಿ, ಸಂಗಮೇಶ, ಶರಣಪ್ಪ, ಬಿ.ಬಸವರಾಜ, ರಮೇಶ, ಹನುಮೇಶ, ಕೆ.ಬೂದೆಪ್ಪ ಇದ್ದರು.