ಮಸ್ಕಿಯಲ್ಲಿ ತಹಸೀಲ್ದಾರ್ ಡಾ.ಮಲ್ಲಪ್ಪ ಕೆ.ಯರಗೋಳಗೆ ವಕೀಲರ ಸಂಘ ಮನವಿ ಸಲ್ಲಿಸಿತು. ಸಂಘದ ಅಧ್ಯಕ್ಷ ಡಿ.ರಾಮಣ್ಣ, ಪ್ರಮುಖರಾದ ಈಶಪ್ಪ ದೇಸಾಯಿ, ನಬೀ ಶೇಡ್ಮಿ, ವೀರಭದ್ರಪ್ಪ ರಂಗಾಪುರ, ಅಮರೇಗೌಡ ಗದ್ರಟಗಿ, ಶಿವರಾಜ ಕೆ. ಇತರರಿದ್ದರು. 
ಜಿಲ್ಲೆ

ಹಲ್ಲೆ ನಡೆಸಿದವರ ವಿರುದ್ಧ ಕ್ರಮಕೈಗೊಳ್ಳಿ

ನರೇಶ್ ಕುಮಾರ್

ಮಸ್ಕಿ: ಭಾರತೀಯ ವಕೀಲರ ಪರಿಷತ್ತಿನ ಸಹ ಅಧ್ಯಕ್ಷ ಸದಾಶಿವ ರೆಡ್ಡಿ ಮೇಲಿನ ಹಲ್ಲೆ ಪ್ರಕರಣ ಖಂಡಿಸಿ ಮಸ್ಕಿ ವಕೀಲರ ಸಂಘದ ಪದಾಧಿಕಾರಿಗಳು ಗುರುವಾರ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಸಂಘದ ಅಧ್ಯಕ್ಷ ಡಿ.ರಾಮಣ್ಣ ನಾಯಕ ಮಾತನಾಡಿ, ರಾಜ್ಯದಲ್ಲಿ ಕಾನೂನನ್ನು ಪರಿಪಾಲಿಸುವ ವಕೀಲರಿಗೆ ಭದ್ರತೆ ಇಲ್ಲದಂತಾಗಿದೆ. ಹಲ್ಲೆ, ದೌರ್ಜನ್ಯ ಪ್ರಕರಣಗಳು ಹೆಚ್ಚಿದ್ದು, ಸರ್ಕಾರ ಕ್ರಮಕೈಗೊಳ್ಳಬೇಕು. ಸದಾಶಿವ ರೆಡ್ಡಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ದುಷ್ಕರ್ಮಿಗಳನ್ನು ಬಂಧಿಸಿ ಕಾನೂನು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಬಳಿಕ ತಹಸೀಲ್ದಾರ್ ಡಾ.ಮಲ್ಲಪ್ಪ ಕೆ.ಯರಗೋಳಗೆ ಮನವಿ ಸಲ್ಲಿಸಲಾಯಿತು. ಪ್ರಮುಖರಾದ ಶಿವಕುಮಾರ ಹಿರೇಮಠ, ಆನಂದ ರಾಠೋಡ, ಕೆ.ಎಲ್.ನಾಯಕ, ಅಮರೇಗೌಡ ತಿಮ್ಮಾಪುರ, ಈರಣ್ಣ ನಾಯಕ, ಮಲ್ಲಪ್ಪ ನಾಗರಬೆಂಚಿ, ಚನ್ನಪ್ಪ ನಾಗಲದಿನ್ನಿ, ಪಂಪನಗೌಡ ಗುಡದೂರು, ಮಂಜನಾಥ ಹಿರೇಮಠ, ಶರಣಪ್ಪ ಮಾಟೂರು, ರಾಘವೇಂದ್ರ ಸುಂಕನೂರು, ಕರಿಯಪ್ಪ ವಂದ್ಲಿ, ಗಣೇಶ ಯಾದವ್, ಬಸವಲಿಂಗೇಶ ಜೆ. ಇತರರಿದ್ದರು.