ಮಂಡ್ಯದಲ್ಲಿನ ಕುರುಬ ಸಂಘದ ಆವರಣದಲ್ಲಿನ ವಿದ್ಯಾರ್ಥಿ ನಿಲಯಕ್ಕೆ ನುಗ್ಗಿ ದಾಂಧಲೆ ನಡೆಸಿದವರ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ರಾಯಚೂರಿನ ಜಿಲ್ಲಾಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಕಾರಿ ಪ್ರಶಾಂತಕುಮಾರಗೆ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ಯುವ ಘರ್ಷನೆಯಿಂದ ಬುಧವಾರ ಮನವಿ ಸಲ್ಲಿಸಲಾಯಿತು. ಸಂಘಟನೆ ಜಿಲ್ಲಾಧ್ಯಕ್ಷ ಕೆ.ಶಾಮಮೂರ್ತಿ, ಪದಾಕಾರಿಗಳಾದ ರಮೇಶ ನವಲಕಲ್, ಎಚ್.ಟಿ.ರಾಘವೇಂದ್ರ, ಕೆ.ಮಹೇಶ, ಮೈಲಾರಿ, ಶ್ರೀನಿವಾಸ, ಕೆ.ನಾಗರಾಜ ಇದ್ದರು. 
ಜಿಲ್ಲೆ

ದಾಂಧಲೆ ನಡೆಸಿದವರ ವಿರುದ್ಧ ಕ್ರಮಕೈಗೊಳ್ಳಿ

ರಾಚಯ್ಯ ಸ್ವಾಮಿ

ರಾಯಚೂರು: ಕೆರಗೋಡು ಗ್ರಾಮದಲ್ಲಿನ ಹನುಮಧ್ವಜ ವಿವಾದಕ್ಕೆ ಸಂಬಂಸಿದಂತೆ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ಮಂಡ್ಯದಲ್ಲಿನ ಕುರುಬ ಸಂಘದ ಆವರಣದಲ್ಲಿರುವ ವಿದ್ಯಾರ್ಥಿ ನಿಲಯಕ್ಕೆ ನುಗ್ಗಿ ಕಲ್ಲು ತೂರಾಟ ನಡೆಸಿ ದಾಂಧಲೆ ನಡೆಸಿದವರ ವಿರುದ್ಧ ಕ್ರಮಕೈಗೊಳ್ಳುವಂತೆ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ಯುವ ಘರ್ಜನೆ ಒತ್ತಾಯಿಸಿದೆ.
ಸಂಘಟನೆ ನಿಯೋಗ ಜಿಲ್ಲಾಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಕಾರಿ ಪ್ರಶಾಂತಕುಮಾರಗೆ ಬುಧವಾರ ಮನವಿ ಸಲ್ಲಿಸಿ, ವಸತಿ ನಿಲಯದಲ್ಲಿನ ಕನಕದಾಸರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾವಚಿತ್ರ ಇರುವ ಬ್ಯಾನರ್‌ಗೆ ಕಲ್ಲು ಎಸೆಯಲಾಗಿದೆ. ಜತೆಗೆ ವಸತಿ ನಿಲಯದ ಕಿಟಕಿ ಗಾಜು ಒಡೆದು ಹಾಕಲಾಗಿದೆ ಎಂದು ದೂರಿದರು.
ವಿವಾದಕ್ಕೆ ಸಂಬಂಸಿದಂತೆ ಪ್ರತಿಭಟನೆ ನಡೆಸುವುದಕ್ಕೆ ಯಾವುದೇ ವಿರೋಧವಿಲ್ಲ. ಆದರೆ ವಿವಾದಕ್ಕೆ ಸಂಬಂಧವಿಲ್ಲದ ವಿದ್ಯಾರ್ಥಿ ನಿಲಯಕ್ಕೆ ನುಗ್ಗಿ ದಾಂಧಲೆ ನಡೆಸಿರುವುದು ಸರಿಯಲ್ಲ. ದಾಂಧಲೆ ನಡೆಸಿದ ಕಿಡಿಗೇಡಿಗಳನ್ನು ಕೂಡಲೇ ಬಂಸಿ ಅವರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ನಿಯೋಗದಲ್ಲಿ ಸಂಘಟನೆ ಜಿಲ್ಲಾಧ್ಯಕ್ಷ ಕೆ.ಶಾಮಮೂರ್ತಿ, ಪದಾಕಾರಿಗಳಾದ ರಮೇಶ ನವಲಕಲ್, ಎಚ್.ಟಿ.ರಾಘವೇಂದ್ರ, ಕೆ.ಮಹೇಶ, ಮೈಲಾರಿ, ಶ್ರೀನಿವಾಸ, ಕೆ.ನಾಗರಾಜ ಉಪಸ್ಥಿತರಿದ್ದರು.