ಜಿಲ್ಲೆ

ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಿ

ಕೋಲಾರ ಡೆಸ್ಕ್

ದಲಿತನ ಹತ್ಯೆ ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಪ್ರತಿಭಟನೆ

ಮಧುಗಿರಿ: ತಾಲೂಕಿನ ಕೊಡಿಗೇನಹಳ್ಳಿ ಹೋಬಳಿ ಪೋಲೇನಹಳ್ಳಿಯಲ್ಲಿ ದಲಿತರೊಬ್ಬರ ಹತ್ಯೆ ವಿಚಾರವಾಗಿ ಸೂಕ್ತ ನ್ಯಾಯ ದೊರಕಿಸಿಕೊಡಬೇಕೆಂದು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಶುಕ್ರವಾರ ಪಟ್ಟಣದ ಪಾವಗಡ ವೃತ್ತದಲ್ಲಿರುವ ಡಾ.ಬಿ.ಆರ್​.ಅಂಬೇಡ್ಕರ್​ ಪುತ್ಥಳಿ ಬಳಿ ಪ್ರತಿಭಟನೆ ನಡೆಸಿ ಎಸಿ ಗೋಟೂರು ಶಿವಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು.

ಪೋಲೆನಹಳ್ಳಿ ಗ್ರಾಮದಲ್ಲಿ ಎಸ್​.ಸಿ ಜನಾಂಗದ ವ್ಯಕ್ತಿಯನ್ನು ವಾಹನ ಹತ್ತಿಸಿ ಅಮಾನುಷವಾಗಿ ಕೊಲೆ ಮಾಡಿದ್ದು, ತಪ್ಪಿತಸ್ಥರನ್ನು ಬಂಧಿಸಿ ಈ ಪ್ರಕರಣಕ್ಕೆ ಸರಿಯಾದ ನ್ಯಾಯಾ ದರಕಿಸಿಕೊಡಬೇಕೆಂದು ಡಿಎಸ್​ಎಸ್​ ಪದಾಧಿಕಾರಿಗಳು ಒತ್ತಾಯಿಸಿದರು.

ಪ್ರಕರಣದಲ್ಲಿ ಆರೋಪಿ ರಾಮಕೃಷ್ಣಪ್ಪ ಅವರನ್ನು ಈ ಕೂಡಲೇ ಬಂದಿಸಬೇಕು. ಮಧುಗಿರಿ ವೃತ್ತ ನಿರೀಕ್ಷಕರನ್ನು ತನಿಖಾ ಅಧಿಕಾರಿಯಾಗಿ ಮುಂದುವರಿಸದೇ ಬೇರೆ ಅಧಿಕಾರಿಯನ್ನು ತನಿಖೆಗೆ ನೇಮಿಸಬೇಕು. ಮಧುಗಿರಿ ವೃತ್ತ ನಿರೀಕ್ಷಕರನ್ನು ಮತ್ತು ಕೊಡಿಗೇನಹಳ್ಳಿ ಉಪನಿರೀಕ್ಷಕರನ್ನು ಕರ್ತವ್ಯ ಲೋಕದ ಮೇರೆಗೆ ಅಮಾನತುಗೊಳಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯ ಸ್ಥಳಕ್ಕೆ ಆಗಮಿಸಿದ ಮಾಜಿ ಸಚಿವ ಎನ್​.ಮಹೇಶ್​ ಮಾತನಾಡಿ, ಕೊಲೆ ಮಾಡಿರುವವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಮೃತಪಟ್ಟಿರುವ ಯುವಕನ ಕುಟುಂಬಕ್ಕೆ ಸರ್ಕಾರದಿಂದ ದೊರೆಯಬಹುದಾದ ಸವಲತ್ತುಗಳನ್ನು ಅವರ ಕುಟುಂಬವರ್ಗದವರಿಗೆ ಸಕಾಲಕ್ಕೆ ದೊರೆಯಬೇಕು ಹಾಗೂ ಮೃತನ ಪತ್ನಿಗೆ ಸರ್ಕಾರದಿಂದ ಉದ್ಯೋಗ ನೀಡಬೇಕೆಂದು ಒತ್ತಾಯಿಸಿದರು.

ದಲಿತ ಮುಖಂಡರಾದ ದೊಡ್ಡೇರಿ ಕಣಿಮಯ್ಯ, ತೊಂಡೊಟಿ ರಾಮಾಂಜಿ, ರಾಧಕೃಷ್ಣ, ಎಂ.ವೈ.ಶಿವಕುಮಾರ್​, ಕದರಪ್ಪ, ರಂಗನಾಥ್​, ನರಸೀಯಪ್ಪ, ಎಬಿವಿಪಿ ರಮೇಶ್​, ಕೊರಟಗೆರೆ ನಾಗರಾಜು ಇತರರು ಇದ್ದರು.