ಸುಳ್ಳು ಮನವಿ ನೀಡಿರುವ ಹಿಂದುಪರ ಸಂಘಟನೆ ಸದಸ್ಯರ ವಿರುದ್ಧ ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ಮಹಾಲಿಂಗಪುರ ಪಟ್ಟಣದ ಪುರಸಭೆ ಮುಖ್ಯಾಧಿಕಾರಿ ಈರಣ್ಣ ದಡ್ಡಿ ಅವರಿಗೆ ಶೇಖರ ಮಾಂಗ ಮನವಿ ಸಲ್ಲಿಸಿದರು. ಪರಶುರಾಮ ಮೇತ್ರಿ, ಮಹೇಶ ಕಾಳಾ ಇತರರಿದ್ದರು. 
ಜಿಲ್ಲೆ

ಹಿಂದು ಸಂಘಟನೆ ಸದಸ್ಯರ ವಿರುದ್ಧ ಕ್ರಮ ಕೈಗೊಳ್ಳಿ

ಮಹಾಲಿಂಗಪುರ: ನನ್ನ ಸ್ವಂತ ಮಾಲ್ಕಿ ಜಾಗದಲ್ಲಿ ಮನೆ ಕಟ್ಟುತ್ತಿದ್ದರೂ ಚರ್ಚ್ ಕಟ್ಟಲಾಗುತ್ತಿದೆ ಎಂದು ಆರೋಪಿಸಿ ವಿವಿಧ ಸರ್ಕಾರಿ ಅಧಿಕಾರಿಗಳಿಗೆ ಸುಳ್ಳು ಮನವಿ ನೀಡಿರುವ ಹಿಂದುಪರ ಸಂಘಟನೆ ಸದಸ್ಯರ ವಿರುದ್ಧ ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ಶೇಖರ ಮಾಂಗ ಸ್ಥಳೀಯ ಪುರಸಭೆ ಮುಖ್ಯಾಧಿಕಾರಿ ಈರಣ್ಣ ದಡ್ಡಿ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.

ಕಟ್ಟಡ ನಿರ್ಮಿಸುತ್ತಿರುವುದು ನಮ್ಮ ಸ್ವಂತ ಸ್ಥಳವಾಗಿದ್ದು, ನಾವು ಮನೆ ಕಟ್ಟುತ್ತಿದ್ದೇವೆ. ವಿನಾಕಾರಣ ಕೆಲವು ಹಿಂದು ಸಂಘಟನೆಯ ಕಾರ್ಯಕರ್ತರು ನಮಗೆ ತೊಂದರೆ ಕೊಡುತ್ತಿದ್ದಾರೆ ಹಾಗೂ ವೈಯಕ್ತಿಕ ಘನತೆಗೆ ಧಕ್ಕೆ ತಂದಿದ್ದಾರೆ. ಅಂತಹವರ ವಿರುದ್ಧ ಶೀಘ್ರ ಕ್ರಮ ಕೈಗೊಳ್ಳದಿದ್ದರೆ ಮುಂದಿನ ಆಗು-ಹೋಗುಗಳಿಗೆ ನೀವೇ ಕಾರಣರಾಗುತ್ತೀರಿ ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.

ಡಿಎಸ್‌ಎಸ್ ತಾಲೂಕು ಅಧ್ಯಕ್ಷ ಪರಶುರಾಮ ಮೇತ್ರಿ, ದಲಿತ ಸಂಘನೆಗಳ ಸದಸ್ಯರಾದ ಮಹೇಶ ಕಾಳಾ, ರಾಜು ಕುಂದ್ರಾಳ, ಪರಶುರಾಮ ಹೆದ್ದಾರಿ, ತುಕಾರಾಮ ಕೆಂಚನ್ನವರ, ಶ್ರೀಕಾಂತ ಹಾದಿಮನಿ, ಸಂಗಪ್ಪ ಹೊಸಮನಿ, ಆನಂದ ಹನಗಂಡಿ, ರಾಜಾರಾವ ದಾಸರೆ, ಮಂಜುನಾಥ ಹೊಳಿ, ಕಾಜು ಗಿಡ್ಡಣ್ಣವರ, ಲವಾ ಗಗ್ಗರಿ, ಅಂಬರೀಷ ಐಹೊಳೆ, ಪ್ರಜ್ವಲ ಕುಳಲಿ, ಸಂಗಪ್ಪ ಗಸ್ತಿ, ಕುಮಾರ ಮಾಂಗ, ದುಂಡಪ್ಪ ಮಾಂಗ ಇದ್ದರು.