pardಮುದ್ದೇಬಿಹಾಳ ಕ್ಷೇತ್ರ ಶಿಕ್ಷಣಾಕಾರಿ ಎಸ್.ಜೆ.ನಾಯಕ ಅವರಿಗೆ ದಲಿತ ವಿದ್ಯಾರ್ಥಿ ಪರಿಷತ್ ಪದಾಧಿಕಾರಿಗಳು ಮನವಿ ಸಲ್ಲಿಸಿದರು. ಬಸವರಾಜ ಪೂಜಾರಿ, ಪ್ರಕಾಶ ಚಲವಾದಿ, ಆನಂದ ಮುದೂರ, ಮಹೆಬೂಬ ಹಡಲಗೇರಿ ಇತರರಿದ್ದರು. 
ಜಿಲ್ಲೆ

ಡೊನೇಷನ್ ವಿರುದ್ಧ ಕ್ರಮಕೈಗೊಳ್ಳಿ

ದತ್ತಾತ್ರೇಯ ಪಿ ಕುಲಕರ್ಣಿ

ಮುದ್ದೇಬಿಹಾಳ: ತಾಲೂಕಿನ ಖಾಸಗಿ ಶಾಲೆ, ಕಾಲೇಜುಗಳಲ್ಲಿ ಡೊನೇಷನ್ ಹಾವಳಿ ಹೆಚ್ಚಾಗಿದ್ದು ಸರ್ಕಾರ ನಿಗದಿಪಡಿಸಿದ ದರ ಪಡೆದುಕೊಳ್ಳುವುದಕ್ಕಿಂತ ಹೆಚ್ಚಿನ ಹಣ ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಿ ಪಟ್ಟಣದಲ್ಲಿ ದಲಿತ ವಿದ್ಯಾರ್ಥಿ ಪರಿಷತ್
ಪಟ್ಟಣದ ಬಿಇಒ ಕಚೇರಿಗೆ ಆಗಮಿಸಿದ ಪರಿಷತ್ ಪದಾಧಿಕಾರಿಗಳು ಖಾಸಗಿ ಶಾಲೆ ವಿರುದ್ಧ ಧಿಕ್ಕಾರ ಕೂಗಿದರು.

ಮುಖಂಡ ಬಸವರಾಜ ಪೂಜಾರಿ, ಅಂಬೇಡ್ಕರ್ ಸೇನೆ ತಾಲೂಕಾಧ್ಯಕ್ಷ ಪ್ರಕಾಶ ಚಲವಾದಿ ಮಾತನಾಡಿ, ಜೂ.5 ರಂದು ಮುದ್ದೇಬಿಹಾಳ ಪಟ್ಟಣದ ಚಿನ್ಮಯ ಪ್ರಾಥಮಿಕ ಶಾಲೆಗೆ ದಲಿತ ವಿದ್ಯಾರ್ಥಿಯೊಬ್ಬನನ್ನು ದಾಖಲಿಸಲು ಹೋದಾಗ ಆಡಳಿತ ಮಂಡಳಿ ಅಧ್ಯಕ್ಷರು ಒಂದನೇ ತರಗತಿಗೆ 13-20 ಸಾವಿರ ರೂ. ಶುಲ್ಕವನ್ನು ಪಾವತಿಸಿದರೆ ಪ್ರವೇಶ ಮಾಡಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ. ಅಲ್ಲದೆ ಬೇಕಾದರೆ ಅಧಿಕಾರಿಗಳಿಗೆ ಹೇಳು ಎಂದು ಪೋಷಕರಿಗೆ ತಿಳಿಸಿದ್ದಾರೆ. ಇಲಾಖೆ ನಿಯಮಾವಳಿ ಮೀರಿ ನಡೆಯುತ್ತಿರುವ ಈ ಶಾಲೆಯ ಅನುಮತಿ ರದ್ದುಪಡಿಸಬೇಕು ಎಂದು ಆಗ್ರಹಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಬಿಇಒ ಎಸ್.ಜೆ. ನಾಯಕ ಅವರು, ಖಾಸಗಿ ಶಾಲೆಯವರು ತಾವು ಪಡೆದುಕೊಳ್ಳುತ್ತಿರುವ ಶುಲ್ಕದ ವಿವರವನ್ನು ಶಾಲೆಯ ಹೊರಗಡೆ ಪ್ರಕಟಿಸಬೇಕು. ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದರು.
ದಲಿತ ವಿದ್ಯಾರ್ಥಿ ಪರಿಷತ್ ಜಿಲ್ಲಾ ಸಂಚಾಲಕ ಆನಂದ ಮುದೂರ, ಮಹೆಬೂಬ ಹಡಲಗೇರಿ, ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ದೇವರಾಜ ಹಂಗರಗಿ, ಪ್ರಶಾಂತ ಕಾಳೆ, ಗುರುಸ್ವಾಮಿ ಹಿರೇಮಠ, ಬಸವರಾಜ ಸಿದ್ದಾಪೂರ, ರೇವಣಸಿದ್ದಪ್ಪ ನಾಯಕ ಇತರರಿದ್ದರು.