ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಸಂವಿಧಾನಿಕ ಪದ ಬಳಕೆ ಮಾಡಿ ನಿಂದಿಸಿದ ಉಕ ಸಂಸದ ಅನಂತರ ಕುಮಾರ ಹೇಳಿಕೆ ಖಂಡಿಸಿ ಬೀಳಗಿಯಲ್ಲಿ ತಾಲೂಕು ಕಾಂಗ್ರೆಸ್ ಘಟಕದಿಂದ ನಡೆದ ಪ್ರತಿಭಟನೆಯಲ್ಲಿ ಮಾಜಿ ಸಚಿವ ಎಸ್.ಆರ್. ಪಾಟೀಲ ಮಾತನಾಡಿದರು. ಶಾಸಕ ಜೆ.ಟಿ. ಪಾಟೀಲ, ಕೆಪಿಸಿಸಿ ಮಾಜಿ ಕಾರ್ಯದರ್ಶಿ ಬಸವಪ್ರಭು ಸರನಾಡಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಣಮಂತ ಕಾಖಂಡಕಿ, ರಾಮನಗೌಡ ಜಕ್ಕನಗೌಡ, ಅಣವೀರಯ್ಯ ಪ್ಯಾಠಿಮಠ ಇತರರಿದ್ದರು. 
ಜಿಲ್ಲೆ

ಅನಂತಕುಮಾರ ವಿರುದ್ಧ ಕ್ರಮ ಕೈಗೊಳ್ಳಿ

Vijayapura - Desk - Gurappa Lokuri

ಬೀಳಗಿ: ಉತ್ತರ ಕನ್ನಡ ಜಿಲ್ಲೆಯ ಸಂಸದ ಅನಂತರಕುಮಾರ ಹೆಗಡೆ ಅವರು ಇತ್ತೀಚೆಗೆ ಮುಖ್ಯಮಂತ್ರಿಗಳನ್ನು ಏಕವಚನದಲ್ಲಿ ಅಸಂವಿಧಾನಿಕ ಪದ ಬಳಕೆ ಮಾಡಿ ನಿಂದಿಸಿದನ್ನು ಖಂಡಿಸಿ ಪಟ್ಟಣದಲ್ಲಿ ತಾಲೂಕು ಕಾಂಗ್ರೆಸ್ ಘಟಕದ ವತಿಯಿಂದ ಬುಧವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಮಾಜಿ ಸಚಿವ ಎಸ್.ಆರ್. ಪಾಟೀಲ ನೇತೃತ್ವ ವಹಿಸಿ ಮಾತನಾಡಿ, ಸಂವಿಧಾನಿಕ ಹುದ್ದೆ ಹಾಗೂ ಸಾರ್ವಜನಿಕ ಬದುಕಿನಲ್ಲಿ ಇರತಕ್ಕಂತವರು ಹೆಚ್ಚು ನಯ-ವಿನಯ, ಸೌಜನ್ಯತೆ ಶಿಷ್ಟಾಚಾರದ ನಂಬಿಕೆ ಮೇಲೆ ಇರಬೇಕು. ಯಾರೇಯಾಗಲಿ ಅದನ್ನು ಬಿಟ್ಟು ಬೇಕಾಬಿಟ್ಟಿಯಾಗಿ ಇನ್ನೊಬ್ಬರ ಬಗ್ಗೆ ಮಾತನಾಡುವುದು ಸರಿಯಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯದ 7 ಕೋಟಿ ಜನರ ಪ್ರತಿನಿಧಿ. ಅಂತವರಿಗೆ ಎಲ್ಲರೂ ಗೌರ ಕೊಡುವುದು ನಮ್ಮ ಹಕ್ಕು. ಯಾರ ಮನಸ್ಸಿಗೂ ಘಾಸಿಯಾಗುವಂತೆ ಮಾನಾಡುವುದು ತಪ್ಪು. ಮುಖ್ಯಮಂತ್ರಿ ಹಾಗೂ ಪ್ರಧಾನಿ ಹುದ್ದೆಗಳಿಗೆ ನಾವೇಲ್ಲರೂ ಗೌರವ ಕೊಡಬೇಕು. ಯಾರೇ ಆಗಲಿ ಅಸಂವಿಧಾನಿಕ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು ಎಂದರು.

ಶಾಸಕ ಜೆ.ಟಿ. ಪಾಟೀಲ ಮಾತನಾಡಿ, ಸಂಸದ ಹೆಗಡೆ ಒಬ್ಬ ಜನಪ್ರತಿನಿಧಿಯಾಗಿ ಇಂತಹ ಹೇಳಿಕೆ ನೀಡಿದ್ದು ಖಂಡನೀಯ. ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಈಗಾಗಲೇ ಪೊಲೀಸ್ ಇಲಾಖೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದರು.

ಕೆಪಿಸಿಸಿ ಮಾಜಿ ಕಾರ್ಯದರ್ಶಿ ಬಸವಪ್ರಭು ಸರನಾಡಗೌಡ ಮಾತನಾಡಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಣಮಂತ ಕಾಖಂಡಕಿ, ರಾಮನಗೌಡ ಜಕ್ಕನಗೌಡ, ಅಣವೀರಯ್ಯ ಪ್ಯಾಠಿಮಠ, ಮಹಾದೇವ ಹಾದಿಮನಿ, ಬಸವರಾಜ ಹಳ್ಳದಮನಿ, ಶ್ರೀಶೈಲ ಅಂಟೀನ್, ಶ್ರೀಶೈಲ ಸೂಳಿಕೇರಿ, ಯಮನಪ್ಪ ರೊಳ್ಳಿ, ಪಪಂ ಮಾಜಿ ಅಧ್ಯಕ್ಷ ಅನೀಲ ಗಚ್ಚಿನಮನಿ, ಅಬುಶಂ ಖಾಜಿ, ಸಂಗಪ್ಪ ಕಂದಗಲ್ಲ, ಶಿವಾನಂದ ಮಾದರ, ಮಾರುತಿ ಮಂಟೂರ ಇತರರಿದ್ದರು.