ತಂಗಡಗಿಯ ಹಡಪದ ಅಪ್ಪಣ್ಣ ಮಹಾಸಂಸ್ಥಾನ ಮಠದಲ್ಲಿ ಬಸವಪ್ರಿಯ ಹಡಪದ ಅಪ್ಪಣ್ಣನವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಗುರುಮಹಾಂತ ಶ್ರೀಗಳು, ಅನ್ನದಾನಭಾರತಿ ಅಪ್ಪಣ್ಣ ಶ್ರೀಗಳು, ಬಸವಪ್ರಸಾದ ಶ್ರೀಗಳು, ಕೇಶವಾನಂದ ಶ್ರೀಗಳು, ಸಿದ್ದಣ್ಣ ಹಡಪದ, ಎಚ್​.ಡಿ.ವೈದ್ಯ ಇತರರಿದ್ದರು. 
ಜಿಲ್ಲೆ

ದುಶ್ಚಟ ತ್ಯಜಿಸುವ ಪ್ರತಿಜ್ಞೆ ಮಾಡಿ

ತಂಗಡಗಿ: ಪ್ರತಿಯೊಬ್ಬರೂ ದುಶ್ಚಟಗಳನ್ನು ತ್ಯಜಿಸುವ ಪ್ರತಿಜ್ಞೆ ಮಾಡಿ ಅದರಂತೆ ನಡೆದುಕೊಳ್ಳಬೇಕು. ದುಶ್ಚಟಗಳು ನಮ್ಮ ಜೊತೆಗೆ ನಮ್ಮನ್ನು ನಂಬಿದ ಕುಟುಂಬದವರನ್ನೂ ನಾಶ ಮಾಡುತ್ತವೆ ಎಂದು ಇಳಕಲ್ಲ&ಚಿತ್ತರಗಿ ವಿಜಯಮಹಾಂತೇಶ್ವರ ಮಠದ ಗುರುಮಹಾಂತ ಶ್ರೀಗಳು ಹೇಳಿದರು.
ಇಲ್ಲಿನ ಹಡಪದ ಅಪ್ಪಣ್ಣನವರ ಮಹಾಸಂಸ್ಥಾನ ಮಠದಲ್ಲಿ ಹಡಪದ ಅಪ್ಪಣ್ಣ ಮಹಾಸಂಸ್ಥಾನ ಮಠ ಟ್ರಸ್ಟ್​, ಅಖಿಲ ಕರ್ನಾಟಕ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂ ಆಶ್ರಯದಲ್ಲಿ ಶನಿವಾರ ಏರ್ಪಡಿಸಿದ್ದ ಬಸವಪ್ರಿಯ ಹಡಪದ ಅಪ್ಪಣ್ಣ ಮಹಾಸ್ವಾಮಿಯವರ 16ನೇ ಸ್ಮರಣೋತ್ಸವದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ದುಶ್ಚಟಗಳ ತ್ಯಜಿಸುವಿಕೆ ಮಠದ ಭಕ್ತರಿಂದಲೇ ಪ್ರಾರಂಭಗೊಳ್ಳಬೇಕು. ಶ್ರಮ ಮತ್ತು ದಾಸೋಹ ಸಮಾಜವನ್ನು ಬೆಳೆಸುತ್ತವೆ. ಪ್ರತಿಯೊಬ್ಬರೂ ಕನಿಷ್ಠ ಒಂದು ರೊಟ್ಟಿಯನ್ನು ದಾನ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು. ಒಂದು ರೊಟ್ಟಿಯ ಬೆಲೆ ಎಷ್ಟೇ ಇದ್ದರೂ ಅದನ್ನು ದಾಸೋಹವಾಗಿ ನೀಡಿದರೆ ಅದಕ್ಕೆ ಬೆಲೆ ಕಟ್ಟಲಾಗುವುದಿಲ್ಲ ಎಂದರು.

ಸ್ವಾಮಿಗಳು ಇರುವ ಸಮಾಜವನ್ನು ಆ ಸಮಾಜದ ಎಲ್ಲರೂ ಸೇರಿ ಅದ್ಭುತವಾಗಿ ಬೆಳೆಸಬೇಕು. ಒಕ್ಕಲಿಗರ ಸಮಾಜದ ಮಠವನ್ನು ಉದಾಹರಣೆಯನ್ನಾಗಿ ತೆಗೆದುಕೊಂಡರೆ ದೇವೇಗೌಡ, ಕುಮಾರಸ್ವಾಮಿ, ಡಿ.ಕೆ.ಶಿವಕುಮಾರ ಮುಂತಾದವರು ಸೇರಿ ಆ ಮಠವನ್ನು ಎತ್ತರಕ್ಕೆ ಬೆಳೆಸಲು ನೆರವಾದರು. ಇಂಥ ಹಲವು ಸಮಾಜಗಳ ಮಠಗಳ ಉದಾಹರಣೆ ನಮ್ಮೆದುರಿಗೆ ಇವೆ. ಹಡಪದ ಅಪ್ಪಣ್ಣನವರ ಮಠವೂ ಅಷ್ಟು ಎತ್ತರಕ್ಕೆ ಬೆಳೆಯಲು ಎಲ್ಲರ ಸಹಕಾರ ಇರಬೇಕು ಎಂದರು.

ನೇತೃತ್ವ ವಹಿಸಿದ್ದ ಶ್ರೀಮಠದ ಪೀಠಾಧಿಪತಿ ಅನ್ನದಾನ ಭಾರತಿ ಅಪ್ಪಣ್ಣ ಸ್ವಾಮೀಜಿ ಮಾತನಾಡಿ, ಸಮಾಜದ ಬಂಧುಗಳಿಗೆ ಹಡಪದ ಅಪ್ಪಣ್ಣನವರ ಪೀಠದ ಮೇಲೆ ಲಕ್ಷ ಇರಬೇಕು. ಸಮಾಜದ ಎಲ್ಲರೂ ಸಹಕಾರ ಕೊಟ್ಟರೆ 8 ವರ್ಷದೊಳಗೆ ಇಡೀ ರಾಜ್ಯವೇ ಗುರುತಿಸುವಂಥ ಮಾದರಿ ಮಠವನ್ನಾಗಿ ಮಾಡಲು ನಾನು ಸಿದ್ಧನಿದ್ದೇನೆ ಎಂದರು.

ಸಮಾಜದ ಮುಖಂಡ ಎಚ್​.ಡಿ.ವೈದ್ಯ ಮಾತನಾಡಿದರು. ಸಂದ ರಾಜ್ಯ ಟಕದ ಅಧ್ಯ ಸಿದ್ದಣ್ಣ ಹಡಪದ ಅಧ್ಯತೆ ವಹಿಸಿದ್ದರು. ಬಸವಪ್ರಸಾದ ಸ್ವಾಮೀಜಿ, ಕೇಶವಾನಂದ ಸ್ವಾಮೀಜಿ, ಸಮಾಜದ ಪ್ರಮುಖರಾದ ಶಶಿಧರ ದಾವಣಗೆರೆ, ಈರಣ್ಣ ಬೆಳ್ಳಿಕಟ್ಟಿ, ವಿ.ಜಿ.ಕತ್ನಳ್ಳಿ, ನಾಗರಾಜ ಸರ್ಜಾಪುರ, ಮಂಜು ಕೊಪ್ಪಳ, ಕೀರಪ್ಪ ಹಡಪದ, ಸಂತೋಷ ಗೌಳಿ, ಹಣಮಂತರಾಯ ಗುಡದಿನ್ನಿ ಇತರರಿದ್ದರು.

ಕಾರ್ಯಕ್ರಮಕ್ಕೂ ಮುನ್ನ ಬಸವಪ್ರಿಯ ಅಪ್ಪಣ್ಣ ಸ್ವಾಮೀಜಿಯವರ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಅವರ ಭಾವಚಿತ್ರಕ್ಕೆ ಸ್ವಾಮೀಜಿಗಳಾದಿಯಾಗಿ ಗಣ್ಯರೆಲ್ಲರೂ ಪುಷ್ಪನಮನ ಸಲ್ಲಿಸಿದರು. ಓಂಕಾರ ನಾವಿ ಕಾರ್ಯಕ್ರಮ ನಿರ್ವಹಿಸಿದರು.