ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾ ಟೇಲರ್ಸ ಸದಸ್ಯರು ಗದಗ ನಗರದಲ್ಲಿ ಪ್ರತಿಭಟನೆ ನಡೆಸಿದರು. ಅಶ್ವಥ್​ ಸುಲಾಖೆ, ಶಿವಾಜಿಸಿಂಗ್​ ರಜಪೂತ, ರವಿಕಾಂತ ಅಂಗಡಿ, ಗವಿಸಿದ್ಧಯ್ಯ ಹಳ್ಳಿಕೇರಿಮಠ, ಮಾರುತಿ ಮಾದಗುಂಡಿ ಇತರರು ಇದ್ದರು. 
ಜಿಲ್ಲೆ

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾ ಟೇಲರ್ಸ ಸಂಘದದಿಂದ ಪ್ರತಿಭಟನೆ

Gadag - Shivanand Hiremath

ವಿಜಯವಾಣಿ ಸುದ್ದಿಜಾಲ ಗದಗ
ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾ ಟೇಲರ್ಸ ಸಂಘವು ಶುಕ್ರವಾರ ಪ್ರತಿಭಟನೆ ನಡೆಸಿತು.
ನಗರದ ಮುನ್ಸಿಪಲ್ ಹೈಸ್ಕೂಲ್​ ಮೈದಾನದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಬೃಹತ್​ ಮೆರವಣಿಗೆ ಕೈಗೊಂಡು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಬೇಡಿಕೆಗಳ ಈಡೇರಿಸುವಂತೆ ಆಗ್ರಹಿಸಿದರು.
ಜಿಲ್ಲೆಯಲ್ಲಿ ಮಹಿಳೆಯರು ಸೇರಿ 30 ಸಾವಿರಕ್ಕೂ ಹೆಚ್ಚು ಜನರು ಟೇಲರ್​ ಉದ್ಯೋಗದಲ್ಲಿ ತೊಡಗಿಕೊಂಡಿದ್ದಾರೆ. ಇವರಿಗೆ ಸಾಮಾಜಿಕ ಭದ್ರತೆ ಇಲ್ಲ. ಆಧುನಿಕತೆಯ ್ಯಾಶನ್​ ಹಾಗೂ ರೆಡಿಮೆಡ್​ದಿಂದಾಗಿ ಟೇಲರ್​ ವೃತ್ತಿ ಆಥಿರ್ಕ ಖಾತ್ರಿ ಇಲ್ಲದೇ ವಸತಿ, ಮಕ್ಕಳ ಶಿಣ, ಔಷದೋಪಚಾರ ಹಾಗೂ ವೃದ್ಧಾಪ್ಯದಲ್ಲಿ ಬದುಕಿಗೆ ಭದ್ರತೆ ಇಲ್ಲದೆ ಅಸಹಾಯಕ ಸ್ಥಿತಿಯಲ್ಲಿ ಬದುಕುವಂತಾಗಿದೆ. ಕೇರಳ ರಾಜ್ಯದಲ್ಲಿ 1994ರಲ್ಲಿಯೇ ಟೇಲರ್​ಗಳಿಗೆ ಭದ್ರತೆ ಕಲ್ಪಿಸಿದೆ. ಪ್ರತ್ಯೇಕ ಟೇರ್ಲಸ್​ ೇಮನಿಧಿ ನಿಗಮ ಮಂಡಳಿ ತೆರೆದು ಆ ಮೂಲಕ ಟೇಲರ್​ ವೃತ್ತಿಯಲ್ಲಿರುವವರಿಗೆ ಅನೇಕ ಸೌಲಭ್ಯಗಳನ್ನು ನೀಡುವ ಮೂಲಕ ಸಾಮಾಜಿಕ ಭದ್ರತೆಯನ್ನು ಕೇರಳ ರಾಜ್ಯ ಒದಗಿಸಿದೆ. ಅದೇ ಮಾದರಿಯಲ್ಲಿ ರಾಜ್ಯದಲ್ಲಿಯೂ ಇಂತಹ ಮಂಡಳಿ ಸ್ಥಾಪಿಸಿ ಸಾಮಾಜಿಕ ಭದ್ರತೆ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ತಾಲೂಕಗಳಲ್ಲಿ ಟೇರ್ಲಸ್​ ಭವನ ನಿಮಿರ್ಸಲು ಸರ್ಕಾರಿ ನಿವೇಶನ ಹಾಗೂ ಕಟ್ಟಡಕ್ಕೆ ಅನುದಾನ ನೀಡಬೇಕು.ಜಿಲ್ಲೆಯಲ್ಲಿ ಟೇಲರ್ಸ ಮಂಡಳಿ ಸ್ಥಾಪನೆ, ಪ್ರತಿ ಟೇಲರ್​ ಸದಸ್ಯನಿಗೆ ಮಂಡಳಿಯಿಂದ ಅನುದಾನ ಒದಗಿಸುವುದು, 60 ವರ್ಷ ಮೇಲ್ಪಟ್ಟ ಎಲ್ಲ ಟೇಲರ್ಸ​ಗಳಿಗೆ ಪ್ರತಿ ತಿಂಗಳು 3 ಸಾವಿರ ರೂ.ಗಳ ನಿವೃತ್ತಿ ವೇತನ ನೀಡಬೇಕು ಎಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್​ ಅವರು ಮುಂದಿನ ಕ್ರಮಕ್ಕೆ ಸರ್ಕಾರಕ್ಕೆ ಕಳುಹಿಸುವ ಭರವಸೆ ನೀಡಿದರು.
ಜಿಲ್ಲಾ ಟೇರ್ಲಸ್​ ೇಮಾಭಿವೃದ್ಧಿ ಸಂದ ಅಧ್ಯ ಅಶ್ವಥ್​ ಸುಲಾಖೆ, ಶಿವಾಜಿಸಿಂಗ್​ ರಜಪೂತ, ರವಿಕಾಂತ ಅಂಗಡಿ, ಗವಿಸಿದ್ಧಯ್ಯ ಹಳ್ಳಿಕೇರಿಮಠ, ಮಾರುತಿ ಮಾದಗುಂಡಿ, ವಿಜಯ ದೇಸಾಯಿ, ನಾಗರಾಜ ಶ್ಯಾವಿ, ನಾರಾಯಣ ಗೊಟೂರ, ನಾಗರಾಜ ಮಾದಗುಂಡಿ, ದ್ಯಾಮಣ್ಣ ಮಡಿವಾಳರ, ಆರ್​.ಎನ್​. ಮೇರಾಜ, ಮಾರುತಿ ಬೆಂಚಹಳ್ಳಿ ಹಲವರು ಇದ್ದರು.