ಕೊಪ್ಪಳದ ಜಾಗೃತಿ ಮಹಿಳಾ ಸ್ವಾವಲಂಬನ ಕೇಂದ್ರದಲ್ಲಿ ಹೊಲಿಗೆ ತರಬೇತಿ ಪಡೆದ 35 ಮಹಿಳೆಯರಿಗೆ ಸೇವಾ ಭಾರತಿ ಟ್ರಸ್ಟಿ ಬಸವರಾಜ ಡಂಬಳ ಟ್ರಸ್ಟಿ ಪ್ರಮಾಣ ಪತ್ರ ವಿತರಿಸಿದರು. ಸಮಿತಿಯ ಕಾರ್ಯದರ್ಶಿ ಮಹದೇವಪ್ಪ ಕೌಲಗಿ, ಮಹಿಳಾ ಸ್ವಾವಲಂಬನ ಕೇಂದ್ರದ ಸಂಯೋಜಕ ಬಸವರಾಜ ಸಮಗಂಡಿ,ಶ್ರೀನಿವಾಸ ದೇಸಾಯಿ,ದೀಪಾ ಕುಲಕರ್ಣಿ ಇದ್ದರು.  
ಜಿಲ್ಲೆ

ಹೊಲಿಗೆ ತರಬೇತಿ ಪ್ರಮಾಣ ಪತ್ರ ವಿತರಣೆ

ಕೊಪ್ಪಳ: ಲೋಕಹಿತ ಟ್ರಸ್ಟ್‌ನಿಂದ ಸೇವಾಭಾರತಿ ಸಹಯೋಗದಲ್ಲಿ ನಗರದ ಜಾಗೃತಿ ಮಹಿಳಾ ಸ್ವಾವಲಂಬನ ಕೇಂದ್ರದಲ್ಲಿ ಹೊಲಿಗೆ ತರಬೇತಿ ಪಡೆದ 35 ಮಹಿಳೆಯರಿಗೆ ಸೋಮವಾರ ಪ್ರಮಾಣ ಪತ್ರ ವಿತರಿಸಲಾಯಿತು.

ಸೇವಾಭಾರತಿ ಟ್ರಸ್ಟ್‌ನ ಬಸವರಾಜ ಡಂಬಳ ಮಹಿಳೆಯರಿಗೆ ಪ್ರಮಾಣ ಪತ್ರ ವಿತರಿಸಿದರು. ಲೋಕಹಿತ ಟ್ರಸ್ಟ್‌ನ ಪೂರ್ಣಾವಧಿ ಕಾರ್ಯಕರ್ತ ಸಂತೋಷ ಸ್ವಾವಲಂಬನ ಕೇಂದ್ರದ ಮಾಹಿತಿ ನೀಡಿದರು. ಸೇವಾಭಾರತಿ ಬಳ್ಳಾರಿ ವಿಭಾಗ ಸಂಯೋಜಕ ಪ್ರಾಣೇಶ ಜೋಷಿ ತರಬೇತಿ ಮಹತ್ವ ಮತ್ತು ಮುಂದಿನ ಕಾರ್ಯಕ್ರಮಗಳ ಮಾಹಿತಿ ನೀಡಿದರು.

ಸಮಿತಿಯ ಕಾರ್ಯದರ್ಶಿ ಮಹದೇವಪ್ಪ ಕೌಲಗಿ, ಮಹಿಳಾ ಸ್ವಾವಲಂಬನ ಕೇಂದ್ರದ ಸಂಯೋಜಕ ಬಸವರಾಜ ಸಮಗಂಡಿ,ಶ್ರೀನಿವಾಸ ದೇಸಾಯಿ, ವಿದ್ಯಾವಿಕಾಸ ಪ್ರಕಲ್ಪದ ಸಮಿತಿ ಸದಸ್ಯರಾದ ಅನಂತಮೂರ್ತಿ, ದೀಪಾ ಕುಲಕರ್ಣಿ ಇದ್ದರು.