ಜಿಲ್ಲೆ

ಟೈಲರ್ ವೃತ್ತಿಗೆ ಸಿಗಲಿ ಭದ್ರತೆ: ಪ್ರಜ್ವಲ್ ಕುಮಾರ್ ಆಗ್ರಹ

Avinash R

ವಿಜಯವಾಣಿ ಸುದ್ದಿಜಾಲ ಕಿನ್ನಿಗೋಳಿ

ಟೈಲರ್ಸ್‌ ವೃತ್ತಿದಾರರಿಗೆ ಸರಿಯಾದ ಭದ್ರತೆ ಇಲ್ಲ,. ನಿವೃತ್ತಿ ಹೊಂದಿದ ಟೈಲರ್ಸ್‌ಗೆ ಸರ್ಕಾರದಿಂದ ಮಾಸಾಶನ ಕೊಡಬೇಕು ಎಂದು ಕರ್ನಾಟಕ ಸ್ಟೇಟ್ ಟೈಲರ್ಸ್‌ ಅಸೋಸಿಯೇಶನ್ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರಜ್ವಲ್ ಕುಮಾರ್ ಹೇಳಿದರು.

ಕಿನ್ನಿಗೋಳಿಯಲ್ಲಿ ಕಿನ್ನಿಗೋಳಿ ಕರ್ನಾಟಕ ಸ್ಟೇಟ್ ಟೈಲರ್ಸ್‌ ಅಸೋಸಿಯೇಶನ್ ವಲಯ ಸಮಿತಿಯ 24ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಿನ್ನಿಗೋಳಿ ವಲಯ ಸಮಿತಿ ಅಧ್ಯಕ್ಷ ವಸಂತ ಸಪಳಿಗ ಅಧ್ಯಕ್ಷತೆ ವಹಿಸಿದ್ದರು. ಎನ್.ಐ.ಪಿ.ಎಂ. ಅಧ್ಯಕ್ಷ ಸ್ಟೀವನ್ ಪಿಂಟೋ, ಜಿಲ್ಲಾ ಸಮಿತಿ ಅಧ್ಯಕ್ಷ ಜಯಲಾಕ್ಷ ಕೋಟ್ಯಾನ್, ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಮೋಹನ್ ಎಸ್.ಕೋಡಿ, ಜಿಲ್ಲಾ ಸಮಿತಿ ಕೋಶಾಧಿಕಾರಿ ಚಕ್ರೇಶ್ ಅಮೀನ್, ಯುಗಪುರುಷದ ಭುವನಾಭಿರಾಮ ಉಡುಪ, ಕ್ಷೇತ್ರ ಸಮಿತಿ ಅಧ್ಯಕ್ಷ ಅಣ್ಣಪ್ಪ ಕೆ.ಎಸ್., ಕಿನ್ನಿಗೋಳಿ ಸಮಿತಿ ಗೌರವಾಧ್ಯಕ್ಷ ಶಂಕರ ಬಿ.ಕೋಟ್ಯಾನ್, ನಿಕಟಪೂರ್ವ ಅಧ್ಯಕ್ಷ ಪ್ರಭಾಕರ ಶೆಟ್ಟಿಗಾರ್, ಕಿನ್ನಿಗೋಳಿ ಸಮಿತಿ ಪ್ರಧಾನ ಕಾರ್ಯದರ್ಶಿ ಉಷಾ ಶೆಟ್ಟಿಗಾರ್, ಕೋಶಾಧಿಕಾರಿ ಸುನೀತಾ ಸುವರ್ಣ ಉಪಸ್ಥಿತರಿದ್ದರು.

ಈ ಸಂದರ್ಭ ನಿವೃತ್ತ ಟೈಲರ್ಸ್‌ ವೃತ್ತಿ ಬಾಂಧವರನ್ನು ಸಮಿತಿ ವತಿಯಿಂದ ಗೌರವಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ವಿವಿಧ ಆಟೋಟ, ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿ ಬಹುಮಾನ ವಿತರಣೆ ನಡೆಯಿತು. ಸಮಿತಿಯ ರಾಜಾರಾಮ ಕಾರ್ಯಕ್ರಮ ನಿರೂಪಿಸಿದರು. ಶಂಕರ ಬಿ.ಕೋಟ್ಯಾನ್ ವಂದಿಸಿದರು.