ಜಿಲ್ಲೆ

ಟೈಲರ್ ಅಸೋಸಿಯೇಷನ್ ಮಹಾಸಭೆ

ಇಂದಿರಾ ಎನ್ ಕೆ

ಕೋಟ: ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಷನ್ ಕೋಟ ಮತ್ತು ಸಾಲಿಗ್ರಾಮ ವಲಯ ಸಮಿತಿಯ ವಾರ್ಷಿಕ ಮಹಾಸಭೆ ಭಾನುವಾರ ಕೋಟ ಗ್ರಾಪಂ ಸಭಾಂಗಣದಲ್ಲಿ ನಡೆಯಿತು.

ಕೋಟ ವಲಯದ ಅಧ್ಯಕ್ಷ ಕೃಷ್ಣ ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಷನ್ ರಾಜ್ಯ ಸಮಿತಿ ಕಾರ್ಯದರ್ಶಿ ಶಾಂತ ಬಸ್ರೂರು ಉದ್ಘಾಟಿಸಿದರು. ಜಿಲ್ಲಾ ಸಮಿತಿ ಕಾರ್ಯದರ್ಶಿ ದಯಾನಂದ ಕೋಟ್ಯಾನ್ ಸ್ಮಾರ್ಟ್ ಕಾರ್ಡ್ ವಿತರಿಸಿದರು.

ಬ್ರಹ್ಮಾವರ ಕ್ಷೇತ್ರ ಸಮಿತಿ ಅಧ್ಯಕ್ಷ ನವೀನ್ ಬಿ.ರಾವ್, ಟೈಲರ್ ಅಸೋಸಿಯೇಷನ್ ಕೋಟ ವಲಯದ ಮಾಜಿ ಅಧ್ಯಕ್ಷ ಗಣೇಶ್ ಪೂಜಾರಿ, ಸಂಸ್ಥೆ ಹಿರಿಯರಾದ ವಿಶ್ವನಾಥ್ ಜತ್ತನ್, ಪರಮೇಶ್ವರ ಗಾಣಿಗ ಉಪಸ್ಥಿತರಿದ್ದರು. ಮಾಜಿ ಕಾರ್ಯದರ್ಶಿ ಅವಿನಾಶ್ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಸತೀಶ್ ಪೂಜಾರಿ ವಂದಿಸಿದರು.