ಕುಶಾಲನಗರ:
ಟೈಲರ್ ವೃತ್ತಿ ಅವಲಂಬಿಸಿರುವ ಜನರನ್ನು ಅಸಂಘಟಿತ ಕಾರ್ಮಿಕ ವಲಯಕ್ಕೆ ಸರ್ಕಾರ ಸೇರ್ಪಡೆ ಮಾಡಿದ್ದು, ಅಸಂಘಟಿತ ಕಾರ್ಮಿಕರ ಶ್ರೇಯೋಭಿವೃದ್ಧಿಗೆ ಜಾರಿಗೆ ತಂದಿರುವ ಯೋಜನೆಗಳನ್ನು ಟೈಲರ್ ವೃತ್ತಿ ಬಾಂಧವರು ಸದುಪಯೋಗ ಪಡಿಸಿಕೊಂಡು ತಮ್ಮ ಜೀವನ ಮಟ್ಟ ಅಭಿವೃದ್ಧಿ ಪಡಿಸಿಕೊಳ್ಳಬೇಕು ಎಂದು ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್ ಕೊಡಗು ಘಟಕದ ಜಿಲ್ಲಾಧ್ಯಕ್ಷ ಶೇಖ್ ಅಹಮ್ಮದ್ ಹೇಳಿದರು.
ಇಲ್ಲಿನ ಕೊಡವ ಸಮಾಜದ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಕರ್ನಾಟಕ ಟೈಲರ್ಸ್ ಅಸೋಸಿಯೇಷನ್ ಕುಶಾಲನಗರ ವಲಯ ಸಮಿತಿ ವಾರ್ಷಿಕೋತ್ಸವ ಹಾಗೂ ಸರ್ವ ಸದಸ್ಯರ ಸಭೆ ಉದ್ಘಾಟಿಸಿ ಮಾತನಾಡಿದರು.
ಟೈಲರ್‌ಗಳ ಬೇಡಿಕೆ ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಲು ಸಂಘಟಿತ ಹೋರಾಟ ನಡೆಸಬೇಕು. ಹೊಲಿಗೆ ಕೆಲಸದಿಂದ ಜೀವನ ಸಾಗಿಸುತ್ತಿರುವ ಸಾವಿರಾರು ಕುಟುಂಬ ಜೀವನ ಭದ್ರತೆ ಒದಗಿಸಲು ಟೈಲರ್ ಕ್ಷೇಮಾನಿಧಿ ಮಂಡಳಿ ರಚಿಸಬೇಕು. ಕರ್ನಾಟಕ ಟೈಲರ್ಸ್ ಅಸೋಸಿಯೇಷನ್ ಟೈಲರ್ ವೃತ್ತಿಯಲ್ಲಿರುವ ಜನರು ಹಿತಶಕ್ತಿಗಾಗಿ ಕೆಲಸ ಮಾಡುತ್ತಿದೆ. ಕೆಲವು ಜನರು ಸುಳ್ಳು ಮಾಹಿತಿ ನೀಡಿ ಸರ್ಕಾರದ ಸೌಲಭ್ಯ ಪಡೆಯುತ್ತಿದ್ದಾರೆ. ಈ ಬಗ್ಗೆ ಸಂಘ ಅಂತಹ ವ್ಯಕ್ತಿಗಳನ್ನು ಗುರುತಿಸಿ ಕಾನೂನು ಕ್ರಮಕ್ಕೆ ಒತ್ತಾಯಿಸುತ್ತದೆ ಎಂದರು.
ಕೆ.ಎಸ್.ಟಿ.ಎA. ರಾಜ್ಯ ಸಂಘಟನಾ ಕಾರ್ಯದರ್ಶಿ ಹಾಗೂ ಕುಶಾಲನಗರ ವಲಯ ಸಮಿತಿ ಗೌರವಾಧ್ಯಕ್ಷ ಕೆ.ಎಂ. ವಿಜಯ್ ಮಾತನಾಡಿ ಸಂಘಟಿತರಾಗುವ ಮೂಲಕ ಎಲ್ಲರೂ ತಮ್ಮ ಬೇಡಿಕೆ ಈಡೇರಿಸಿಕೊಳ್ಳಲು ಮುಂದಾಗಬೇಕು. ಟೈಲರ್‌ಗಳ ಭವಿಷ್ಯ ಸುಭದ್ರವಾಗಿರಲು ಹೋರಾಟ ಅಗತ್ಯ ಎಂದರು.
ಮಡಿಕೇರಿ ಕೆ.ಎಸ್.ಟಿ.ಎಂ. ಕ್ಷೇತ್ರ ಸಮಿತಿ ಅಧ್ಯಕ್ಷ ಸಜೀವ, ಸೋಮವಾರಪೇಟೆ ವಲಯ ಸಮಿತಿ ಅಧ್ಯಕ್ಷೆ ಇಂದಿರಾಮೊಣ್ಣಪ್ಪ, ಮಾದಾಪುರ ವಲಯ ಸಮಿತಿ ಅಧ್ಯಕ್ಷ ಅನಿಷ್, ಮಡಿಕೇರಿ ವಲಯ ಸಮಿತಿ ಅಧ್ಯಕ್ಷ ಸುರೇಶ್ ರೈ, ವಿರಾಜಪೇಟೆ ವಲಯ ಸಮಿತಿ ಅಧ್ಯಕ್ಷೆ ಪೊನ್ನಕ್ಕಿ, ನಾಪೋಕ್ಲು ಸಮಿತಿ ಅಧ್ಯಕ್ಷ ಸ್ಟಿಪನ್, ಭಾಗಮಂಡಲ ಸಮಿತಿ ಅಧ್ಯಕ್ಷ ನಾಗೇಂದ್ರ, ಮೂರ್ನಾಡು ಸಮಿತಿ ಅಧ್ಯಕ್ಷ ಅಜರುದ್ದೀನ್, ಪೊನ್ನಂಪೇಟೆ ಸಮಿತಿ ಅಧ್ಯಕ್ಷ ಗಿರೀಶ್, ಕುಶಾಲನಗರ ವಲಯ ಸಮಿತಿ ಉಪಾಧ್ಯಕ್ಷ ನಾಗರಾಜು, ಉಪಾಧ್ಯಕ್ಷೆ ವಸಂತಿ ಬೋಜ, ಪ್ರಧಾನ ಕಾರ್ಯದರ್ಶಿ ಸಂಧ್ಯಾಕಾವೇರಪ್ಪ, ಸಹಕಾರ್ಯದರ್ಶಿ ಸ್ವಪ್ನ, ಖಜಾಂಜಿ ಪೈರೋಜ್‌ಅಹಮ್ಮದ್, ಸಂಘಟನಾ ಕಾರ್ಯದರ್ಶಿ ಜಯಂತ್, ಸಲಹೆಗಾರÀ ರೊನಾಲ್ಡ್, ನಿಸಾರ್‌ಅಹಮ್ಮದ್, ಸದಸ್ಯರಾದ ಕೃಷ್ಣ, ಭಾಷ, ಸತೀಶ್, ಹರಿಣಿ, ಸರಸ್ವತಿ, ಕಾಂಚನವಾಸು, ಬಾನು, ಅಲ್ಲಾವುದ್ದೀನ್ ಪಾಲ್ಗೊಂಡಿದ್ದರು.